ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಬಾರಿಕೆ ಮನೆಯ ದಿ.ಸುಬ್ರಾಯ ರಾವ್ ಅವರ ಪತ್ನಿ ಲೀಲಾವತಿ ಭಟ್ (96ವ) ಮೆ 17ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಾಟಿವೈದ್ಯೆಯಾಗಿ ಚಿರಪರಿಚಿತರು. ಕಫ ಸಮಸ್ಯೆ, ಟೈಪರ್ಡ್ ಜ್ವರ ಸೇರಿದಂತೆ ಹಲವು ತೊಂದರೆಗಳಿಗೆ ಅವರು ನೀಡುತ್ತಿದ್ದ ಔಷಧಿ ರಾಮಬಾಣವಾಗಿ ಕೆಲಸ ಮಾಡುತ್ತಿತ್ತು. ಸಾವಿರಾರು ಮಂದಿ ಅವರ ನಾಟಿವೈದ್ಯ ಪದ್ದತಿ ಚಿಕತ್ಸೆಯಿಂದ ಗುಣಮುಖರಾಗಿದ್ದಾರೆ. ಮೃತರು ಪುತ್ರರಾದ ಮುರಳೀಧರ್ ರಾವ್, ರಘುವೀರ ರಾವ್ ಮತ್ತು ಒಬ್ಬರು ಪುತ್ರಿಯನ್ನು ಅಗಲಿದ್ದಾರೆ.