ಪುತ್ತೂರು: ಪುರುಷರ ಸಿದ್ದ ಉಡುಪುಗಳ ಮಳಿಗೆ `ಡಿ ಫ್ಯಾಕ್ಟೋ ಮೆನ್ಸ್ ಹಬ್’ ಜೂ.19ರಂದು ಈಶ್ವರಮಂಗಲ ಹಿರಾ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಮಳಿಗೆಯನ್ನು ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಉದ್ಘಾಟಿಸಲಿದ್ದು ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಳಿಗೆಯಲ್ಲಿ ಪುರುಷರ ಎಲ್ಲಾ ವಿಧದ ಸಿದ್ದ ಉಡುಪುಗಳು ಲಭ್ಯವಿರಲಿದ್ದು ಮದುವೆ, ಎಂಗೇಜ್‌ಮೆಂಟ್ ಮೊದಲಾದ ಕಾರ್ಯಕ್ರಮಗಳಿಗೆ ಬೇಕಾದ ಡ್ರೆಸ್‌ನ್ನು ಸ್ಟಿಚ್ ಮಾಡಿ ಕೊಡಲಾಗುವುದು ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ. ರೂ.1499ಕ್ಕಿಂತ ಮೇಲ್ಪಟ್ಟು ಡ್ರೆಸ್ ಖರೀದಿಸುವ ಗ್ರಾಹಕರಿಗೆ ಕೂಪನ್ ಸಿಗಲಿದ್ದು ಅದರಲ್ಲಿ ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶ ನೀಡಲಾಗಿದೆ.