ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

0

ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ.22 ರಂದು ರೋಟರಿ ಕ್ಯಾಂಪ್ಕೋ ಬ್ಲೆಡ್ ಸೆಂಟರ್ ಪುತ್ತೂರು ಹಾಗೂ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೊವರ್ಸ್-ರೆಂಜರ್ಸ್ ಮತ್ತು‌ IQAC ಘಟಕಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದ ಅದ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಅಪ್ಪು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇದರ ವೈದ್ಯಾಧಿಕಾರಿ, ರಾಮಚಂದ್ರ ಭಟ್ ನೆರವೇರಿಸಿ, ರಕ್ತದಾನದ ಮಹತ್ವವನ್ನು ಮತ್ತು ಅಗತ್ಯತೆಯನ್ನು ವಿವರಿಸಿದರು. ರೆಡ್ ಕ್ರಾಸ್ ಘಟಕದ ಸಂಚಾಲಕ, ಅರ್ಥಶಾಸ್ತ್ರ ಉಪನ್ಯಾಸಕ ಕೇಶವ ಪ್ರಾಸ್ತಾವಿಕವಾಗಿ ಮಾತನಾಡಿದರು. IQAC ಘಟಕದ ಸಂಚಾಲಕರಾದ ಹರೀಶ್ ನಾಯಕ್ ರಕ್ತದಾನದ ಪ್ರಸ್ತುತ ಉಪಯೋಗವನ್ನು ವಿವರಿಸಿದರು. ಪ್ರಾಂಶುಪಾಲರು ಅಧ್ಯಕ್ಷಿಯ ನುಡಿಯಲ್ಲಿ ರಕ್ತದಾನ ಇನ್ನೊಂದು ಮಹತ್ವ ಜೀವವನ್ನು ಉಳಿಸಲು ನೆರವಾಗುತ್ತದೆ ಎಂದರು.

ವಿದ್ಯಾರ್ಥಿ ಮಲ್ಲಿಕಾ (ತೃತೀಯ ಬಿ.ಎ) ಸ್ವಾಗತಿಸಿದರು. ರೆಡ್ ಕ್ರಾಸ್ ಘಟಕದ ನಾಯಕ ಹರ್ಷಿತ್ ಕುಮಾರ್ (ತೃತೀಯ ಬಿ.ಎ) ವಂದಿಸಿದರು. ಚಿರಾಕ್ಷಿ (ದ್ವಿತೀಯ ಬಿ.ಕಾಂ) ಕಾರ್ಯಕ್ರಮವನ್ನು ನಿರೂಪಿದರು. ಹಲವಾರು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ವೃಂದ, ವಿದ್ಯಾರ್ಥಿ ನಾಯಕ ವಿನೀತ್ ತೃತೀಯ ಬಿ ಎ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here