ಮರ್ದಾಳ ಗುಡ್ ಶೆಫರ್ಡ್ ಪ್ರೌಢಶಾಲೆ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ

0

ಕಡಬ: ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜೂ.26ರಂದು ನಡೆಯಿತು. ಮುಖ್ಯ ಅತಿಥಿಯಾಗಿದ್ದ ಐತ್ತೂರು ಗ್ರಾ.ಪಂ. ಅಧ್ಯಕ್ಷ ರೋಹಿತ್ ಎಸ್.ರವರು ಉತ್ತಮ ನಾಯಕನ ಲಕ್ಷಣಗಳು ಹಾಗೂ ನಾಯಕತ್ವ ಎಂದರೇನು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮನೋಜ್ಞವಾಗಿ ತಿಳಿಸಿಕೊಟ್ಟರು.

ಶಾಲಾ ಮುಖ್ಯಶಿಕ್ಷಕಿ ಪ್ರಿಯಾ ಕಿಶೋರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, 2023-24ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಬ್ಯಾಡ್ಜ್ ಮತ್ತು ಹೂವು ನೀಡಿ ಶುಭ ಹಾರೈಸಿದರು. ಶೈಕ್ಷಣಿಕ ಸಲಹೆಗಾರ ಶ್ರೀಮತಿ ಮೇಫಿರವರು ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಸಿ.ಡಿ.ಓ. ತೋಮಸ್ ಪಿ.ವಿ, ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ಉಪಸ್ಥಿತರಿದ್ದರು. ಶಿಕ್ಷಕಿ ಪದ್ಮ ಮಂಜುನಾಥ ಸ್ವಾಗತಿಸಿ, ಶಿಕ್ಷಕಿ ಆಶಾ ಜಿ.ಎಲ್ ವಂದಿಸಿದರು. ಶಿಕ್ಷಕಿ ದೀಬಿಕಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here