![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ ನೆರ್ಲಪ್ಪಾಡಿ ನಿವಾಸಿ ಪ್ರಗತಿಪರ ಕೃಷಿಕ ರಾಮ ನಾಯ್ಕ (83 ವ.)ರವರು ಅಲ್ಪಕಾಲದ ಅನಾರೋಗ್ಯದಲ್ಲಿ ಜು.1 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಸುಂದರಿ, ಪುತ್ರರಾದ ನಾರಾಯಣ, ಸೇಸಪ್ಪ, ರಘುನಾಥ್, ಶ್ರೀಧರ ಪುತ್ರಿಯರಾದ ಲಲಿತಾ, ಪುಷ್ಪವತಿ, ವಿಜಯ, ನಿರ್ಮಲಾ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮರಿಮಕ್ಕಳನ್ನು ಅಗಲಿದ್ದಾರೆ.