ಪುತ್ತೂರು: ಚೈತನ್ಯ ಮಿತ್ರ ವ್ರಂದ ಪಡೀಲ್ ಇದರ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂಸ್ಥೆಯ ಕಛೇರಿಯಲ್ಲಿ ಪುರಂದರ್ ಪಡೀಲ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸ್ಥೆಯ ಮಾಜಿ ಅಧ್ಯಕ್ಷ ಸುಂದರ್ ಎಚ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಸದಸ್ಯರಿಂದ ಯೋಗಾಭ್ಯಾಸ ನಡೆಯಿತು. ಸದಸ್ಯ ಆನಂದ್ ಸ್ವಾಗತಿಸಿ, ಚಂದ್ರಶೇಖರ್ ಕೇಪುಳು ವಂದಿಸಿದರು. ಕಾರ್ಯದರ್ಶಿ ಗಣೇಶ್ ಬಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಸಂಪತ್ ಕುಮಾರ್ ಜೈನ್, ಗಣೇಶ್ ಎನ್ ಉಪಸ್ಥಿತರಿದ್ದರು.