ಬಡವರಿಗೆ ಅಕ್ಕಿ ಕೊಡದಂತೆ ಕೇಂದ್ರ ಸರಕಾರ ತಡೆಒಡ್ಡಿದೆ: ಅಶೋಕ್ ರೈ
ಪುತ್ತೂರು: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ 10 ಕೇಜಿ ಉಚಿತ ಅಕ್ಕಿಯೂ ಸೇರಿಕೊಂಡಿದೆ, ಆದರೆ 10 ಕೆ ಜಿ ಅಕ್ಕಿ ಬಡವರಿಗೆ ನೀಡದಂತೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅದಕ್ಕೆ ತಡೆ ಒಡ್ಡಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಅಳಿಕೆಯಲ್ಲಿ ನಡೆದ ಅಳಿಕೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಡವರು ಮೂರು ಹೊತ್ತು ಚೆನ್ನಾಗಿ ಊಟ ಮಾಡಬೇಕು, ರಾಜ್ಯದಲ್ಲಿ ಯಾರೂ ಹಸಿವನಿಂದ ಇರಬಾರದು ಎಂದು ಸಿದ್ದರಾಮಯ್ಯ ನೇತೃತ್ವದ ಸರಕಾರ ಅನ್ನದಾಸೋಹ ಯೋಜನೆಯನ್ನು ಜಾರಿ ಮಾಡಿತ್ತು. ಕೇಂದ್ರ ಸರಕಾರ ಆರಂಭದಲ್ಲಿ ಅಕ್ಕಿ ಕೊಡುವುದಾಗಿ ಒಪ್ಪಿಕೊಂಡು ಬಳಿಕ ಅಕ್ಕಿ ಕೊಡದೆ ವಂಚನೆ ಮಾಡಿದೆ ಇದರಿಂದ ರಾಜ್ಯದ ಬಡವರಿಗೆ ಅನ್ಯಾಯವಾಗುವಂತೆ ಮಾಡಿದೆ ಎಂದು ಹೇಳಿದ ಅವರ ತಿನ್ನುವ ಅನ್ನಕ್ಕೆ ಅಡ್ಡಿ ಮಾಡುವುದು ಭಾರತದ ಸಂಸ್ಕಾರವಲ್ಲ ಯರೂ ಇಂಥಹ ಕೆಲಸವನ್ನು ಮಾಡಬಾರದು ಎಂದು ಹೇಳಿದರು.
ಕೇಂದ್ರ ದಾಸ್ತಾನು ಕೊಠಡಿಯಲ್ಲಿ ಸಾಕಷ್ಟು ಪ್ರಮಣದಲ್ಲಿ ಅಕ್ಕಿ ಇದ್ದು ಅದನ್ನು ಮಾರಾಟ ಮಾಡದೇ ಇದ್ದರೆ ಹಾಳಾಗಿ ಹೋಗಬಹುದು. ರಾಜ್ಯ ಸರಕಾರ ಕೇಂದ್ರದಿಂದ ಉಚಿತವಾಗಿ ಅಕ್ಕಿ ಕೇಳಿಲ್ಲ. ಹಣ ಕೊಟ್ಟರೂ ಕರ್ನಾಟಕಕ್ಕೆ ಅಕ್ಕಿ ಕೊಡುವುದಿಲ್ಲ ಎಂದು ಕೇಂದ್ರದ ಬಿಜೆಪಿ ಸರಕಾರ ಹೇಳಿದೆ ಎಂದು ಶಾಸಕರು ಹೇಳಿದರು. ತಿನ್ನುವ ಅನ್ನಕ್ಕೆ ಮಣ್ಣು ಹಾಕಿದ ಬಿಜೆಪಿಗರಿಗೆ ಜನ ತಕ್ಕ ಪಾಠ ಕಲಿಸಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಬಡವರ ಪರ ಇರುವ ರಾಜ್ಯದ ಕಾಂಗ್ರೆಸ್ ಸರಕಾರ ಬಡವರ ನೆಮ್ಮದಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಿದೆ. ಬಡವರು ಇನ್ನು ಮುಂದೆ ನೆಮ್ಮದಿಯ ದಿನಗಳನ್ನು ಕಾಣಬಹುದಾಗಿದೆ. ಉಚಿತ ಬಸ್ ಪ್ರಯಾಣ, ಉವಿತ ವಿದ್ಯುತ್, ಸೇರಿದಂತೆ ಒಟ್ಟು ಐದು ಗ್ಯಾರಂಟಿಗಳನ್ನು ಕೊಡುವ ಮೂಲಕ ಬಡವರ ಕಣ್ಣೀರೊರೆಸಲು ಕಾಂಗ್ರೆಸ್ ಸರಕಾರ ಬದ್ದವಾಗಿದೆ ಎಂದು ಹೇಳಿದರು. ಕೇಂದ್ರದ ಬಡವರ ವಿರೋಧಿ ಧೋರಣೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಶಾಸಕರು ಹೇಳಿದರು.
