ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಜಾಗತಿಕ ಹವಾಮಾನ ಗಡಿಯಾರ ಮತ್ತು ಸ್ಮಾರ್ಟ್ ಟಿವಿ ಉದ್ಘಾಟನೆ

0

ಶ್ರೀ ರಾಮಕೃಷ್ಣ ಸಂಸ್ಥೆಯಿಂದ ವಿಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ- ಕಾವು ಹೇಮನಾಥ ಶೆಟ್ಟಿ

ಪುತ್ತೂರು: ನವದೆಹಲಿಯ ಇಂದಿರಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎನರ್ಜಿ ಸ್ವರಾಜ್ ಫೌಂಡೇಶನ್ ಅಟಲ್ ಇನ್ನೋವೇಶನ್ ಮಿಷನ್ (NITI AAyog) ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ಸಹಯೋಗದೊಂದಿಗೆ `ಮದರ್ ಅರ್ಥ್ ಡೇ’ ವಿಶೇಷ ದಿನವಾದ ಎ. 22 ರಂದು ಜರಗಿದ ವಿಶ್ವದ ಅತಿದೊಡ್ಡ ಜಾಗತಿಕ ಹವಾಮಾನ ಗಡಿಯಾರ ಜೋಡನೆ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 6 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಶ್ವ ದಾಖಲೆ ನಿರ್ಮಿಸಿದಂತಹ ಈ ಜಾಗತಿಕ ಹವಾಮಾನ ಗಡಿಯಾರ ಮತ್ತು ಸ್ಮಾರ್ಟ್ ಟಿವಿ ಉದ್ಘಾಟನೆ ಕಾರ್ಯಕ್ರಮವು ಮೇ 16 ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಿತು..


ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆಗೈದು ಮಾತನಾಡಿ ನಮ್ಮ ಸಂಸ್ಥೆಯ 22 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇದೀಗ ಜಗತ್ತಿನ ಹವಾಮಾನವನ್ನು ಅಳತೆ ಮಾಡುವ ಗಡಿಯಾರ ಜೋಡಣೆಯಲ್ಲಿ ನಮ್ಮ ಸಂಸ್ಥೆಯ 6 ವಿದ್ಯಾರ್ಥಿಗಳು ಭಾಗವಹಿಸಿ, ಸಂಸ್ಥೆಗೆ ಮತ್ತು ಸಮಾಜಕ್ಕೆ ಹೆಸರನ್ನು ತಂದಿದ್ದಾರೆ ಎಂದು ಹೇಳಿದರು. ಪ್ರಸ್ತುತ ಸಮಾಜದಲ್ಲಿ ಕೆಲವೊಂದು ಶಿಕ್ಷಣ ಸಂಸ್ಥೆಗಳು ಟಾಪರ್ ಅಂಕ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಸಂಸ್ಥೆಗೆ ದಾಖಲಾತಿ ಮಾಡುತ್ತಾರೆ, ಆದರೆ ನಾವು ನಮ್ಮ ಸಂಸ್ಥೆಗೆ 8 ನೇ ತರಗತಿಗೆ ಸೇರಲು ಬಯಸುವ ವಿದ್ಯಾರ್ಥಿಗೆ ನಾವು ಅಂಕವನ್ನು ಮಾನ ದಂಡವಾಗಿ ಮಾಡದೇ ಕನಿಷ್ಠ ಅಂಕ ಇದ್ದರೂ ದಾಖಲಾತಿ ಮಾಡಿ, ಆ ವಿದ್ಯಾರ್ಥಿಯನ್ನು ಕಲಿಕೆಯಲ್ಲಿ ಮುಂದೆ ತರುವ ಎಲ್ಲಾ ಪ್ರಯತ್ನ ಮಾಡಿ ಯಶಸ್ಸು ಸಾಧಿಸಿದ ಸಂಸ್ಥೆ ರಾಮಕೃಷ್ಣ ಆಗಿದೆ ಎಂಬುದು ಉಲ್ಲೇಖನೀಯ ಎಂದು ಉದಾಹರಣೆ ಸಹಿತ ವಿವರಿಸಿದರು.


ಸಂತೋಷವಾಗಿದೆ-ಅರುಣ್
ಹವಾಮಾನ ಗಡಿಯಾರದ ಉದ್ಘಾಟನೆಗೈದ ಎನ್.ಐ.ಟಿ.ಕೆ. ರಸಾಯನಶಾಸ್ತ್ರದ ಪ್ರೊಫೆಸರ್ ಅರುಣ್ ಎಂ ಇಸ್ಲೂರುರವರು ಮಾತನಾಡಿ ಶ್ರೀ ರಾಮಕೃಷ್ಣ ಸಂಸ್ಥೆಯ ಸಾಧನೆಯನ್ನು ಕಂಡು ತುಂಬಾ ಸಂತೋಷವಾಗಿದೆ ಎಂದರು.


