ಎ ವಿ ಜಿ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ

0

ಪುತ್ತೂರು: ಕೃಷ್ಣ ನಗರ ಅಲಂಬುಡದಲ್ಲಿ ನೂತನವಾಗಿ ಆರಂಭಗೊಂಡಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಜೂನ್ 5 ರಂದು ನಡೆಯಿತು.

ಬೆಳಿಗ್ಗೆ ನಡೆದ ವೈದಿಕ ಕಾರ್ಯಕ್ರಮಗಳ ಬಳಿಕ ಮಕ್ಕಳನ್ನು ಆರತಿ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ತರಗತಿಗಳಿಗೆ ಬರಮಾಡಿಕೊಳ್ಳಲಾಯಿತು. ಮಕ್ಕಳ ಮಂಟಪದ ನಿರ್ದೇಶಕ ಡಾ. ಎನ್ ಸುಕುಮಾರ ಗೌಡ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಶ್ವಪರಿಸರ ದಿನ – ಪುಟಾಣಿಗಳಿಗೆ ಹೂವಿನ‌ಕುಂಡ ವಿತರಣೆ
ವಿಶ್ವಪರಿಸರ ದಿನದ ಅಂಗವಾಗಿ ಸಂಸ್ಥೆಯಲ್ಲಿ ದಾಖಲಾದ ಪುಟಾಣಿಗಳ ಪೈಕಿ ಐವರು ಪುಟಾಣಿಗಳು ಹೂವಿನ ಕುಂಡಕ್ಕೆ ನೀರು ಹಾಕಿ ಆಚರಿಸಲಾಯಿತು. ಮಕ್ಕಳಿಗೆ ಹೂವಿನ ಕುಂಡ ವಿತರಿಸಲಾಯಿತು.

ನಿವೃತತ್ತ ಶಿಕ್ಷಕಿ ಕುಸುಮಾವತಿ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here