ಪುತ್ತೂರು: ಒಳಮೊಗ್ರು ಗ್ರಾಮದ ಉಜಿರೋಡಿ ನಿವಾಸಿ ಮರಿಯಮ್ಮ (74) ರವರು ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಜೂ. 25 ರಂದು ನಿಧನರಾದರು.
ಕಳೆದ ಚುನಾವಣೆಯಲ್ಲಿ ಕುಂಬ್ರ ಒಳಮೊಗ್ರು ಬೂತಿನಲ್ಲಿ ಆಂಬ್ಯುಲೆನ್ಸ್ ನಲ್ಲಿ ಬಂದು ತನ್ನ ಹಕ್ಕನ್ನು ಚಲಾಯಿಸಿದ್ದದ್ದರು. ಮೃತರು ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಪುತ್ತೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಂಬಿ.ವಿಶ್ವನಾಥ್ ರೈ, ಒಳಮೊಗ್ರು ಕಾಂಗ್ರೆಸ್ ವಲಯಾಧ್ಯಕ್ಷ ಅಶೋಕ್ ಪೂಜಾರಿ,ಪಂಚಾಯತ್ ಸದಸ್ಯ ಶೀನಪ್ಪ, ಬೊಳ್ಳಾಡಿ ಮುಹಮ್ಮದ್,ರಕ್ಷಿತ್ ರೈ ಮುಗೇರು,ಆಬೀದ್ ಕಣ್ಣೂರು,ಸಿದ್ದೀಕ್ ಸುಲ್ತಾನ್,ಮಹಾಲಿಂಗ ನಾಯ್ಕ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.