ಉಪ್ಪಿನಂಗಡಿ: ಮಳೆಗಾಲದ ಸಮಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡಕ್ಕೆ ಹೊಸ ರಬ್ಬರ್ ದೋಣಿ ಹಾಗೂ ಪೆಟ್ರೋಲ್ ಚಾಲಿತ ಎಂಜಿನ್ ಅನ್ನು ನೀಡಲಾಯಿತು.
ಮಂಗಳೂರಿನ ಜಿಲ್ಲಾ ಗೃಹ ರಕ್ಷಕದಳದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿಮೋಹನ್ ಚೂಂತಾರು ಹಾಗೂ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಅವರು ಉಪ್ಪಿನಂಗಡಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಅವರಿಗೆ ಎಂಜಿನ್ ಹಾಗೂ ದೋಣಿಯನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭ ಡೆಪ್ಯೂಟಿ ಕಮಾಂಡೆಂಟ್ ರಮೇಶ್, ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಮಂಜುನಾಥ್, ಹ್ಯಾರೀಸ್, ದಿವಾಕರ, ಸುನೀಲ್ ಉಪಸ್ಥಿತರಿದ್ದರು.
ಈ ಪೆಟ್ರೋಲ್ ಎಂಜಿನ್ ಚಾಲಿತ ರಬ್ಬರ್ ದೋಣಿ 10 ಜನರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ನೆರೆ ಬಾಧಿತ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ಗೃಹ ರಕ್ಷಕದಳದ ಪ್ರವಾಹ ರಕ್ಷಣಾ ತಂಡದಲ್ಲಿ ಈ ಮೊದಲು ಜಿಲ್ಲಾಡಳಿತ ನೀಡಿದ ರಬ್ಬಲ್ ದೋಣಿ ಹಾಗೂ ಸೀಮೆ ಎಣ್ಣೆ ಚಾಲಿತ ಎಂಜಿನ್ ಹಾಗೂ ಪ್ರವಾಹ ರಕ್ಷಣಾ ಕಾರ್ಯಕ್ಕೆ ಬೇಕಾದ ಹಲವು ರಕ್ಷಣಾ ಸಾಮಗ್ರಿಗಳು ಇವೆ.