ಪುತ್ತೂರು: ಪುತ್ತೂರು, ಕಡಬ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಜೂ.27ರಂದು ಧಾರಾಕಾರ ಮಳೆಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆಯು ಜೂ.28ರಂದು ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಮಂಗಳವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಉತ್ತಮ ಮಳೆಯಾಗಿವೆ. ಮಧ್ಯೆ ಮಧ್ಯಾಹ್ನದ ವೇಳೆ ಸ್ವಲ್ಪ ಬಿಸಿಲು ಕಾಣಿಸಿಕೊಂಡರೆ ಅಪರಾಹ್ನದ ಬಳಿಕ ಮೋಡ-ಬಿಸಿಲಿನಾಟ ಮುಂದುವರಿದಿತ್ತು.
ಜೂ. 27ರಂದು ಪುತ್ತೂರುನಲ್ಲಿ 9 ಮಿಮೀ, ಕಡಬ 6.4 ಮಿ.ಮೀ, ಬೆಳ್ತಂಗಡಿ 8.7 ಮಿಮೀ, ಬಂಟ್ವಾಳ 4.7 ಮಿಮೀ, ಮಂಗಳೂರು 5 ಮಿಮೀ, ಸುಳ್ಯ 7.6 ಮಿಮೀ, ಮೂಡುಬಿದಿರೆ 3.3 ಮಿಮೀ.ಮಳೆ ದಾಖಲಾಗಿದೆ. ದಿನದ ಸರಾಸರಿ ಮಳೆ 6.9 ಮಿಮೀ ಆಗಿದೆ.