ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಗೆ 100 ರೂಪಾಯಿ ಕಡಿತ – ಸಂಸ್ಥೆಯ ಕೊಡುಗೆಗೆ ಗ್ರಾಹಕರಿಂದ ಉತ್ತಮ ಸ್ಪಂಧನೆ
ವಿಟ್ಲ: ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿರುವ ಸಪ್ತ ಜ್ಯುವೆಲ್ಸ್ ನಲ್ಲಿ ಉದ್ಘಾಟನಾ ಸಂಭ್ರಮದ ಪ್ರಯುಕ್ತ ಗ್ರಾಹಕರಿಗೆ ಏರ್ಪಡಿಸಲಾಗಿದ್ದ ವಿಶೇಷ ಕೊಡುಗೆಗಳು ಜೂ.30ರಂದು ಕೊನೆಗೊಳ್ಳಲಿದೆ.
ಸಪ್ತ ಜ್ಯುವೆಲ್ಸ್ ಸಂಸ್ಥೆಯು ಸ್ಥಳಾಂತರಗೊಂಡು ಉದ್ಘಾಟನೆಗೊಂಡು ಶುಭ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲು ಸಂಸ್ಥೆ ಉದ್ದೇಶಿಸಿದ್ದು, ಚಿನ್ನಾಭರಣ ಖರೀದಿ ವೇಳೆ ಪ್ರತೀ ಗ್ರಾಂ.ಗೆ 100 ರೂಪಾಯಿ ಕಡಿತ ಹಾಗೂ ಬೆಳ್ಳಿ ಆಭರಣಗಳಲ್ಲಿ 5% ಡಿಸ್ಕೌಂಟ್ ನೀಡುತ್ತಿತ್ತು. ಅದು ಅಲ್ಲದೆ ಗ್ರಾಹಕರಿಗೆ ಪ್ರತೀ 5000 ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿ ವೇಳೆ ಅದೃಷ್ಟ ಚೀಟಿ ನೀಡುತ್ತಿದ್ದು, ಈ ಚೀಟಿಯ ಮುಖಾಂತರ ಒಂದು ಪವನ್ ನ ಚಿನ್ನದ ನೆಕ್ಲೆಸ್ ಗೆಲ್ಲುವ ಅವಕಾಶವನ್ನು ಕಲ್ಪಿಸಿತ್ತು. ಸಂಸ್ಥೆಯಲ್ಲಿ ಚಿನ್ನಾಭರಣದ ಶುದ್ದತೆಯನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಆರಂಭದ ದಿನಗಳಿಂದಲೂ ಉದ್ಘಾಟನಾ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂಧನೆ ಲಭಿಸಿತ್ತು. ಈ ಕೊಡುಗೆಗಳು ಜೂ.30ರಂದು ಕೊನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿವಿಧ ವಿನ್ಯಾಸದ ಚಿನ್ನಾಭರಣಗಳು:
ಸಪ್ತ ಜ್ಯುವೆಲ್ಸ್‌ನಲ್ಲಿ ಸ್ಥಳೀಯ ನುರಿತ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ವಿವಿಧ ವಿನ್ಯಾಸದ ಚಿನ್ನಾಭರಣಗಳ ಬೃಹತ್ ಸಂಗ್ರಹವಿದೆ. ಪಾರಂಪರಿಕ ಆಭರಣಗಳು, ಮಾಂಗಲ್ಯ ಸರ, ನವರತ್ನದ ಉಂಗುರ, ಲೈಟ್ ವೈಟ್ ರಿಂಗ್ , ಕಾಸ್ಟಿಂಗ್ ರಿಂಗ್, ಕಪಲ್ ರಿಂಗ್, ಕ್ಲೋಸೆಟ್ಟಿಂಗ್ ರಿಂಗ್, ಬರ್ತ್ ಸ್ಟೋನ್ ರಿಂಗ್, ಪವಿತ್ರ ರಿಂಗ್, ಕರ್ಟ್ಸ್ ಬಳೆಗಳು, ಬೆಂಡೋಲೆಗಳು, ಹವಳ – ಮುತ್ತಿನ ಸರಗಳು, ಕೊತ್ತಂಬರಿಸರ, ಮೋಹನಸರ, ಕನಕಸರ, ರೇಡಿಯೋ ಚೈನ್, ಲೈಟ್ ವೈಟ್ ಸಿರಾಮಿಕ್ ಸ್ಟಡ್ಸ್, ಕೊಡಗು ಶೈಲಿಯ ಕೊಕ್ಕೆತಾತಿ ಪೆಂಡೆಂಟ್ ಗಳು, ಕೊಕ್ಕೆತಾತಿ ಕಿವಿಯೋಲೆಗಳು, ಟೆಂಪಲ್ ಕಲೆಕ್ಷನ್ ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ಫೈ ಇನ್ ವನ್ ಹಾರಗಳು, ಫ್ಯೂಜನ್ ಕಲೆಕ್ಷನ್, ಚೆಟ್ಟಿನಾಡ್ ಕಲೆಕ್ಷನ್, ನಕ್ಷಿ ಓರ್ನಮೆಂಟ್ಸ್ ಇವುಗಳಲ್ಲಿ ವೆಡ್ಡಿಂಗ್ ಸೆಟ್ ಹಾಗೂ ಡಿವೈನ್ ಸೆಟ್ ಗಳು ಲಭ್ಯವಿದೆ. ರಿಚ್ ಲುಕ್ ನೀಡುವ ರೂಬಿ, ಎಮ್ರೋಲ್ಡ್ ಸಿಝೆಡ್ ಸ್ಟೋನ್ ಗಳಲ್ಲಿ ಮಾಡಿದ ಚನ್ನಾಭರಣಗಳ ಸಂಗ್ರಹವಿದೆ. ಉತ್ತಮ ಕಾರ್ಯ ಕೌಶಾಲ್ಯತೆ ಹೊಂದಿರುವ ಕೊಲ್ಕತ್ತಾ, ಬೆಂಗಾಳಿ, ಬಾಂಬೆ ಶೈಲಿಯ ವೆಡ್ಡಿಂಗ್ ಸೆಟ್ಟ್ ಗಳು ಸಹ ದೊರೆಯುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ. ಕೊಲ್ಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲೆಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಬೆಂಗಾಲಿ ಹ್ಯಾಂಡ್ ಮೇಡ್ ಚೈನ್, ಕೊಯಮುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಕೇರಳ ಹ್ಯಾಂಡ್ ಮೇಡ್ ಚೈನ್ಸ್, ಇಂಡೋ ಇಟೇಲಿಯನ್ ಚೈನ್ಸ್ ಸಹಿತ ಹಲವಾರು ಬಗೆಯ ವಿನೂತನ ಶೈಲಿಯ ಚಿನ್ನಾಭರಣಗಳು ಲಭ್ಯವಿದೆ.
