ಮಾಂಡೋವಿ ಮೋಟಾರ‍್ಸ್ 39ನೇ ವರ್ಷದ ಸಂಭ್ರಮಾಚರಣೆ ; ಮಾಂಡೋವಿ ಮೋಟಾರ‍್ಸ್ ಉಪ್ಪಿನಂಗಡಿ ಶಾಖೆಯಿಂದ ಮಾನ್‌ಸೂನ್ ಆಫರ‍್ಸ್

0

ಜೂ.9, 10: ತಿಂಗಳಾಡಿ, ಉಪ್ಪಿನಂಗಡಿಯಲ್ಲಿ ಮೆಗಾ ಎಕ್ಸ್‌ಚೇಂಜ್, ಲೋನ್‌ಮೇಳ

ಪುತ್ತೂರು: ಮಾರುತಿ ಸುಜುಕಿ ವಾಹನಗಳ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ‍್ಸ್‌ನ ಉಪ್ಪಿನಂಗಡಿ ಶಾಖೆಯ ವತಿಯಿಂದ ಜೂನ್ ತಿಂಗಳ ಮಾನ್‌ಸೂನ್ ಆಫರ್ ಮತ್ತು ಮೆಗಾ ಎಕ್ಸ್‌ಚೇಂಜ್ ಮೇಳ, ಲೋನ್ ಮೇಳ ಜೂ.9 ಮತ್ತು 10ರಂದು ತಿಂಗಳಾಡಿಯಲ್ಲಿರುವ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಉಪ್ಪಿನಂಗಡಿ ಕರ್ಣಾಟಕ ಬ್ಯಾಂಕ್ ಎದುರುಗಡೆಯಲ್ಲಿ ನಡೆಯಲಿದೆ.

ವಿಶೇಷ ರಿಯಾಯಿತಿ: ಮಾನ್‌ಸೂನ್ ಪ್ರಯುಕ್ತ ವಿಶೇಷ ಕೊಡುಗೆ ಆಯೋಜಿಸಿದೆ. ಕೃಷಿಕರಿಗೆ, ಗ್ರಾಮೀಣ ವ್ಯಾಪಾರಸ್ಥರಿಗೆ, ಸರಕಾರಿ ನೌಕರರಿಗೆ, ಶಿಕ್ಷಕರಿಗೆ, ಕಾರ್ಪೋರೇಟ್, ಸೊಸೈಟಿ ಸದಸ್ಯರಿಗೆ ವಿಶೇಷ ರಿಯಾಯಿತಿ ಸೌಲಭ್ಯ. ಹೊಸ ಕಾರುಗಳ ಖರೀದಿಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು ಮೆಗಾ ಎಕ್ಸ್‌ಚೇಂಜ್ ಮೇಳ ಮತ್ತು ಲೋನ್ ಮೇಳ ಆಯೋಜಿಸಿದೆ.

ಹೊಸ ಕಾರು ಖರೀದಿಯಲ್ಲಿ ಹಣ ಉಳಿತಾಯ: ಎಕ್ಸ್‌ಚೇಂಜ್ ಮೇಳದಲ್ಲಿ ಹಳೆಯ ಕಾರುಗಳಿಗೆ ಅತ್ಯುತ್ತಮ ಮೌಲ್ಯ ಮಾಪನದೊಂದಿಗೆ ಹೊಸ ಮಾರುತಿ ಕಾರುಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಸುವರ್ಣಾವಕಾಶವನ್ನು ನೀಡುತ್ತಿದೆ. ಜೊತೆಗೆ ಶೇ.100ರಷ್ಟು ಆನ್‌ರೋಡ್ ಫಂಡಿಂಗ್ ಸೌಲಭ್ಯ ದೊರೆಯಲಿದೆ. ಹೊಸ ಕಾರುಗಳ ಖರೀದಿಗೆ ವಿಶೇಷ ಹಣ ಉಳಿತಾಯದ ಅವಕಾಶವನ್ನು ನೀಡುತ್ತಿದೆ. ವ್ಯಾಗನರ್ ಕಾರಿಗೆ ರೂ.68,೦೦೦, ಆಲ್ಟೋ ಕೆ10ಗೆ ರೂ.60,೦೦೦, ಸೆಲೆರಿಯೋ ಕಾರಿಗೆ ರೂ.62,೦೦೦, ಎಸ್.ಪ್ರೆಸ್ಸೋಗೆ ರೂ.60,೦೦೦, ಇಕೋಗೆ ರೂ.50500, ಸ್ವಿಫ್ಟ್‌ಗೆ ರೂ.63,೦೦0ದಷ್ಟು ಉಳಿತಾಯ ಮಾಡಬಹುದು.

ಸ್ಟೇರಿಂಗ್ ಹಿಡಿಯೋಣ: ಹ್ಯಾಂಡಲ್ ಅಲ್ಲ ಇನ್ನು ಸ್ಟೇರಿಂಗ್ ಹಿಡಿಯೋಣ ವಿಶೇಷ ಸೌಲಭ್ಯವಿದ್ದು ಟೂವೀಲರ್‌ನಲ್ಲಿ ಮಾರುತಿ ಖರೀದಿಸಲು ಬಂದು ರೂ.3೦೦೦ ವಿನಾಯ್ತಿ ಪಡೆಯಬಹುದು. ಅಲ್ಲದೆ ಎಡಿಷನಲ್ ಆಫರ್ ರೂ.3೦೦೦ ಲಭ್ಯವಿದೆ.

ರೂ.2000 ದರ ಕಡಿತ: ಜೂನ್ 1ರಿಂದ ಜುಲೈ 31ರವರೆಗೆ ಮಾರುತಿ ಸ್ವಿಫ್ಟ್ ಖರೀದಿ ಮಾಡಿದಲ್ಲಿ ರೂ.2೦೦೦ದಷ್ಟು ದರ ಕಡಿತ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಮನೋಹರ್ ಎಂ. 6366389644, ರಾಜೇಶ್ ಎನ್.ಎಸ್. 9606438022, ಹರಿಕಿರಣ್ ರೈ ಎಸ್.7259014047, ಸುಮಿತ್ ಎನ್. 7259014043 ಇವರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here