





ಪುತ್ತೂರು: ಕೆದಂಬಾಡಿ ಗ್ರಾಮದ ಮಿತ್ತೋಡಿ ನಿವಾಸಿಯಾಗಿದ್ದ ಅಮೆಕ್ಕಾರುಗುತ್ತು ನಾರಾಯಣ ರೈ (78 ವ)ರವರು ಅಲ್ಪ ಕಾಲದ ಅಸೌಕ್ಯದಿಂದಾಗಿ ನ.2ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಶೀಲಾವತಿ ರೈ, ಪುತ್ರರಾದ ವಿಠಲ ರೈ ಮಿತ್ತೋಡಿ, ಭಾಸ್ಕರ ರೈ ಮಿತ್ತೋಡಿ, ಸೊಸೆಯಂದಿರಾದ ಶಶಿಪ್ರಭಾ ರೈ, ಸವಿತಾ ರೈ, ಸಹೋದರಿ ಪ್ರೇಮ ರೈ, ಪ್ರಮೀಳಾ ರೈ,ಸಹೋದರ ಲಿಂಗಪ್ಪ ರೈ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.










