ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್‌ನ ಪದಗ್ರಹಣ

0

ಆಲಂಕಾರು: ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮವು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ಮಾಜಿ ಜಿಲ್ಲಾ ಗವರ್ನರ್ ಗೀತಾ ಪ್ರಕಾಶ್ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಪದಾಧಿಕಾರಿಗಳ ಬದ್ದತೆಯನ್ನು ತಿಳಿಸಿ, ಲಯನ್ಸ್ ಕ್ಲಬ್ ನಿಂದ ಸದಸ್ಯತ್ವ, ನಾಯಕತ್ವ, ಸೇವೆಯಿಂದ ಮಾತ್ರ ಲಯನ್ಸ್ ಕ್ಲಬ್ ಗಳು ಅಭಿವೃದ್ಧಿಗೊಳ್ಳಲು ಸಾಧ್ಯ. ಲಯನ್ಸ್ ಕ್ಲಬ್ ನಿಂದ ನಾವು ಅರ್ಥಿಕ ಸದೃಡಗೊಳ್ಳಲು ಸಾಧ್ಯವಿಲ್ಲ, ಕೇವಲ ಸಾಮಾಜಿಕ ಸೇವೆ ಮಾಡಿದ್ದೇವೆ ಎನ್ನುವ ಸಂತೃಪ್ತಿ ಮಾತ್ರ ಎಂದು ತಿಳಿಸಿದರು. ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ವತಿಯಿಂದ ದಯಾನಂದ ರೈ ಮನವಳಿಕೆಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾದ 2023 -24ರ ನೂತನ ಅಧ್ಯಕ್ಷರಾಗಿ ಪ್ರಶಾಂತ ರೈ ಮನವಳಿಕೆ, ಕಾರ್ಯದರ್ಶಿಯಾಗಿ ಶ್ರೀಪತಿರಾವ್, ಕೋಶಾಧಿಕಾರಿಯಾಗಿ ಆರುವಾರ ಸುಭಾಸ್ ಕುಮಾರ್ ಶೆಟ್ಟಿ ಉಪಾಧ್ಯಕ್ಷ ರಾಗಿ ಡಾ.ಹರಿದಾಸ್ ಭಟ್ ಆಲಂಕಾರು, ಲಕ್ಷ್ಮೀನಾರಾಯಣ ಪ್ರಭು, ಪದಾಧಿಕಾರಿಗಳಾಗಿ ಮೋಹನದಾಸ ರೈ ಪರಾರಿಗುತ್ತು, ಸುಂದರ ಗೌಡ, ಜಯಂತ ಪೂಜಾರಿ ನೆಕ್ಕಿಲಾಡಿ ನೂತನ ಪದಾಧಿಕಾರಿಗಳಾಗಿ ಪದ ಸ್ವೀಕಾರ ಮಾಡಿದರು.


