ಪುತ್ತೂರು: ಇಸ್ಲಾಮಿಕ್ ಎಜ್ಯುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಮದ್ರಸಗಳ ಅಧ್ಯಾಪಕರ ಸಂಘಟನೆಯಾಗಿರುವ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (ಎಸ್.ಜೆ.ಎಂ) ಇದರ ನಾವುಂದ ರೇಂಜ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಮುಂಡೂರು ಗ್ರಾಮದ ಕೊಂಬಾಳಿ ನಿವಾಸಿ ಕೆಎಂಎಚ್ ಝುಹುರಿ ಆಯ್ಕೆಯಾಗಿದ್ದಾರೆ. ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.