ಇಂದಿನಿಂದ (ಜು.8) 2 ದಿನ ಕಾರುಗಳ ತಪಾಸಣೆ ಸಹಿತ ಹಲವು ಉಚಿತಗಳು; ಪ್ರಿಯ ಗ್ರಾಹಕರಿಗಾಗಿ ಜಿಲ್ಲೆಯ ಪ್ರಮುಖ ಡೀಲರ್ ಭಾರತ್ ಅಟೋಕಾರ್ಸ್ ಆಯೋಜನೆ

0

ಜನರಲ್ ಚೆಕ್ ಅಪ್ ,ಕನ್ಸುಮೇಬಲ್ಸ್ ಟಾಪ್ ಅಪ್ , ವ್ಯಾಲ್ಯೂವೇಶನ್ ಸೇವೆಗಳು ಉಚಿತ.
ಲೇಬರ್ ಹಾಗೂ ಬಿಡಿಭಾಗಗಳ ಮೇಲೂ ರಿಯಾಯಿತಿ.
ಲಕ್ಕಿ ಡ್ರಾ, ಉಚಿತ ಕೊಡುಗೆಗಳು, ಬುಕ್ಕಿಂಗ್ ಗೆ ಸ್ಪೆಶಲ್ ಆಫರ್.
ಮಾಹಿತಿಗಾಗಿ : 9886072730( ಪುತ್ತೂರು, ನೆಲ್ಯಾಡಿ)

ಪುತ್ತೂರು: ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಅದ್ವಿತೀಯ ಸ್ಥಾನ ಪಡೆದುಕೊಂಡಿರುವ, ಮಾರುಕಟ್ಟೆಯಲ್ಲೂ ಛಾಪು ಮೂಡಿಸಿರುವಂತಹ ಹೆಸರಾಂತ ಮಾರುತಿ ಸುಝುಕಿಯು ದ.ಕ ಹಾಗೂ ಉ.ಕ. ಜಿಲ್ಲೆಯ ಪ್ರಮುಖ ಡೀಲರ್ ಸಂಸ್ಥೆ ಕಳೆದ 17 ವರುಷಗಳಿಂದ ಉಭಯ ಜಿಲ್ಲೆಯಲ್ಲಿ ಅತೀ ಹೆಚ್ಚು ಶಾಖೆಗಳನ್ನು ಹೊಂದಿ, ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಹೊರಹೊಮ್ಮಿರುವ ಭಾರತ್ ಅಟೋಕಾರ್ಸ್ ಸಹಭಾಗಿತ್ವದಲ್ಲಿ ಪ್ರಿಯ ಗ್ರಾಹಕರಿಗಾಗಿ ಈ ಎರಡು ದಿನಗಳ ಬೃಹತ್ ಮೆಗಾ ಮಾನ್ಸೂನ್ ಉಚಿತ ತಪಾಸಣೆ ಶಿಬಿರವನ್ನು ಜು.8 ಹಾಗು 9 ಬೆಳಗ್ಗೆ 9 ರಿಂದ 5 ಗಂಟೆವರೆಗೆ ತನ್ನ ಎಲ್ಲಾ ವಿಸ್ತರಣಾ ಮಳಿಗೆಗಳಲ್ಲೂ ಆಯೋಜನೆ ಮಾಡಿದೆ.

ಶಿಬಿರದಲ್ಲಿ ವಾಹನಗಳ ಉಚಿತ ಕನ್ಸ್ಯುಮೇಬಲ್ ಟಾಪ್ ಆಪ್ ಮತ್ತು ಸಾಮಾನ್ಯ ತಪಾಸಣೆ, ಲೇಬರ್ ಮತ್ತು ಬಿಡಿ ಭಾಗಗಳ ಮೇಲೆ ರಿಯಾಯಿತಿ, ಉಚಿತ ಮೌಲ್ಯ ಮಾಪನ, ಕಾರ್ ಕೇರ್ ಟ್ರೀಟ್‌ಮೆಂಟ್‌ಗಳ ಮೇಲೆ ವಿಶೇಷ ಕೊಡುಗೆ, ಲಕ್ಕಿ ಡ್ರಾ, ಉಚಿತ ಕೊಡುಗೆಗಳು ಕೂಡಾ ಲಭ್ಯವಿದ್ದು, ಹೊಸ ವಾಹನಗಳ ಬುಕ್ಕಿಂಗ್ ಮೇಲೆ ಹೆಚ್ಚುವರಿ ರಿಯಾಯಿತಿ ಕೂಡಾ ಪ್ರಕಟಿಸಿದೆ. ಆಸಕ್ತರು ಈ ಶಿಬಿರದ ಲಾಭ ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here