ಪದಸ್ವೀಕಾರ ಮಾಡಿ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆ ಮಾತನಾಡಿ, ನನಗೆ ಲಯನ್ ಅಂತರಾಷ್ಟ್ರೀಯ ಸಂಸ್ಥೆಯ ಆಲಂಕಾರು ದುರ್ಗಾಂಬಾದ ಅಧ್ಯಕ್ಷನಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಾವು ಸಣ್ಣದಿರುವಾಗ ಲಯನ್ಸ್ ಕ್ಲಬ್ ಗಳನ್ನು ನೋಡುತ್ತಿರುವಾಗ ಇದು ಶ್ರೀಮಂತ ವರ್ಗದವರು ಸಂಸ್ಥೆ ಎಂದು ತಿಳಿದುಕೊಂಡಿದ್ದೆವು. ಆದರೆ ಇದೀಗ ಲಯನ್ಸ್ ಕ್ಲಬ್ ಶ್ರೀಮಂತರ ಹಾಗೂ ಬಡವರ ಸಂಘವಾಗಿದ್ದು, ಇಲ್ಲಿ ಸೇವೆ ಮಾಡುವವರಿಗೆ ತುಂಬಾ ಅವಕಾಶಗಳಿದೆ ಎಂದು ತಿಳಿಸಿ ಪದ ಸ್ವೀಕರ ಮಾಡಿದ ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆ ವಿನಂತಿಸಿದರು. ನಿಯೋಜಿತ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ ಲಯನ್ಸ್ ಕ್ಲಬ್ ಸೇವೆ ಹಾಗೂ ಸಾಂಗತ್ಯ ಮಾಡುವುದಕೋಸ್ಕರ ಹುಟ್ಟಿ ಕೊಂಡಂತಹ ಸಂಸ್ಥೆ. ಇಲ್ಲಿ ನಾವು ಮಾಡುವ ಸೇವೆ ಇತರರಿಗೆ ಗೊತ್ತಾಗಬೇಕು ಹಾಗೂ ಪ್ರಚಾರವಾಗಬೇಕು ಆ ಪ್ರಚಾರದಿಂದ ಇತರರು ಲಯನ್ಸ್ ಕ್ಲಬ್ ಗೆ ಆಕರ್ಷಿತರಾಗಬೇಕೆಂದು ತಿಳಿಸಿ ನೂತನ ಪದಾಧಿಕಾರಿಗಳಿಗೆ ಶುಭಾಹಾರೈಸಿದರು.ನಿರ್ಗಮಿತ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಗುತ್ತು ಮಾತನಾಡಿ ತಮ್ಮ ಅವಧಿಯಲ್ಲಿ ಉಚಿತ ಆರೋಗ್ಯ, ನೇತ್ರ ಚಿಕಿತ್ಸಾ ಮತ್ತು ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಿದ್ದೇವೆ, ಕ್ಯಾನ್ಸರ್ ಪೀಡಿತರಿಗೆ ಸಹಾಯಧನ, ಗಿಡನೆಡುವ ಕಾರ್ಯಕ್ರಮ, ರಾಜ್ಯಪಾಲರ ಭೇಟಿ ಕಾರ್ಯಕ್ರಮ ಹಾಗೂ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡಿದೆ. ಹಾಗೆಯೆ ನಮ್ಮ ಸಂಘದ ಸದಸ್ಯ ಕಮಲಾಕ್ಷ ರೈ ಪರಾರಿಗುತ್ತು ಇವರ ನಿಧನ ಕೂಡ ನೋವು ತಂದಿದೆ. ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಮುಂದಿನ ಪದಾಧಿಕಾರಿಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಸೇವಾವಧಿಯಲ್ಲಿ ಸಹಕರಿಸಿದವರಿಗೆಲ್ಲಾ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ನಿರ್ಗಮಿತ ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಭಗವತಿ ಕಿರಣ್ ಪಜ್ಜಡ್ಕ, ಪಿಡಿಜಿ ಡಾ.ಗೀತಾಪ್ರಕಾಶ್ ರವರಿಗೆ ಸಭೆಯಲ್ಲಿ ತಮ್ಮ ಸೇವೆಗಾಗಿ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಕೊಯಿಲ ದ.ಕ ಜಿ.ಪ ಹಿರಿಯ ಪ್ರಾಥಮಿಕ ಶಾಲೆಗೆ ಅರ್ಥಿಕ ಧನಸಹಾಯ ನೀಡಲಾಯಿತು ಹಾಗೂ ವಿವಿಧ ಕ್ಲಬ್ ಗಳಿಂದ ಅಗಮಿಸಿದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು.
ಲಯನ್ಸ್ ನ ಕಿರಣ್ ಪಜ್ಜಡ್ಕ ಪ್ರಾರ್ಥಿಸಿ, ಪ್ರವೀಣ್ ಭಂಡಾರಿ, ವಾಣಿ.ಎಸ್ ಶೆಟ್ಟಿ, ಜಯಂತ ಪೂಜಾರಿ ನೆಕ್ಕಿಲಾಡಿ, ಸುಧಾಕರ ರೈ ಮನವಳಿಕೆ, ಅತಿಥಿಗಳನ್ನು ಸ್ವಾಗತಿಸಿ, ಪದ್ಮಪ್ಪ ಗೌಡ, ಇಂದುಶೇಖರ ಶೆಟ್ಟಿ, ಡಾ.ಹರಿದಾಸ್ ಭಟ್ ಅತಿಥಿಗಳನ್ನು ಪರಿಚಯಿಸಿ, ವಿಸ್ತರಣಾ ಅಧಿಕಾರಿ ಗಣೇಶ್ ಶೆಟ್ಟಿ, ಗೈಡಿಂಗ್ ಲಯನ್ ರವಿಪ್ರಸಾದ್ ಶೆಟ್ಟಿ, ಕಾರ್ಯಕ್ರಮದಲ್ಲಿ ಸಹಕರಿಸಿದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಪತಿರಾವ್ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನ ಸದಸ್ಯರು ,ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪ್ರಶಾಂತ ರೈ ಯವರ ಪತ್ನಿ ನಂದಿನಿ .ಪಿ.ರೈ, ಮಗಳು ಅದಿತಿ ರೈ ಸೇರಿದಂತೆ ಹಲವು ಮಂದಿ ಸಹಕರಿಸಿದರು.

LEAVE A REPLY

Please enter your comment!
Please enter your name here