ಪುತ್ತೂರು ರೋಟರಿ ಕ್ಲಬ್‌ ವತಿಯಿಂದ ಕುಟುಂಬ ಸಮ್ಮಿಲನ

0

ಸೀತರಾಮ ಶೆಟ್ಟಿ ಹೆಗ್ಡೆಹಿತ್ಲು – ಪೂರ್ಣಿಮಾ ದಂಪತಿಯ ವೈವಾಹಿಕ ಜೀವನದ 40ನೇ ವರ್ಷಾಚರಣೆ

ಪುತ್ತೂರು: ರೋಟರಿ ಕ್ಲಬ್‌ ಪುತ್ತೂರು ಇದರ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಮೇ 26ರಂದು ಕೊಡಿಂಬಾಡಿ ಹೆಗ್ಡೆಹಿತ್ಲು ಸೀತಾರಾಮ ಶೆಟ್ಟಿಯವರ ಸ್ವಗೃಹದಲ್ಲಿ ಪುತ್ತೂರು ರೋಟರಿ ಕ್ಲಬ್‌ ಅಧ್ಯಕ್ಷ ಉಮಾನಾಥ ಪಿ.ಬಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ಮುಖ್ಯ ಅತಿಥಿಯಾಗಿದ್ದರು. ಸಭೆಯಲ್ಲಿ ಸೀತಾರಾಮ ಶೆಟ್ಟಿ ಮತ್ತು ಪೂರ್ಣಿಮಾ ದಂಪತಿಯ ವೈವಾಹಿಕ ಜೀವನದ 40ನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

ಕವಿತಾ ದಿನಕರ್‌ ಪ್ರಾರ್ಥಿಸಿದರು. ಪುತ್ತೂರು ರೋಟರಿ ಕ್ಲಬ್‌ ನ ಕಾರ್ಯದರ್ಶ ಡಾ.ಶ್ರೀಪ್ರಕಾಶ್‌, ಕ್ಲಬ್‌ ನ ಸೇವಾ ನಿರ್ದೇಶಕ ಪರಮೇಶ್ವರ ಗೌಡ, ರೊ ಎ.ಜೆ.ರೈ, ಎಂ.ಜಿ ರೈ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here