ವಿವಿಧ ವಿನ್ಯಾಸದ ಪೆಂಡೆಂಟ್ ಗಳು:
ವಿವಿಧ ವಿನ್ಯಾಸದ ಬೆಂಗಾಳಿ ವರ್ಕ್ ನ ಪೆಂಡೆಂಟ್, ಪಾರಂಪರಿಕ ಲಕ್ಷ್ಮೀ ಪೆಂಡೆಂಟ್, ಮಲ್ಲಿಗೆ ಮೊಗ್ಗು ಪೆಂಡೆಂಟ್, ಗಿಲಿಯೋಲೆ ಪೆಂಡೆಂಟ್, ಪಿಲಿಗಿರಿ ವರ್ಕ್ ಪೆಂಡೆಂಟ್, ಎಂಬೋಸಿಂಗ್ ಪೆಂಡೆಂಟ್ ಸಹಿತ ವಿವಿಧ ರೀತಿಯ ಪೆಂಡೆಂಟ್ ಗಳು ಲಭ್ಯವಿದೆ.
ಬೆಳ್ಳಿಯ ಆಭರಣಗಳು ಲಭ್ಯ:
ಕಾಲು ಚೈನ್, ಕಾಲುಂಗುರ, ಸರಗಳು, ಉಂಗುರಗಳು, ಬರ್ತ್ ಸ್ಟೋನ್ ಉಂಗುರಗಳು, ಪೆಂಡೆಂಟ್ ಗಳು, ಮಕ್ಕಳ ದೃಷ್ಟಿಬಳೆ, ದೃಷ್ಟಿ ಚೈನ್ ಗಳು, ಬೆಳ್ಳಿಯ ಮದುಪರ್ಕ, ದೀಪ, ವಿವಿಧ ರೀತಿಯ ಆರತಿಗಳು, ಹರಿವಾಣ, ಬೆಳ್ಳಿಯ ಆರ್ಟ್ ವರ್ಕ್ ಗಳು ಲಭ್ಯವಿದೆ. ಸಿಲ್ವರ್ ಫಾಯಿಲ್ ಕಲೆಕ್ಷನ್ ನ ಫ್ರೇಮ್ ಗಳು, ಪ್ರೈಮಾ ಆರ್ಟ್ ಮತ್ತು ಆರ್ಯ ಆರ್ಟ್ ನ ಬ್ರ್ಯಾಂಡೆಡ್ ಗಿಫ್ಟ್ ಫಾಯಿಲ್ ಕಲೆಕ್ಷನ್ ಗಳು ದೊರೆಯುತ್ತದೆ.
`ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ:
ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತಿ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು 500 ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ. ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ಧತಿಯಲ್ಲಿ ಬೋನಸ್ ಲಭಿಸಲಿದೆ. ಸಂಸ್ಥೆಯ ಉದ್ಘಾಟನಾ ದಿನದಿಂದ ಸಪ್ತ ಅಕ್ಷಯ ಯೋಜನೆಗೆ ಸೇರ್ಪಡೆಗೊಳ್ಳುವ ಗ್ರಾಹಕರಿಗೆ ವಿಶೇಷ ಉಡುಗೊರೆಗಳನ್ನು ನೀಡುತ್ತಾ ಬಂದಿದೆ.
ಸಪ್ತ ಜ್ಯುವೆಲ್ಸ್ ವಿಶೇಷತೆಗಳು:
*ವೆಡ್ಡಿಂಗ್ ಸೆಟ್ಟ್ ಗಳ ಬೃಹತ್ ಸಂಗ್ರಹ
*ಬೆಳ್ಳಿಯ ಆಭರಣಗಳ ಮೇಲೆ 5% ಡಿಸ್ಕೌಂಟ್
*ಪ್ರತೀ 5000ರೂ. ಖರೀದಿಗೆ ಚಿನ್ನದ ನೆಕ್ಲೆಸ್ ಗೆಲ್ಲುವ ಅವಕಾಶ
*ಸಪ್ತ ಅಕ್ಷಯ ಯೋಜನೆಗೆ ಸೇರುವವರಿಗೆ ಸಿಗಲಿದೆ ವಿಶೇಷ ಉಡುಗೊರೆ
*ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ
*916 ಶುದ್ಧತೆಯ ಹೆಚ್.ಯು.ಐ.ಡಿ. ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳು
*ದೇವರ-ದೈವಗಳ ಆಭರಣಗಳು ಮತ್ತು ಪರಿಕರಗಳು