‘ಸ್ವಾಸ್ಥ್ಯ’ – ಶಾಲಾ ಯೋಗಚಟುವಟಿಕಾ ಸಂಘ ‘ಯೋಗವು ಕೇವಲ ಆಸನಗಳಿಗೆ ಸೀಮಿತವಾಗದೆ ಮನಸ್ಸಿನ ಸುಸ್ಥಿತಿಗೆ ಸಹಾಯಕ’- ವಸಂತ ಸುವರ್ಣ
ಪುತ್ತೂರು:ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಜೂ.21ರಂದು ನಡೆಯಿತು. ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸ್ವಾಸ್ಥ್ಯ’ ಶಾಲಾ ಯೋಗ ಚಟುವಟಿಕಾ ಸಂಘ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಸಂಚಾಲಕ ವಸಂತ ಸುವರ್ಣ ‘ಮನಸ್ಸು, ಬುದ್ಧಿ ಮತ್ತು ಶರೀರದ ನಡುವೆ ಐಕ್ಯತೆ ಸಾಧಿಸುವ ಯೋಗ ವಿಜ್ಞಾನವು ನಾವು ನಮ್ಮೊಳಗೆ ಮತ್ತು ಪ್ರಕೃತಿಯೊಡನೆ ಒಂದಾಗಿ ಕಾಣುವುದಕ್ಕೆ ಸಹಕಾರಿಯಾಗಿದೆ. ಆ ಮೂಲಕ ಯೋಗವು ಕೇವಲ ಆಸನಗಳಿಗೆ ಸೀಮಿತವಾಗದೆ ಮನಸ್ಸಿನ ಸುಸ್ಥಿತಿಗೆ ಸಹಾಯಕ’ ಎಂದರು.
ಪೂರ್ವ ಪ್ರಾಥಮಿಕದಿಂದ 10ನೇ ತರಗತಿ ವರೆಗಿನ ಮಕ್ಕಳು ಪ್ರಾಣಾಯಾಮ, ಸರಳ ವ್ಯಾಯಾಮ, ಆಸನಗಳ ಅಭ್ಯಾಸ ಮಾಡಿದರು.ಶಾಲಾ ಶಿಕ್ಷಕರಾದ ರಂಗಪ್ಪ ವಂದಿಸಿ, ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.