ರಾಮಕುಂಜ: ಎಂ.ಕಾಂ ರ‍್ಯಾಂಕ್ ವಿಜೇತ ಹಿರಿಯ ವಿದ್ಯಾರ್ಥಿನಿಯರಿಗೆ ಸನ್ಮಾನ

0

ರಾಮಕುಂಜ: ರಾಮಕುಂಜೇಶ್ವರ ಮಹಾವಿದ್ಯಾಲಯದ ಹಳೆವಿದ್ಯಾರ್ಥಿನಿಯರಾಗಿದ್ದು ಮಂಗಳೂರು ವಿಶ್ವವಿದ್ಯಾಲಯದ ಎಂ.ಕಾಂ.ಪರೀಕ್ಷೆಯಲ್ಲಿ 4ನೇ ರ‍್ಯಾಂಕ್ ಪಡೆದುಕೊಂಡ ಶ್ಲಾಘ್ಯ ಅಳ್ವ ಹಾಗೂ 5ನೇ ರ‍್ಯಾಂಕ್ ಪಡೆದುಕೊಂಡ ಚೈತ್ರ ಬಿ. ಇವರನ್ನು ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸನ್ಮಾನಿಸಿದರು.

ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ, ಆಡಳಿತ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಸಂಚಾಲಕರಾದ ಟಿ.ನಾರಾಯಣ ಭಟ್, ಖಜಾಂಜಿ ಸೇಸಪ್ಪ ರೈ, ಸದಸ್ಯ ಮಾಧವ ಆಚಾರ್, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ, ಪ್ರಾಂಶುಪಾಲ ಗಣರಾಜ ಕುಂಬ್ಳೆ, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ಸ್ವಪ್ನ, ಕಾರ್ಯದರ್ಶಿ ಪವನ್ ಕುಮಾರ್, ಜೊತೆ ಕಾರ್ಯದರ್ಶಿ ಶ್ರದ್ಧಾ ಯು. ಎಸ್., ಕ್ರೀಡಾ ಕಾರ್ಯದರ್ಶಿ ಪ್ರಜ್ವಲ್, ಸಾಂಸ್ಕೃತಿಕ ಕಾರ್ಯದರ್ಶಿ ಮೋಕ್ಷಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ದಿವಾಕರ್ ವಂದಿಸಿದರು. ಉಪನ್ಯಾಸಕ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಶಿವಪ್ರಸಾದ್, ಜಯಶ್ರೀ, ಸವಿತಾ, ಸವಿತ ಪಿ. ಸಹಕರಿಸಿದರು.

LEAVE A REPLY

Please enter your comment!
Please enter your name here