ಉರುವಾಲಿನ ಯುವಕ ದುಬೈನಲ್ಲಿ ಮೃತ್ಯು

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ನಿವಾಸಿ ಮುಹಮ್ಮದ್ ರಾಝಿಖ್ (24) ಎಂಬವರು ಜು.5ರಂದು ದುಬೈನಲ್ಲಿ ನಿಧನರಾಗಿದ್ದಾರೆ.
ಇಲ್ಲಿನ ದಾವೂದ್ ಎಂಬವರ ಪುತ್ರನಾದ ಇವರು ವಿದೇಶದಲ್ಲಿ ಉದ್ಯೋಗಕ್ಕಿದ್ದರು. ಕಳೆದ ವರ್ಷ ಊರಿಗೆ ಬಂದಿದ್ದ ಅವರು ವಿವಾಹವಾಗಿ ಬಳಿಕ ದುಬೈಗೆ ತೆರಳಿದ್ದರು. ದುಬೈನಲ್ಲಿ ಹೊಟೇಲ್ ರೂಂನಲ್ಲಿ ಮಲಗಿದ್ದ ಅವರು ನಿಗದಿತ ಸಮಯದಲ್ಲಿ ಎದ್ದೇಳದ ಕಾರಣ ಹೊಟೇಲ್ ಸಿಬ್ಬಂದಿ ಸಂಶಯಗೊಂಡು ಪರಿಶೀಲನೆ ನಡೆಸಿದ್ದು, ಈ ಸಂದರ್ಭ ಅವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಇವರಿಗೆ ನಾಲ್ಕು ತಿಂಗಳ ಮಗುವೊಂದಿದ್ದು, ಊರಿಗೆ ಬಂದು ಮಗುವಿನ ಮುಖವನ್ನು ನೋಡಿರಲಿಲ್ಲ. ಮೃತರು ಪತ್ನಿ, ತಂದೆ, ತಾಯಿ ಹಾಗೂ ನಾಲ್ವರು ಸಹೋದರಿಯರು, ನಾಲ್ವರು ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here