ಶುಭಾರಂಭದ ದಿನವೇ ಶಾಪಿಂಗ್ ಪ್ರಿಯರಿಂದ ಅತ್ಯುತ್ತಮ ಬೆಂಬಲ…
ಪುತ್ತೂರು: ಪುಟಾಣಿ ಮಕ್ಕಳಿಂದ ಹಿಡಿದು ,ಯುವಕ -ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನ ಮೆಚ್ಚುವಂಥಹ ಹಲವು ಬಗೆಯ, ವಿನೂತನ ಶೈಲಿಯ ಎಲ್ಲಾ ಮಾದರಿಯ ಬ್ರಾಡೆಂಡ್ ಬಟ್ಟೆಗಳು, ಹಲವಾರು ಮಾದರಿಯ ಬ್ಯಾಗ್ಗಳು, ನವ-ನವೀನ ರೀತಿಯ ಪಾದರಕ್ಷೆಗಳು ಎಲ್ಲವೂ ಅತಿ ಕಡಿಮೆ ಬೆಲೆಯಲ್ಲಿ ಪ್ರಿಯ ಗ್ರಾಹಕರಿಗೆ ನೀಡಲು ಹೆಸರಾಂತ ಸಂಸ್ಥೆ ‘ನ್ಯೂ ಚೆನ್ನೈ ಶಾಪಿಂಗ್’ ಇದೀಗ ಎರಡನೆಯ ಬಾರಿಗೆ ಮುಂದಾಗಿದ್ದು, ಜೂ.5 ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ಸಭಾಭವನದಲ್ಲಿ ಶುಭಾರಂಭಗೊಂಡಿದೆ. ಆರಂಭದ ದಿನದಲ್ಲೇ ಗ್ರಾಹಕರೂ ಬಟ್ಟೆಗಳ ಖರೀದಿಗಾಗಿ ಮುಗಿ ಬಿದ್ದು ,ತಮ್ಮ ಅಚ್ಚು ಮೆಚ್ಚಿನ ಬಟ್ಟೆಗಳನ್ನು ಖರೀದಿಸುವ ಖುಷಿಯಲ್ಲಿ ಸಂಭ್ರಮಿಸಿದ್ದಾರೆ.
ಕಳೆದ ವರುಷವೂ ಶಾಪಿಂಗ್ ಹಬ್ಬಕ್ಕೆ
ಶಾಪಿಂಗ್ ಪ್ರಿಯರಿಂದ ಅತ್ಯುತ್ತಮ ರೀತಿಯ, ನಿರೀಕ್ಷೆ ಗೂ ಮೀರಿದ ಬೆಂಬಲ ಸಿಕ್ಕಿತು. ಇದೀಗ ಆರಂಭವಾಗುತ್ತಿರುವ ಶಾಪಿಂಗ್ ಹಬ್ಬವು ಸುಮಾರು ಒಂದು ತಿಂಗಳ ಕಾಲ ವ್ಯವಹರಿಸಲಿದೆಯೆಂದು ಆಯೋಜಕ ಮನೋಜ್ ತಿಳಿಸಿದ್ದಾರೆ. ಸೀರೆಗಳು, ತೋಟಿ, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿಗಳು, ಜೆರ್ಕಿನ್ಸ್, ಬಾಬಸೂಟ್, ಚಪ್ಪಲಿಗಳು, ಬ್ಯಾಗ್ಗಳು, ಗುಣಮಟ್ಟವುಳ್ಳ ಅಸಂಖ್ಯಾತ ಹಾಗೂ ಅತ್ಯುತ್ತಮ ವಿನ್ಯಾಸದ ಆಟಿಕೆಗಳೂ ಒಂದೇ ಸೂರಿನಡಿಯಲ್ಲಿ ಸಿಗಲಿದ್ದು ಕೇವಲ 199/- ಬೆಲೆಯಲ್ಲೇ ಮೇಲಿನ ಎಲ್ಲಾ ಉತ್ಪನ್ನಗಳೂ ದೊರೆಯಲಿವೆ.
ಕುಟುಂಬ ಸದಸ್ಯರೊಂದಿಗೆ ಜತೆಗೂಡಿ ಅತ್ಯುತ್ತಮ ಶಾಪಿಂಗ್ ಅನುಭವವನ್ನೂ ಸಂಭ್ರಮಿಸೋ ಅವಕಾಶ ಮತ್ತೊಮ್ಮೆ ಪುತ್ತೂರಿನ ಗ್ರಾಹಕ ಜನತೆಗೆ ತಿರುಗಿ ಬಂದಿದೆ.
- ಯಾವುದೇ ಸಿದ್ಧ ಉಡುಪುಗಳ ಬೆಲೆ.199/- ಮಾತ್ರ.
- ಒಂದು ತಿಂಗಳ ಕಾಲ ನಡೆಯಲಿದೆ ಶಾಪಿಂಗ್ ಹಬ್ಬ.