ಗೌರವ ತಂದಿದೆ- ಲೋಕೇಶ್
ಸ್ಮಾರ್ಟ್ ಟಿ.ವಿಯ ಉದ್ಘಾಟನೆಗೈದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್.ಆರ್‌ರವರು ಮಾತನಾಡಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಾಧನೆಯು ಇಲಾಖೆಗೆ ಗೌರವ ತಂದಿದೆ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇದರ ಉಪನ್ಯಾಸಕರು ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್‌ನ ಜಿಲ್ಲಾ ನೋಡಲ್ ಅಧಿಕಾರಿಗಳಾದ ವೇದಾವತಿ ಬಿ ಕೆ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹರೀಶ್ ಶಾಸ್ತ್ರಿ ಬಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ಶಿಕ್ಷಣ ಸಂಯೋಜಕ ಹರಿಪ್ರಸಾದ್, ತಾಲೂಕು ಅಕ್ಷರ ದಾಸೋಹದ ನಿರ್ದೇಶಕ ವಿಷ್ಣುಪ್ರಸಾದ್, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ. ಶ್ರೀಪ್ರಕಾಶ್‌ರವರುಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ನಿರ್ದೇಶಕರುಗಳಾದ ಕುಂಬ್ರ ದುರ್ಗಾಪ್ರಸಾದ್ ರೈ, ರಮೇಶ್ ರೈ ಸಾಂತ್ಯ, ಸಾಮಾಜಿಕ ಮುಂದಾಳು ರವಿಪ್ರಸಾದ್ ಶೆಟ್ಟಿ ಬನ್ನೂರು ಸಹಿತ ಶಾಲಾ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿ, ಶಿಕ್ಷಕಿ ಗಾಯತ್ರಿ ವಂದಿಸಿದರು. ವಿದ್ಯಾರ್ಥಿನಿ ಅವನಿ ನಾಯಕ್ ಪ್ರಾರ್ಥನೆಗೈದರು. ಶಿಕ್ಷಕಿಯರಾದ ಆಶ್ವಿನಿ ಮತ್ತು ಚೈತ್ರಾ ಕಾರ್‍ಯಕ್ರಮ ನಿರೂಪಿಸಿದರು.

ಸನ್ಮಾನ ಸಮಾರಂಭ
ನವ ದೆಹಲಿಯಲ್ಲಿ ಜರಗಿದ ವಿಶ್ವದ ಅತಿದೊಡ್ಡ ಜಾಗತಿಕ ಹವಾಮಾನ ಗಡಿಯಾರ ಜೋಡನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 6 ವಿದ್ಯಾರ್ಥಿಗಳಾದ 10ನೇ ತರಗತಿಯ ಕಾರ್ತಿಕೇಯ ವಾಗ್ಲೆ (ಮಂಜಲಡ್ಪು ಶ್ರೀಪ್ರಕಾಶ್ ವಾಗ್ಳೆ ಬಿ ಮತ್ತು ಸುಲೋಚನ ಎಸ್‌ರವರ ಪುತ್ರ), ಶ್ರೀವತ್ಸ ಬಿ (ಬನ್ನೂರು ಮಂಜುನಾಥಯ್ಯ ಬಿ ಮತ್ತು ಮೀನಾಕ್ಷಿ ಬಿರವರ ಪುತ್ರ), ಕಷೀಶ್ ಪಿ ಎಸ್ (ಚಿಕ್ಕಪುತ್ತೂರು ಸತೀಶ್ ಪಿ ಮತ್ತು ರಂಜಿನಿ ಎರವರ ಪುತ್ರಿ), ಪ್ರಕೃತಿ ವಿ ರೈ (ಪಾಂಗ್ಲಾಯಿ ವಿಠಲ ರೈ ಎ ಮತ್ತು ಚಿತ್ರಾ ರೈ ಎಸ್‌ರವರ ಪುತ್ರಿ), 9ನೇ ತರಗತಿಯ ಅಕ್ಷಯ್ ಗಣೇಶ್ ಕೆ (ವರ್ಕಾಡಿ ರಘುರಾಮ ಎಸ್ ಮತ್ತು ವೈಶಾಲಿ ಎಂ ಆರ್‌ರವರ ಪುತ್ರ), ಪ್ರಖ್ಯಾತ್ ಡಿ ರೈ (ನಿಡ್ಪಳ್ಳಿ ಹೊಸಮನೆ ದಯಾನಂದ ರೈ ಮತ್ತು ಪ್ರತಿಭಾ ಕುಮಾರಿ ಪಿ ರವರ ಪುತ್ರ) ಹಾಗೂ ಮಾರ್ಗದರ್ಶಕ ಮತ್ತು ಅಟಲ್ ಮೆಂಟರ್ ಆಗಿದ್ದ ಕಾವು ರಂಜಿತಾ ಹೆಚ್ ಶೆಟ್ಟಿರವರ ಅನುಪಸ್ಥಿತಿಯಲ್ಲಿ ಅವರ ತಂದೆ ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಇದೇ ವೇಳೆ 2022-23 ಸಾಲಿನಲ್ಲಿ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here