ಆಲಂಕಾರು ಭಾರತಿ ಹಿ.ಪ್ರಾಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಆಲಂಕಾರು:ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಂದ ಯೋಗ ಛಾಪ್,ಯೋಗ ನೃತ್ಯ,ವಿವಿಧ ಆಸನಗಳು,ಮಂತ್ರಸಹಿತ ಸೂರ್ಯನಮಸ್ಕಾರವನ್ನು ಸಂಸ್ಥೆಯ ಯೋಗ ಶಿಕ್ಷಕ ಸಂತೋಷ್ ಮತ್ತು ಲೀಲಾವತಿ ಮಾರ್ಗದರ್ಶನದಲ್ಲಿ ಸಾಮೂಹಿಕವಾಗಿ ಶಾಲಾ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆನಂದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ.ಯೋಗಬ್ಯಾಸದಿಂದ ಸರ್ವ ಸಮಸ್ಯೆಗಳಿಗೆ ಪರಿಹಾರವಿದೆ.ಯೋಗಭ್ಯಾಸದಿಂದ ಕೊರೋನದಂತಹ ಮಹಾಮಾರಿ ಖಾಯಿಲೆಗಳನ್ನು ನಾವು ಗೆಲ್ಲಲು ಸಾಧ್ಯವಾಯಿತು. ಯೋಗ ನಮ್ಮ ಋಷಿಪರಂಪರೆ ಕರುಣಿಸಿದ ಸಂಪತ್ತು.ಯೋಗಬ್ಯಾಸ ನಮ್ಮ ನಿತ್ಯ ಜೀವನದಲ್ಲಿ ಒಂದು ಭಾಗವಾಗಬೇಕೆಂದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಭಾರತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸುರೇಶ್ ಕುಮಾರ್ ಕೂಡುರು ಮಾತನಾಡಿ ನಿತ್ಯ ನಿರಂತರ ಯೋಗಾಭ್ಯಾಸದಿಂದ ಹಲವಾರು ಜನರು ತಮ್ಮ ಆರೋಗ್ಯದಲ್ಲಿ ಸಕರಾತ್ಮಕ ಬದಲಾವಣೆಗಳನ್ನು ಕಂಡಿದ್ದಾರೆ ಎಂದು ತಿಳಿಸಿ ಕೆಲವರ ಜೀವನದಲ್ಲಿ ಬದಲಾವಣೆಗಳಾದ ಘಟನೆಗಳನ್ನು ಹಂಚಿಕೊಂಡರು.
ಶಾಲಾ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಂದ್ರಹಾಸ ಕೆ.ಸಿ ಶ ಸ್ವಾಗತಿಸಿ,ಆಂಗ್ಲಮಾಧ್ಯಮದ ಮುಖ್ಯಶಿಕ್ಷಕ ಸತೀಶ್ ಕುಮಾರ್ ಜಿ.ಆರ್ ವಂದನಾರ್ಪಣೆಗೈದರು.ಮಾತಾಜಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು ಶಾಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here