ಬಹುಮುಖ ಶ್ರೇಷ್ಠತೆಯ ಆಂಗ್ಲಮಾಧ್ಯಮ ಪ್ರೌಢಶಾಲೆ- ವಿಟ್ಲ ಪರಿಸರದಲ್ಲಿ ಶೈಕ್ಷಣಿಕ ಛಾಪು ಮೂಡಿಸಿರುವ ವಿಠ್ಠಲ್ ಜೇಸಿ ಶಾಲೆ

0

37 ನೇ ವರ್ಷದ ಶೈಕ್ಷಣಿಕ ಯಾನ ಮಾಡುತ್ತಿರುವ ವಿಟ್ಲ ಬಸವನಗುಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಒಂದು ಗುಣಾತ್ಮಕ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಂದ ತೇರ್ಗಡೆಯಾಗಿ ಹೋದ ವಿದ್ಯಾರ್ಥಿಗಳು ಪ್ರತಿ ವರ್ಷ ಒಂದಲ್ಲ ಒಂದು ಕ್ಷೇತ್ರದಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಳ್ಳುತಿರುವುದು ಇದಕ್ಕೆ ಸಾಕ್ಷಿ ಎಂಬಂತಿದೆ. ಸುದೀರ್ಘ ಸಾಧನೆ ಎಂಬಂತೆ ಎಸ್ ಎಸ್ ಎಲ್ ಸಿ ಯಲ್ಲಿ ಸತತ 20ನೇ ಬಾರಿ 100 ಶೇಕಡ ದಾಖಲೆಯ ಫಲಿತಾಂಶ ಪಡೆದುದಲ್ಲದೆ ಕಳೆದ ಕೆಲವು ವರ್ಷಗಳಲ್ಲಿ ರಾಜ್ಯಕ್ಕೆ ಪ್ರಥಮ /ದ್ವಿತೀಯ ಸ್ಥಾನವನ್ನೂ ಪಡೆದಿರುವ‌ ಈ ಶಿಕ್ಷಣ ಸಂಸ್ಥೆ ನಡೆದು ಬಂದ‌ ಹಾದಿ, ಸೌಲಭ್ಯಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ…


ಪ್ರಸ್ತುತ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯು ಎರಡೂವರೇ ವರ್ಷದಿಂದ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ನೀಡುತ್ತಾ ಸುಮಾರು 1350 ವಿದ್ಯಾರ್ಥಿಗಳನ್ನೊಳಗೊಂಡಿರುವುದು ಗಮನಾರ್ಹ. ಸರಕಾರದ ನಿಯಮದಂತೆ 4 ವರ್ಷ ಮೇಲ್ಪಟ್ಟ ಮಗು LKG ದಾಖಲಾತಿ ಪಡೆಯುತ್ತಿದೆ. ಅಲ್ಲದೆ 4 ವರ್ಷದಿಂದ ಕೆಳಗಿನ ಹಾಗೂ 2.6 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆಂದೇ ಶಿಶು ಕೇಂದ್ರವು ಸುಸಜ್ಜಿತ ವಿಶಾಲ ಕೊಠಡಿ, ಮಕ್ಕಳ ನಲಿ ಕಲಿಕೆಗೆ ಸ್ಮಾರ್ಟ್ ಟಿವಿ ಅಳವಡಿಸಲಾಗಿದ್ದು ಆಂತರಿಕ ಹಾಗೂ ಬಾಹ್ಯ ಆಟಿಕೆ ಸಾಮಗ್ರಿಗಳು ಹಾಗೂ ಮೀನುಗಳು , ಪಕ್ಷಿಗಳ ಕಲರವ, ಬಣ್ಣಬಣ್ಣದ ಚಿತ್ರಗಳ ಜೊತೆ ಆನಂದಿಸುವ ವಾತಾವರಣ ಸೃಷ್ಟಿಸಲಾಗಿದೆ. ಉಪಹಾರ, ಶಿಶು ಭೋಜನ ವಿರಾಮವನ್ನು ವ್ಯವಸ್ಥೆ ಮಾಡಲಾಗಿದೆ.ಇದು ಔದ್ಯೋಗಿಕ ಪೋಷಕರಿಗೆ ನೆರವಾಗಲಿದೆ. LKG ವಿದ್ಯಾರ್ಥಿಗಳಿಗಾಗಿ ನುರಿತ ಶಿಕ್ಷಕರ ಸಮೂಹ, ಆಂಗ್ಲ ಭಾಷಾ ಬೆಳವಣಿಗೆಗೆ ಲೀಡ್ಸ್ ಪಠ್ಯಕ್ರಮ, ಹಿಂದಿ, ಚಿತ್ರಕಲೆ ಇತ್ಯಾದಿಗಳು ಮಕ್ಕಳನ್ನು ಆಧುನಿಕ ವ್ಯವಸ್ಥೆಗೆ ಸಿದ್ದ ಗೊಳಿಸುವಲ್ಲಿ ಪ್ರಯತ್ನಿಸಲಾಗಿದೆ. ಈ ಮೇಲಿನ ಎರಡೂ ವಿಭಾಗಕ್ಕೂ ಕ್ಷಿಪ್ರವಾಗಿ ಸೀಟುಗಳು ತುಂಬುತ್ತಿದ್ದು ಕೆಲವೇ ಸೀಟುಗಳು ಉಳಿದಿರುವುದೆಂದು ತಿಳಿಸಲು ಸಂತಸ ಪಡುತ್ತೇವೆ.


