ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ಇವರ ಅಧ್ಯಕ್ಷತೆಯಲ್ಲಿ ಜೂ.18 ರಂದು ನಿಡ್ಪಳ್ಳಿ ಶಾಲೆಯಲ್ಲಿ ನಡೆಯಿತು.
ಒಕ್ಕೂಟದ ಸೇವಾ ಪ್ರತಿನಿಧಿ ಶಾಲಿನಿ ಮಾಹಿತಿ ನೀಡಿ ಸಂಘದ ವಾರದ ಸಭೆ ಸರಿಯಾದ ಸಮಯಕ್ಕೆ ಎಲ್ಲಾ ಸದಸ್ಯರು ಸೇರಿ ನಡೆಸಿದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಅಲ್ಲದೆ ಮಾಸಿಕ ಸಭೆಗೆ ಎಲ್ಲಾ ಸಂಘಗಳು ಹಾಜರಾಗಿ ನಿಯಮಗಳನ್ನು ಪಾಲಿಸಿ ಮುಂದುವರಿದರೆ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ವಲಯ ಮೆಲ್ವೀಚಾರಕ ಚಂದ್ರಶೇಖರ ಮಾತನಾಡಿ ನೀವು ಯೋಜನೆಯ ನಿಯಮಗಳನ್ನು ಸರಿಯಾಗಿ ಪಾಲಿಸಿಕೊಂಡು ವಾರದ ಸಭೆ ಮತ್ತು ಮಾಸಿಕ ಸಭೆಗಳಿಗೆ ಹಾಜರಾದರೆ ಸಾಕು. ತೆಗೆದ ಸಾಲವನ್ನು ಸರಿಯಾಗಿ ವಿನಿಯೋಗಿಸಿ ತಮ್ಮ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳಿ ಕೆಲವು ಅಗತ್ಯ ಮಾಹಿತಿ ನೀಡಿದರು.ಹಾಜರಾತಿ ಮತ್ತು ಗ್ರೇಡಿಂಗ್ ನಡೆಸಲಾಯಿತು.
ಶ್ರೀ ಹರಿ ತಂಡದ ಗಂಗಾಧರ ಸಿ.ಎಚ್ ಸ್ವಾಗತಿಸಿ , ಲಲಿತ ತಂಡದ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಒಕ್ಕೂಟದ ವರದಿ ವಾಚಿಸಿದರು. ದುರ್ಗಾವತಿ ವಂದಿಸಿದರು. ಒಕ್ಕೂಟದ ಉಪಾಧ್ಯಕ್ಷ ಸತೀಶ್. ಎಂ, ಜತೆ ಕಾರ್ಯದರ್ಶಿ ಹೇಮಾ ಸಿ.ಎಚ್, ಕೋಶಾಧಿಕಾರಿ ತಿಮ್ಮಪ್ಪ. ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ದಾಖಲಾತಿ ಸಮಿತಿ ಹಾಗೂ ಒಕ್ಕೂಟದ ಸದಸ್ಯರು ಪಾಲ್ಗೊಂಡರು. ಜ್ಞಾನ ಜ್ಯೋತಿ ಸ್ವ.ಸ.ಸಂಘ, ದಿವ್ಯ ಜ್ಯೋತಿ ಸ್ವ.ಸ.ಸಂಘ ಹಾಗೂ ಶ್ರೀ ಹರಿ ಪ್ರ.ಬ.ತಂಡ ಜವಾಬ್ದಾರಿ ನಿರ್ವಹಿಸಿದರು.