ʼಹುಟ್ಟು ಕಾಂಗ್ರೆಸ್‌ನವನಾದ ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ-ಕೃಷ್ಣಪ್ಪನವರನ್ನು ಸುಳ್ಯ ಕ್ಷೇತ್ರದಿಂದ ತೊಲಗಿಸಿ, ಪಕ್ಷಕ್ಕೆ ಸಮರ್ಥ ಉಸ್ತುವಾರಿಯನ್ನು ನೇಮಿಸಿʼ-ಬಾಲಕೃಷ್ಣ ಬಳ್ಳೇರಿ

0

ಕಡಬ: ಹುಟ್ಟು ಕಾಂಗ್ರೆಸ್‌ನವನಾದ ನಾನು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ದ್ರೋಹ ಮಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ಆದರೆ ಪಕ್ಷದಿಂದ ಶೋಕಾಸ್ ನೋಟಿಸು ಕೊಟ್ಟಿದ್ದಾರೆ ಎಂಬ ಸುದ್ದಿಯಿಂದ ನನಗೆ ಬೇಸರವಾಗಿದೆ. ಈ ಎಲ್ಲ ಸಮಸ್ಯೆಗೆ ಕಾರಣವಾಗಿರುವ ಕೃಷ್ಣಪ್ಪನವರನ್ನು ಸುಳ್ಯ ಕ್ಷೇತ್ರದಿಂದ ತೊಲಗಿಸಿ, ಕ್ಷೇತ್ರಕ್ಕೆ ಉತ್ತಮ ಉಸ್ತುವಾರಿಯವರನ್ನು ನೇಮಿಸಬೇಕೆಂದು ಕಡಬ ಬ್ಲಾಕ್ ಮಾಜಿ ಅಧ್ಯಕ್ಷ, ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಹೊತ್ತಿರುವ ಬಾಲಕೃಷ್ಣ ಬಳ್ಳೇರಿಯವರು ಹೇಳಿದ್ದಾರೆ.
ಅವರು ಈ ಬಗ್ಗೆ ಹೇಳಿಕೆ ನೀಡಿ, ವಿಧಾನಸಭಾ ಚುನಾವಣೆಯಲ್ಲಿ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಎಂದು ನನಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ ಎಂಬ ವರದಿಗಳು ಬಂದಿದೆ. ಈ ನೋಟಿಸು ಕಳುಹಿಸಿದ್ದು ಯಾರು, ಇದಕ್ಕೆ ಕಾರಣ ಯಾರು ಎಂಬುದು ತಿಳಿದಿಲ್ಲ. ಇದು ಬಹಳ ಆಶ್ಚರ್ಯವಾಗಿದೆ. ನಾನು ಬಹಳ ಚಿಕ್ಕಂದಿನಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡವ. ಮಂಡಲ ಪಂಚಾಯತ್ ಸದಸ್ಯನಾಗಿ, ಗ್ರಾ.ಪಂ. ಅಧ್ಯಕ್ಷನಾಗಿ, ಕಡಬ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಮತ್ತು ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಯಾಗಿ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಜೀವಮಾನ ಇಡಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಅದೇ ರೀತಿ ಪಕ್ಷ ಕೂಡ ನನಗೆ ಸಂದರ್ಭನುಗುಣವಾಗಿ ಅವಕಾಶ ನೀಡಿದೆ. ಇಂತಹ ಪಕ್ಷಕ್ಕೆ ನಾನು ದ್ರೋಹ ಮಾಡುತ್ತೇನೆ, ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ವರ್ತಿಸಿದ್ದೇನೆ ಎನ್ನುವುದು ಸುಳ್ಳು. ಕಳೆದ ಚುನಾವಣೆಯಲ್ಲಿ ಕಡಬ ಬ್ಲಾಕ್ ಉಸ್ತುವಾರಿಯಾಗಿ ನಂದಕುಮಾರ್ ಅವರನ್ನು, ಸುಳ್ಯ ಬ್ಲಾಕ್ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಸಹಜವಾಗಿ ಕಡಬ ಬ್ಲಾಕ್ ಉಸ್ತುವಾರಿಯಾಗಿದ್ದ ನಂದಕುಮಾರ್ ಜತೆ ಪಕ್ಷದ ಕೆಲಸಗಳನ್ನು ಬಹಳ ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇವೆ. ಅಂತೆಯೇ ನಂದ ಕುಮಾರ್ ಅವರು ಕೂಡ ಕಡಬ ಬ್ಲಾಕ್ ಅಲ್ಲದೆ ಇಡೀ ಸುಳ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ನಂದಕುಮಾರ್ ಕ್ಷೇತ್ರದಲ್ಲಿ ನೊಂದವರಿಗೆ ಆರ್ಥಿಕ ನೆರವು ನೀಡಿದ್ದಾರೆ. ಅಲ್ಲದೆ ಕೊರೋನ ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರಿಗೆ, ಗೃಹರಕ್ಷಕದಳದವರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಕ್ಷೇತ್ರದವರಿಗೆ ಆಹಾರದ ಕಿಟ್ ನೀಡಿದ್ದಾರೆ. ಅಲ್ಲದೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈ ಮೂಲಕ ಅವರು ಜನಾನುರಾಗಿಯಾಗಿದ್ದರು. ಆದುದರಿಂದ ನಂದಕುಮಾರ್ ಅವರಿಗೆ ಟಿಕೇಟ್ ನೀಡಿದರೆ ಅವರು ಈ ಬಾರಿ ಗೆದ್ದೆ ಗೆಲ್ಲುತ್ತಾರೆ ಎಂಬ ಆಶಾಭಾವನೆ ನಮ್ಮಲ್ಲಿತ್ತು. ನಾನು ಅದಕ್ಕಾಗಿ ಎಲ್ಲರನ್ನು ಒಟ್ಟುಗೂಡಿಸಿದ್ದು ಬಹಳಷ್ಟು ಜನ ಈ ಭಾರಿ ನಂದಕುಮಾರ್ ಅಂತ ಮಟ್ಟಕ್ಕೆ ಬೆಳೆದಿತ್ತು.

