‘ಗೃಹ ಜ್ಯೋತಿ’ಗೆ ಡೆಡ್ ಲೈನ್ ಇಲ್ಲ

0

ಬೆಂಗಳೂರು:ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಲು ಡೆಡ್ ಲೈನ್ ಇಲ್ಲ, ಆದರೆ ಈ ತಿಂಗಳು ಉಚಿತ ವಿದ್ಯುತ್ ಸಿಗಬೇಕೆಂದರೆ ಜುಲೈ 25ರೊಳಗೆ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಿದರೆ ಆಗಸ್ಟ್ ತಿಂಗಳ ಬಿಲ್‌ನಲ್ಲಿ ಶೂನ್ಯ ಬಿಲ್ ಎಂದು ಬರುತ್ತದೆ.ಇಲ್ಲದಿದ್ದರೆ ನಾಗರಿಕರು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.


200 ಯೂನಿಟ್ ಒಳಗೆ ವಿದ್ಯುತ್ ಬಳಸುವ ರಾಜ್ಯದ ಎಲ್ಲಾ ನಾಗರಿಕರಿಗೂ ಈ ತಿಂಗಳಿನಿಂದ ಉಚಿತ ವಿದ್ಯುತ್ ದೊರಕಲಿದ್ದು ನಾಗರಿಕರು ಆದಷ್ಟು ಶೀಘ್ರ ಅರ್ಜಿ ಸಲ್ಲಿಸಿದರೆ ಒಳ್ಳೆಯದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.


86.5 ಲಕ್ಷ ಜನರಿಂದ ಅರ್ಜಿ:
ಗೃಹ ಜ್ಯೋತಿ ಯೋಜನೆಗೆ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ.ಜೂನ್ ತಿಂಗಳ ವಿದ್ಯುತ್ ಬಿಲ್ ಜುಲೈ ತಿಂಗಳಿಗೆ ಬರುತ್ತದೆ. ಜುಲೈ ತಿಂಗಳಿನಿಂದ ಎಲ್ಲಾ ಫಲಾನುಭವಿಗಳಿಗೆ ಉಚಿತ ಕರೆಂಟ್ ಜಾರಿಯಾಗಲಿದೆ. ಗೃಹಜ್ಯೋತಿಗೆ ಅರ್ಜಿ ಹಾಕದವರಿಗೆ ಮುಂದಿನ ತಿಂಗಳು ಬಿಲ್ ಬರುತ್ತೆ.ಗೃಹಜ್ಯೋತಿ ಲಾಭ ಪಡೆಯಲು ಎಲ್ಲರೂ ಅರ್ಜಿ ಹಾಕಲೇಬೇಕು. ಆದಷ್ಟು ಬೇಗ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಒಳ್ಳೆಯದು.
ಅರ್ಜಿ ಹಾಕಲು ದಿನಾಂಕದ ಗಡುವು ಇಲ್ಲ. ಆದರೆ ಸರ್ಕಾರದಿಂದ ಉಚಿತ ಸಿಗಬೇಕೆಂದರೆ ನಾಗರಿಕರು ಅರ್ಜಿ ಹಾಕಲೇಬೇಕು.ಆದಷ್ಟು ಬೇಗನೆ ಅರ್ಜಿ ಹಾಕಿದರೆ ಜನರಿಗೇ ಲಾಭ, ಇಲ್ಲದಿದ್ದರೆ ವಿದ್ಯುತ್ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here