ಪುತ್ತೂರು: ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಉದ್ಘಾಟನೆಯು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್ ಅಧ್ಯಕ್ಷತೆಯಲ್ಲಿ ನಡೆಯಿತು. ವಿವಿಧ ಸಂಘಗಳ ಉದ್ಘಾಟನೆಯನ್ನು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಫೆಲ್ಸಿ ಡಿಸೋಜ ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊ, ಇ.ಎಲ್.ಸಿ. ಸಂಘದ ಅಧ್ಯಕ್ಷೆ ನಿಷ್ಮಾ, ಪರಿಸರ ಸಂಘದ ಅಧ್ಯಕ್ಷೆ ಅಫ್ರೀದಾ, ಕ್ರೀಡಾ ಹಾಗೂ ಯೋಗ ಸಂಘದ ಅಧ್ಯಕ್ಷೆಇಂಶ, ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ತಲ್ಹ, ಮಕ್ಕಳ ಹಕ್ಕು ಹಾಗೂ ಅಂಚೆ ಚೀಟಿ ಸಂಘದ ಅಧ್ಯಕ್ಷೆ ಫಿಝ, ಕ್ವಿಜ್ ಹಾಗೂ ವೈ.ಎಸ್.ಎಮ್. ಸಂಘದ ಅಧ್ಯಕ್ಷೆ ಜೇಷ್ಠ.ಪಿ, ವಿಜ್ಞಾನ ಹಾಗೂ ಗಣಿತ ಸಂಘದ ಅಧ್ಯಕ್ಷೆ ನಿರೀಕ್ಷಾ, ಸ್ವಚ್ಛಗ್ರಹ ಹಾಗೂ ಗ್ರಾಹಕರ ಸಂಘದ ಅಧ್ಯಕ್ಷೆ ಶಿಝ ನಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಅಭಿವ್ಯಕ್ತಪಡಿಸಲು ಹಲವು ಸಂಘಗಳು ವೇದಿಕೆಯನ್ನು ಕಲ್ಪಿಸುತ್ತವೆ. ಇಲ್ಲಿ ವಿದ್ಯಾರ್ಥಿನಿಯರು ಸಮಯವನ್ನು ಸೂಕ್ತವಾಗಿ ಬಳಸಿಕೊಂಡು ತಮ್ಮಲ್ಲಿರುವ ಕೌಶಲ್ಯ ಹಾಗೂ ಪ್ರತಿಭೆಗಳನ್ನು ಹೊರ ತರಲು ಪ್ರಯತ್ನಿಸಿ ಉತ್ತಮ ನಾಗರಿಕರಾಗಬೇಕು ಎಂದರು.
ಸಾಂಕೇತಿಕವಾಗಿ ಉದ್ಘಾಟನೆಯನ್ನು ಮಾಡಿದ ಹಿರಿಯ ಶಿಕ್ಷಕಿ ಫೆಲ್ಸಿ ಡಿಸೋಜ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗಳು ಬೆಳಕಿಗೆ ಬರುವುದು ಸಂಘಗಳ ಮೂಲಕ. ಸಂಘಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಮತ್ತು ಮನೋವಿಕಾಸಕ್ಕೆ ಅವಕಾಶವಿದೆ. ಈ ಪ್ರತಿಭೆಗಳನ್ನು ಹೆತ್ತವರ ಹಾಗೂ ಗುರುಗಳ ಮಾರ್ಗದರ್ಶನದಿಂದ ಬಲಪಡಿಸಬೇಕೆಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಘಗಳು ಸಹಕಾರಿಯಾಗುತ್ತವೆ ಎಂದರು.
ಇ.ಎಲ್.ಸಿ. ಸಂಘದ ನಂದಿತ, ಪರಿಸರ ಸಂಘದ ಅನುಜ್ಞಾ ರೈ, ಕ್ರೀಡಾಸಂಘದ ಮಿಂಶ, ಸಾಂಸ್ಕೃತಿಕ ಸಂಘದ ವಂದ್ಯ, ಮಕ್ಕಳ ಹಕ್ಕು ಹಾಗೂ ಅಂಚೆ ಚೀಟಿ ಸಂಗ್ರಹ ಸಂಘದ ಫಾತಿಮತ್ ಶೈಮಾ, ಕ್ವಿಜ್ ಹಾಗೂ ವೈ.ಎಸ್.ಎಮ್ ಸಂಘದ ರೀಶಲ್, ವಿಜ್ಞಾನ ಹಾಗೂ ಗಣಿತ ಸಂಘದ ಸಂಮ್ರೀನಾ, ಸ್ವಚ್ಛ ಗ್ರಹ ಹಾಗೂ ಗ್ರಾಹಕರ ಸಂಘದ ಫಾತಿಮತ್ ಹುನೈಫ ವಿವಿಧ ಸಂಘಗಳ ಮಹತ್ವವನ್ನು ತಿಳಿಸಿದರು. ವಂದ್ಯ ಪ್ರಭು ಜಿ. ಸ್ವಾಗತಿಸಿ, ರಿಸ್ತಾ ವಂದಿಸಿದರು. ಎಂ ತಾಜುನ್ನೀಸ ಕಾರ್ಯಕ್ರಮ ನಿರೂಪಿಸಿದರು.