ಪುತ್ತೂರು:ನೀಟ್ ತರಬೇತಿ ಸಂಸ್ಥೆಯಾದ ಅಬ್ಸಲ್ಯೂಟ್ ಲರ್ನಿಂಗ್ ಅಕಾಡೆಮಿಯ ವಿದ್ಯಾರ್ಥಿನಿ ಹರ್ಷಿತಾ, 2022-23ನೇ ಪ್ರಸಕ್ತ ಶೈಕ್ಷಣಿಕ ಸಾಲಿನ ರಾಷ್ಟ್ರ ಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್‌ನಲ್ಲಿ 4000ನೇ ರ‍್ಯಾಂಕ್ ಗಳಿಸಿದ್ದಾರೆ.
99.48 ಪರ್ಸೆಂಟೆಜ್ ಪಡೆದು 639 ಅಂಕಗಳಿಸಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಇಫ್ತೆಕಾರ್ 10434ನೇ ಬ್ಯಾಂಕ್ ಪಡೆದಿದ್ದಾರೆ. ಇವರು ಒಟ್ಟು 98.78 ಪರ್ಸೆಂಟೆಜ್ ಪಡೆದು 608 ಅಂಕಗಳಿಸಿದ್ದಾರೆ.
ಈ ಶೈಕ್ಷಣಿಕ ಸಾಲಿನಲ್ಲಿ 20.87 ಲಕ್ಷದಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.ಅಬ್ಸಲ್ಯೂಟ್ ಅಕಾಡೆಮಿಯ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುತ್ತಿರುವುದು ಸಂಸ್ಥೆಯ ಪರಿಣತ ತರಬೇತಿಗೆ ಸಂದ ಶ್ರೇಯವಾಗಿದೆ ಎಂದು ಆಡಳಿತ ನಿರ್ದೇಶಕ ವಿಘ್ನೇಶ್ ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.