ನಾಯಕರುಗಳನ್ನು ಓಲೈಸಿಕೊಂಡವರಿಗೆ ಟಿಕೇಟ್ :
ಈ ಮಧ್ಯೆ ಸದ್ದಿಲ್ಲದೆ ನಾಯಕರುಗಳನ್ನು ಓಲೈಕೆ ಮಾಡಿಕೊಂಡ ಕೃಷ್ಣಪ್ಪನವರು ಮತ್ತು ಕಾರ್ಯಕರ್ತರ ಜತೆ ಗುರುತಿಸಿಕೊಂಡ ನಂದಕುಮಾರ್ ನಡುವೆ ಟಿಕೇಟ್ ಗಾಗಿ ಪೈಪೋಟಿ ನಡೆಯಿತು. ಈ ಮಧ್ಯೆ ನಾಯಕರ ಓಲೈಕೆ ಮಾಡಿಕೊಂಡ ಕೃಷ್ಣಪ್ಪನವರಿಗೆ ಟಿಕೇಟ್ ಸಿಕ್ಕಿತು. ಬಳಿಕ ನಾವು ನಾಯಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ, ಈಗಾಗಲೇ ೩೦ ವರ್ಷಗಳ ಸೋತವರು ಮತ್ತು ಸೋಲಬೇಕಾಗುತ್ತದೆ, ದಯವಿಟ್ಟು ಮತ್ತೆ ಮತ್ತೆ ಹಾಗೆ ಮಾಡಬೇಡಿ ಎಂದು ಕೇಳಿಕೊಂಡೆವು ಆದರೆ ಅದು ಪ್ರಯೋಜನಕ್ಕೆ ಬಂದಿಲ್ಲ.

ಬಿ. ಫಾರ್ಮ್ ಸಿಕ್ಕಿದ ಮೇಲೋ ದ್ವೇಷದ ಹೇಳಿಕೆ ಯಾಕೆ?
ಕೃಷ್ಣಪ್ಪನವರಿಗೆ ಬಿ. ಫಾರಂ ಸಿಕ್ಕಿದ ಮೇಲೋ ನಂದಕುಮಾರ್ ಬಳಗದಲ್ಲಿ ಗುರುತಿಕೊಂಡವರ ಮೇಲೆ ಪತ್ರಿಕಾಗೋಷ್ಟಿಯಲ್ಲಿ ಕಿಡಿ ಕಾರಿದ್ದರು. ನಂದಕುಮಾರ್ ಜತೆ ಗುರುತಿಸಿಕೊಂಡವರು ಯಾರೂ ಕಾಂಗ್ರೆಸ್ ಕಾರ್ಯಕರ್ತರಲ್ಲ ಎನ್ನುವ ಮಟ್ಟಕ್ಕೆ ಅವರ ಮಾತು ಹೋಗಿತ್ತು. ಟಿಕೇಟ್ ಸಿಕ್ಕಿದ ಮೇಲೆ ಇಂತಹ ದ್ವೇಷದ ಹೇಳಿಕೆ ಯಾಕೆ ಎಂದು ಪ್ರಶ್ನಿಸಿದ ಬಳ್ಳೇರಿ. ಈ ಭಾರಿ ಸುಳ್ಯದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇದನ್ನು ನಾವು ಪ್ರತಿಭಟಿಸಿದ್ದೆವು. ಬಳಿಕ ರಮಾನಾಥ ರೈಯವರು ಬಂದು ಮಾತುಕತೆ ನಡೆಸಿದ್ದರು. ಬಳಿಕವಾದರೂ ಕೃಷ್ಣಪ್ಪನವರು ನಮ್ಮನ್ನು ಸಂಪರ್ಕಿಸಿಯೇ ಇಲ್ಲ, ಚುನಾವಣೆಯಲ್ಲಿ ತೊಡಗಿಸಿಕೊಳ್ಳುವಂತೆಯೂ ಹೇಳಿಲ್ಲ, ಆದರೂ ಕೂಡ ನಾವು ನಮ್ಮ ಸೀಮಿತ ವ್ಯಾಪ್ತಿಯಲ್ಲಿ ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವುದು ಸೇರಿದಂತೆ ಪಕ್ಷಕ್ಕೆ ಮತ ಕೇಳುವುದು ಮಾಡಿದ್ದೇವು. ಯಾವುದೇ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಕೂಡಲೇ ಕೆಪಿಸಿಸಿ ನಾಯಕರು ಮಧ್ಯಪ್ರವೇಶಿಸಿ ನೀಡಿದ ನೋಟಿಸನ್ನು ಹಿಂಪಡೆಯಬೇಕು ಮತ್ತು ಸುಳ್ಯ ಕ್ಷೇತ್ರದಲ್ಲಿ ಯಾವುದೇ ಚಟುವಟಿಕೆ ಮಾಡದಂತೆ ಕೃಷ್ಣಪ್ಪನವರನ್ನು ನಿರ್ಭಂದಿಸಿ, ಅವರನ್ನು ಇಲ್ಲಿಂದ ಬಿಡಗಡೆಗೊಳಿಸಬೇಕು, ಇಲ್ಲಿಗೆ ಸೂಕ್ತ ವ್ಯಕ್ತಿಯನ್ನು ಉಸ್ತುವಾರಿಯಾಗಿ ನೇಮಿಸಬೇಕೆಂದು ಅವರು ರಾಜ್ಯನಾಯಕರಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here