ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ವರದ ಶಂಕರ ವ್ರತ ಪೂಜೆಯ ಫಲ-20 ಕೆ.ಜಿ ಶ್ರೀಗಂಧದ ಕೊರಡು ಸಮರ್ಪಣೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವರದ ಶಂಕರ ವ್ರತ ಪೂಜೆ ಜು.1 ರಂದು ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಇದೇ ಸಂದರ್ಭ ಸರಕಾರದ ಸಬ್ಸಿಡಿ ದರದಲ್ಲಿ ಖರೀದಿಸಿದ 20 ಕೆಜಿ ಶ್ರೀಗಂಧವನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲಾಯಿತು.

ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಮತ್ತು ರಾಜೇಶ್ ಭಟ್ ಅವರ ವೈದಿಕತ್ವದಲ್ಲಿ ಪೂಜೆ ಆರಂಭಗೊಂಡಿತು. ಕೇಕನಾಜೆ ಗಣೇಶ್ ಭಟ್ ಅವರು ಶ್ರೀ ವರದ ಶಂಕರ ವ್ರತ ಪೂಜೆಯ ಮಹತ್ವ ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್‌ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ಬಿ ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಬಿ.ಕೆ.ವೀಣಾ, ಡಾ.ಸುಧಾ ಎಸ್ ರಾವ್ ಸಹಿತ ಎಪಿಎಂಸಿ ಮಾಜಿ ಸದಸ್ಯೆ ಪುಲಸ್ತ್ಯ ರೈ, ದಂಬಕಾನ ಸದಾಶಿವ ರೈ, ರತ್ನಾಕರ ನಾಕ್ ಮತ್ತಿತರ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here