ಕಡಬ: ಕೋಡಿಂಬಾಳ ಮಡ್ಯಡ್ಕ ನಿವಾಸಿ ಶಾಂತಮ್ಮ (70)ಅವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತ ಶಾಂತಮ್ಮ ಅವರ ಪತಿ ನಿಧನರಾದ ಬಳಿಕ ಮಕ್ಕಳೊಂದಿಗೆ ಸೇರಿ ಮಡ್ಯಡ್ಕದಲ್ಲಿ ಕಬ್ಬಿಣದ ಗೃಹೋಪಕರಣಗಳ ನಿರ್ಮಾಣ ಮತ್ತು ಮರದ ಉಪಕರಣಗಳ ಕೆಲಸ, ಕೆತ್ತನೆಯ ಕೆಲಸಗಳಲ್ಲಿ ನೈಪುಣ್ಯತೆ ಪಡೆದಿದ್ದರು.
ಮೃತರು ಪುತ್ರರಾದ ಸುಧಾಕರನ್,ಸುರೇಶ್,ಜಯೇಶ್,ಪುತ್ರಿ ಪ್ರಸನ್ನಾ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.