ಹಳ್ಳಿಯ ಸೊಗಡನ್ನು ಉಳಿಸುತ್ತಾ,ಹಸಿರು ಸಿರಿಯಿಂದ ಕಂಗೊಳಿಸುವ ಶಾಲಾ ಪರಿಸರವು ಮಕ್ಕಳ ಕಲಿಕೆಗೆ ಮಾತ್ರ ಪ್ರೋತ್ಸಾಹವನ್ನು ನೀಡದೆ, ಸಹಪಠ್ಯ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಇನ್ನಿತರ ಚಟುವಟಿಕೆಗಳಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ.
ಈ ಶಾಲಾ ಪರಿಸರವು ಮಾನವೀಯ ಮೌಲ್ಯಗಳಾದ ನಂಬಿಕೆ, ಸಹಕಾರ, ಸೌಹಾರ್ದತೆ, ಕರುಣೆ, ಶಾಂತಿ, ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಬೆಳೆಸುವಲ್ಲಿ ಶಿಕ್ಷಕರು ಅವಿರತ ಶ್ರಮಿಸುತ್ತಿದ್ದಾರೆ.


ಒಳಾಂಗಣ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಸಜ್ಜಿತವಾದ ಸಭಾಂಗಣವನ್ನು ಕಳೆದ ವರ್ಷ ನಿರ್ಮಿಸಲಾಗಿದ್ದು , ಅನೇಕ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಸುಸಜ್ಜಿತವಾದ ವಿಜ್ಞಾನ ಮತ್ತು ಸಮಾಜ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ.
ಇಂದಿನ ಕಂಪ್ಯೂಟರ್ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ನುರಿತ ಅನುಭವಿ ಶಿಕ್ಷಕರಿಂದ ಕಂಪ್ಯೂಟರ್ ಕೋಡಿಂಗ್ ಸಿಸ್ಟಮ್ ನ್ನು(CCS) ಗಣಕಶಾಸ್ತ್ರ ಶಿಕ್ಷಣದಲ್ಲಿ ಅಳವಡಿಸಲಾಗಿದೆ. ರೋಬೋಟಿಕ್ಸ್ ತಂತ್ರಜ್ಞಾನದ ಅಳವಡಿಕೆಗೆ ಪ್ರಯತ್ನ ನಡೆಯುತ್ತಿದೆ.ಆರೋಗ್ಯವೇ ಭಾಗ್ಯ ‘ಎನ್ನುವ ನಾಣ್ಣುಡಿಯಂತೆ ಸುಸಜ್ಜಿತವಾದ ಪಾಕ ಶಾಲೆಯ ಮೂಲಕ ಪೌಷ್ಟಿಕಾಂಶ ಯುಕ್ತವಾದ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯ ಪ್ರದೇಶಗಳಿಂದ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳ ಅಸೌಖ್ಯತೆಗೆ ವಿದ್ಯಾರ್ಥಿ ಕ್ಷೇಮ ನಿಧಿಗಳು ನಿಶ್ಯಬ್ದವಾಗಿ ಕಾರ್ಯಾಚರಿಸುತಿದೆ ಎಂದು ತಿಳಿಸಲು ಸಂತಸಪಡುತಿದೆ.

ವಿದ್ಯಾರ್ಥಿ ಶುಲ್ಕವು ವಾರ್ಷಿಕವಾಗಿ ಎಲ್ಲಾ ಚಟುವಟಿಗಳ ಮೊತ್ತವಾಗಿದ್ದು ಇದನ್ನು ಪೋಷಕರ ಅನುಕೂಲಕ್ಕೆ ಪ್ರಥಮ ಮತ್ತು ದ್ವಿತೀಯ ಕಂತುಗಳಂತೆ ನೀಡುವ ಸೌಲಭ್ಯತೆಯನ್ನು ನೀಡಲಾಗಿದೆ. ನಿಮ್ಮ ಮಗುವಿನ ಭವಿಷ್ಯಕ್ಕೆ ನಾವೆಲ್ಲಾ ಹೊಣೆಯಾಗಲಿದ್ದೇವೆ ಎಂಬ ಭರವಸೆಯೊಂದಿಗೆ ದಾಖಲಾತಿಗಾಗಿ ಶಾಲಾ ಕಚೇರಿಯನ್ನು ಎಲ್ಲಾ ದಿನಗಳಲ್ಲಿ ಸಂಪರ್ಕಿಸಬಹುದು. ಅಥವಾ 9449448977 , 8088647911 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here