ಕಾಣಿಯೂರು: ಪುಣ್ಚತ್ತಾರು ವಿಷ್ಣುಪುರ ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನ, ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಅವರ ನೇತೃತ್ವದಲ್ಲಿ ಜೂ.11ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡ ಶ್ರೀ ವಿಷ್ಣುಮೂರ್ತಿ ದೈವ, ಶ್ರೀ ಕಾಳಿಕಾಂಬ ದೇವಿ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜೂ 12ರಂದು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಜೂ.13ರಂದು ಕ್ಷೇತ್ರದಲ್ಲಿ ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಬಯಲು ಕೋಲ, ಮಾರಿಕಳ, ಮಧ್ಯಾಹ್ನ ಗುಳಿಗ ಕೋಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಗೌರವಾಧ್ಯಕ್ಷರಾದ ಕುಕ್ಕಾಜೆ ಶ್ರಿ ಕ್ಷೇತ್ರದ ಶ್ರೀ ಕೃಷ್ಣ ಗುರೂಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ಕ್ಷೇತ್ರದ ಮೊಕ್ತೇಸರರಾದ ವೆಂಕಟ್ರಮಣ ಆಚಾರ್ಯ ಕರಿಮಜಲು, ಜನಾರ್ದನ ಆಚಾರ್ಯ ಕರಿಮಜಲು, ಕೃಷ್ಣ ಆಚಾರ್ಯ ಕರಿಮಜಲು, ಗೌರವ ಸಲಹೆಗಾರರಾದ ನಿರಂಜನ್ ಆಚಾರ್, ಲಕ್ಷ್ಮಣ ಗೌಡ ಕರಂದ್ಲಾಜೆ, ಸಂಜೀವ ರೈ ಪೈಕ, ಗಣೇಶ್ ಉದನಡ್ಕ, ಸೀತಾರಾಮ ಗೌಡ ಮರಕ್ಕಡ, ರವೀಂದ್ರನಾಥ ರೈ ನೋಲ್ಮೆ, ವಾಸುದೇವ ಆಚಾರ್ಯ ಕಿಲಂಗೋಡಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಪ್ರದೀಪ್ ಬೊಬ್ಬೆಕೇರಿ, ಹರೀಶ್ ಪೈಕ ಕಟೀಲ್, ವಿಶ್ವನಾಥ ರೈ ಮಾಳ, ಜತೆ ಕಾರ್ಯದರ್ಶಿ ಮೋಹನ ಕರಿಮಜಲು, ಕೋಶಾಧಿಕಾರಿ ಭವಿಷ್ ಕರಿಮಜಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಪುಟ್ಟಣ್ಣ ಗೌಡ ಪೈಕ, ನಾಗೇಶ್ ರೈ ಮಾಳ, ಪ್ರಶಾಂತ್ ಮುರುಳ್ಯ, ಕುಮಾರ್ ಆಚಾರ್ಯ ದೋಳ್ಪಾಡಿ, ಕೋಶಾಽಕಾರಿ ರಾಜೇಶ್ ಕರಿಮಜಲು ಹಾಗೂ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ವಿವಿಧ ಸಮಿತಿ ಸಂಚಾಲಕರು, ಸದಸ್ಯರು ಮತ್ತು ಊರ ಪರವೂರ ಭಕ್ತಾಽಗಳು ಭಾಗವಹಿಸಿದ್ದರು.