ಪುತ್ತೂರು: ಬೊಳುವಾರು ಅಲ್ಮಾಸ್ ಟವರ್ಸ್ನಲ್ಲಿ ಚರ್ಮರೋಗ ತಜ್ಞ ಡಾ. ಸಚಿನ್ ಶೆಟ್ಟಿಯವರ ಪುತ್ತೂರು ಸ್ಕಿನ್ ಕ್ಲಿನಿಕ್ನಲ್ಲಿ ವಿಶ್ವ ತೊನ್ನು ರೋಗ ದಿನದ ಅಂಗವಾಗಿ ಉಚಿತ ಚರ್ಮ ತಪಾಸಣಾ ಶಿಬಿರವು ಜೂ.25 ರಂದು ನಡೆಯಿತು.
ಶಿಬಿರದಲ್ಲಿ ತೊನ್ನು ರೋಗ ಮಾತ್ರವಲ್ಲದೆ ಎಲ್ಲಾ ರೀತಿಯ ಚರ್ಮರೋಗ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಚರ್ಮರೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆ ಅವಶ್ಯವುಳ್ಳವರಿಗೆ ಲೇಸರ್ ಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಯಿತು. ಚಿಕಿತ್ಸೆಯೊಂದಿಗೆ ಕೆಲವೊಂದು ಔಷಧಿಗಳನ್ನು ಉಚಿತ ಹಾಗೂ ಇನ್ನು ಕೆಲವು ಪುತ್ತೂರು ಸ್ಕಿನ್ ಕ್ಲಿನಿಕ್ನಲ್ಲಿ ಉಚಿತ ಚರ್ಮ ತಪಾಸಣಾ ಶಿಬಿರ ಔಷಧಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಯಿತು. ಸುಮಾರು 50ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.