ತೆಂಗಿನ ಕಾಯಿ ಒಡೆದದ್ದೇ ಒಡೆದದ್ದು ಕೆಲಸ ಆಗಲಿಲ್ಲ
ನಿಮ್ಮ ರಸ್ತೆಗೆ ಅನುದಾನ ಕೊಡುತ್ತೇನೆ, ನಿಮ್ಮ ತಡೆಗೋಡೆಗೆ ಅನುದಾನ ಕೊಡುತ್ತೇನೆ, ಅದಕ್ಕೆ ಕೊಡುತ್ತೆನೆ, ಇದಕ್ಕೆ ಇಷ್ಟು ಬರುತ್ತದೆ ಎಂದು ಹೇಳಿ ಅಲ್ಲಲ್ಲಿ ಫ್ಲೆಕ್ಸ್ ಹಾಕಿಸಿ ಒಂದಷ್ಟು ಜನರನ್ನು ಸೇರಿಸಿ ಸಿಕ್ಕಸಿಕ್ಕಲ್ಲಿ ತೆಂಗಿನ ಕಾಯಿ ಒಡೆದಿದ್ದಾರೆ ವಿನಾ ಕಾಮಗಾರಿಗಳು ನಡೆದಿಲ್ಲ ಎಂದು ಶಾಸಕ ಅಶೋಕ್ ರೈ ಆರೋಪಿಸಿದರು. ತೆಂಗಿನ ಕಾಯಿ ಒಡೆದ ಬಹುತೇಕ ಕಡೆಗಳಿಗೆ ಅನುದಾನವನ್ನು ಇಟ್ಟೇ ಇಲ್ಲ ಆದರೂ ಜನರನ್ನು ನಂಬಿಸಲು ಕಾಯಿ ಒಡೆದು ಹೋಗಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಎಂ ಎಸ್ ಮಾತನಾಡಿ ಅಳಿಕೆ ಅಂದರೆ ಅದು ಬಿಜೆಪಿಯ ಭದ್ರಕೋಟೆ ಎಂಬ ಮಾತಿತ್ತು ಆದರೆ ಅದು ಈಗ ಬದಲಾಗಿದೆ. ಜನ ವಿದ್ಯವಂತರಾಗಿದ್ದು ದಗಲ್ಬಾಜಿ ಮಾಡುವ ಬಿಜೆಪಿಯನ್ನು ದೂರ ಇಟ್ಟಿದ್ದಾರೆ. ಅಳಿಕೆ ಈಗ ಕಾಂಗ್ರೆಸ್ ಶಕ್ತಿ ಕೇಂದ್ರವಾಗಿದೆ. ಪುತ್ತೂರು ಶಾಸಕರ ನೇತೃತ್ವದಲ್ಲಿ ಅಳಿಕೆ ಗ್ರಾಮ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿದರು.
ವೇದಿಕೆಯಲ್ಲಿ ಅಳಿಕೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೀತಾರಾಂ ಶೆಟ್ಟಿ, ರಮಾನಾಥ ವಿಟ್ಲ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮುರಳೀಧರ್ ರೈ ಮಠಂತಬೆಟ್ಟು, ಪ್ರವೀಣ್ ಚಂಧ್ರ ಆಳ್ವ , ಅಳಿಕೆ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಗ್ರಾಪಂ ಸದಸ್ಯರುಗಳಾದ ಪದ್ಮನಾಭಪೂಜಾರಿ, ಬಬಿತಾ, ಸರೋಜಿನಿ, ಸದಾಶಿವ ಶೆಟ್ಟಿ, ರವೀಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪೆರುವಾಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪೆರುವಾಯಿ ಗ್ರಾಪಂ ಅಧ್ಯಕ್ಷರಾದ ಬಾಲಕೃಷ್ಣ ಪುಜಾರಿ, ಸದಸ್ಯರುಗಳಾದ ಮಾಲತಿ, ಕುಮಾರಿ ರಶ್ಮಿ, ರಾಜೇಂದ್ರ ರೈ, ವಲಯಾಧ್ಯಕ್ಷರಾದ ಪಂಚ ಬಾಲ ಸೆಟ್ಟಿ, ಬೂತ್ ಅಧ್ಯಕ್ಷರಾದ ಕಾನ ಪುತ್ತು, ರಾಲ್ಫ್ ಡಿಸೋಜಾ, ಗೋಪಾಲ ನಾಯ್ಕ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ರಂಜಿತ್, ಬ್ಲಾಕ್ ಕಾರ್ಯದರ್ಶಿ ಸಿದ್ದಿಕ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಶೋಕ್ ಡಿಸೋಜಾಮತ್ತಿತರರು ಉಪಸ್ತಿತರಿದ್ದರು.