ಕೃಷಿ ಸಾಲ ಮನ್ನಾದ ಬಾಕಿ ಹಣ ಕೂಡಲೇ ಬಿಡುಗಡೆಗೊಳಿಸಲು ರಾಜ್ಯ ಸಹಕಾರ ಸಚಿವರಿಗೆ ಪುತ್ತೂರು ನಿಯೋಗ ಮನವಿ

0

ಬಡ್ಡಿ ರಹಿತ ಸಾಲದ ಮಿತಿಯನ್ನು ರೂ.5 ಲಕ್ಷಕ್ಕೇರಿಸಲು ಆಗ್ರಹ
ಸಹಕಾರಿ ಸಂಘಗಳ ಮೇಲಿನ ತೆರಿಗೆ ರದ್ದತಿಗೆ ಕ್ರಮಕ್ಕೆ ಕೋರಿಕೆ

ಪುತ್ತೂರು: ಹಿಂದಿನ ಸರಕಾರದ ಅವಧಿಯಲ್ಲಿನ ಸಾಲ ಮನ್ನಾದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಿ ಬಾಕಿಯಿರುವ ರೈತರಿಗೆ ನೀಡುವ ವ್ಯವಸ್ಥೆ ಮಾಡುವಂತೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದ ನಿಯೋಗವೊಂದು ರಾಜ್ಯ ಸಹಕಾರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದೆ.

ಸಾಲದ ಮಿತಿ ಹೆಚ್ಚಿಸಿ: ರೈತರಿಗೆ ಬಡ್ಡಿರಹಿತ ಕೃಷಿ ಸಾಲದ ಮಿತಿಯನ್ನು ರೂ.3 ಲಕ್ಷದಿಂದ 5 ಲಕ್ಷಕ್ಕೆ ಏರಿಸಬೇಕು ಎಂದೂ ನಿಯೋಗ ಮನವಿ ಮಾಡಿದೆ. ಜೊತೆಗೆ, ಕೇಂದ್ರ ಸರ್ಕಾರ ಸಹಕಾರಿ ಸಂಘಗಳ ಮೇಲೆ ತೆರಿಗೆ ವಿಧಿಸಿ ಆದೇಶ ಹೊರಡಿಸಿರುವ ಕುರಿತು ಕೇಂದ್ರ ಸರಕಾರದ ಜೊತೆ ಈ ಆದೇಶವನ್ನು ರದ್ದುಪಡಿಸುವ ಕುರಿತೂ ಕ್ರಮಕೈಗೊಂಡು ರೈತರ ಮತ್ತು ಸಹಕಾರ ಸಂಘಗಳ ಹಿತ ಕಾಪಾಡಬೇಕು ಎಂದೂ ನಿಯೋಗ ರಾಜ್ಯ ಸಹಕಾರ ಸಚಿವ ಕೆ.ಎನ್.ಜಯಣ್ಣ ಅವರಿಗೆ ಮನವಿ ಮಾಡಿದೆ. ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ರೈತ ಸಂಘದ ನೇತೃತ್ವದ ನಿಯೋಗದಲ್ಲಿ ರೈತ ಸಂಘದ ನಿಯೋಗದ ಜಿಲ್ಲಾ ಅಧ್ಯಕ್ಷ ರೂಪೇಶ್ ರೈ ಅಲಿಮಾರ್, ಪ್ರಧಾನ ಕಾರ್ಯದರ್ಶಿ ವಿನೋದ ಭಟ್ ಪಾದೆಕಲ್ಲು, ರೈತ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ ನಿಯೋಗದಲ್ಲಿದ್ದರು. ಬೆಂಗಳೂರು ವಿಧಾನಸೌಧದಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here