ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ನೂತನ ಅಧ್ಯಕ್ಷರಾಗಿ ಡಾ.ರಾಜೇಶ್ ಬೆಜ್ಜಂಗಳ, ಕಾರ್ಯದರ್ಶಿಯಾಗಿ ಡಾ.ರಾಮಚಂದ್ರ ಕೆ. ಕೋಶಾಧಿಕಾರಿಯಾಗಿ ಸಾಹಿರಾ ಝುಬೈರ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಮಹಮ್ಮದ್ ರಫೀಕ್ ದರ್ಬೆ, ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಕಾರ್ಯದರ್ಶಿಯಾಗಿ ಚಂದ್ರಹಾಸ ರೈ ಬಿ, ನಿಯೋಜಿತ ಅಧ್ಯಕ್ಷರಾಗಿ ಅಶೋಕ್ ನಾಯ್ಕ, ಸಾರ್ಜಂಟ್ ಎಟ್ ಆಮ್ಸ್೯ ಆಗಿ ಸಂತೋಷ್ ಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಅಭಿಜಿತ್ ಕೆ, ಬುಲೆಟಿನ್ ಸಂಪಾದಕರಾಗಿ ಸನತ್ ಕುಮಾರ್ ರೈ, ಸಹ ಸಂಪಾದಕರಾಗಿ ಜಗನ್ನಾಥ್ ಅರಿಯಡ್ಕ, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಜಯಪ್ರಕಾಶ್ ಅಮೈ, ವೃತ್ತಿ ಸೇವಾ ನಿರ್ದೇಶಕರಾಗಿ ಚಿದಾನಂದ ರೈ, ಯುವಜನ ಸೇವಾ ನಿರ್ದೇಶಕರಾಗಿ ಪ್ರದೀಪ್ ಪೂಜಾರಿ, ಸಮುದಾಯ ಸೇವಾ ನಿರ್ದೇಶಕಿಯಾಗಿ ನವ್ಯಶ್ರಿ ನಾಯ್ಕ್, ಅಂತರ್ರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ರಾಕೇಶ್ ಶೆಟ್ಟಿ, ಸಭಾಪತಿಗಳಾಗಿ ಪದ್ಮನಾಭ ಶೆಟ್ಟಿ (ಜಿಎಲ್ ಸಿಸಿ), ರಮೇಶ್ ರೈ ಬೊಳೋಡಿ ( ಸಾರ್ವಜನಿಕ ಸಂಪರ್ಕ), ಶಾಂತಕುಮಾರ್(ಹಾಜರಾತಿ), ಅಶ್ರಪ್ ಪಿ.ಎಂ(ಸದಸ್ಯತನ), ಯತೀಶ್ ಸುವರ್ಣ(ಆತಿಥ್ಯ), ಕುಮಾರಸ್ವಾಮಿ(ಕ್ರೀಡೆ), ಶಿವರಾಮ ಎಂ.ಎಸ್(ಸಾಂಸ್ಕ್ರತಿಕ), ಬಿ.ಟಿ ಮಹೇಶ್ಚಂದ್ರ ಸಾಲಿಯಾನ್(ಪ್ರಚಾರ), ಜಯಪ್ರಕಾಶ್ ಎ ಎಲ್ (ಪ್ರವಾಸ), ಪ್ರಮೋದ್ ಕೆ(ಮಾಹಿತಿ ಹಕ್ಕು), ಕಿರಣ್ ಬಿ.ವಿ(ದತ್ತಿ ನಿಧಿ), ಪುರುಷೋತ್ತಮ ಶೆಟ್ಟಿ( ಪಲ್ಸ್ ಪೋಲಿಯೊ), ಭಾರತಿ ಎಸ್ ರೈ(ಟೀಚ್), ಲಾವಣ್ಯ ನಾಯ್ಕ್, (ಶಿಷ್ಟಾಚಾರ) ಅಮಿತಾ ಎಸ್ ಶೆಟ್ಟಿ ( ಮಹಿಳಾ ಸಬಲೀಕರಣ), ಪುರುಷೋತ್ತಮ ನಾಯ್ಕ್(ನೀರು ಮತ್ತು ನೈರ್ಮಲ್ಯ), ತ್ವೇಜ್ ಎಸ್.ಪಿ(ವೆಬ್ ಸೈಟ್), ವಿಷ್ಣು ಭಟ್ (ಗ್ರಾಹಕ ಹಕ್ಕು), ಸುಧೀರ್ ಶೆಟ್ಟಿ (ವ್ಯವಹಾರ), ನೋಯಲ್ ಡಿ ಸೋಜ( ಆರೋಗ್ಯ), ಜಯಪ್ರಕಾಶ್ ನಾಯ್ಕ್( ಪರಿಸರ), ಹೇಮಚಂದ್ರ(ಆರ್ಥಿಕ ಅಭಿವೃದ್ದಿ), ಸತ್ಯ ಶಂಕರ್ (ವೃತ್ತಿ ಮಾಹಿತಿ) , ಪ್ರದೀಪ್ ಬೊಳುವಾರು(ಜಿಲ್ಲಾ ಯೋಜನೆಗಳು), ರಮೇಶ್ ರೈ ಡಿಂಬ್ರಿ ( ಮಾನವ ಸಂಪನ್ಮೂಲ ಅಭಿವೃದ್ದಿ), ಕ್ಲಬ್ ತರಬೇತುದಾರರಾಗಿ ಸಂತೋಷ್ ಕುಮಾರ್ ಶೆಟ್ಟಿ, ವಲಯ ಸೇನಾನಿ ನವೀನ್ ಚಂದ್ರ ನಾಯ್ಕ್, ಅಂಗನವಾಡಿ ಅಭಿವೃದ್ದಿ ಕಾರ್ಯಕ್ರಮಗಳ ಜಿಲ್ಲಾ ಚೇರ್ ಮ್ಯಾನ್ ಆಗಿ ಸಂತೋಷ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ರಾಜೇಶ್ ಬೆಜ್ಜಂಗಳರವರು ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು. ಮೈಸೂರು ಮುಕ್ತ ವಿವಿಯಿಂದ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮ, ದೆಹಲಿಮಾನಿ ವಿವಿಯಿಂದ ಸಂಸ್ಕೃತದಲ್ಲಿ ಪ್ರಥಮ ದೀಕ್ಷ ತೇರ್ಗಡೆಯಾಗಿದ್ದಾರೆ. ಜೂನಿಯರ್ ಛೇಂಬರ್ ಇಂಟರ್ ನ್ಯಾಷನಲ್, ವಿಶ್ವಬ್ಯಾಂಕ್ ಸ್ವಚ್ಛ ಭಾರತ್ ಮಿಷನ್,ವಿಶ್ವ ಸಂಸ್ಥೆಗಳ 200 ಆನ್ ಲೈನ್ ಕೋರ್ಸ್ ಹಾಗೂ ರೋಟರಿ ಇಂಟರ್ ನ್ಯಾಷನಲ್ ಇದರ 185 ಆನ್ ಲೈನ್ ಕೋರ್ಸ್ ಗಳು ಸೇರಿದಂತೆ ಒಟ್ಟು 385 ಆನ್ ಲೈನ್ ಕೋರ್ಸ್ ಗಳನ್ನು ಪೂರ್ತಿಗೊಳಿಸಿದ್ದಾರೆ. ರಾಜೇಶ್ ಬೆಜ್ಜಂಗಳರವರು ಜೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಇದರ ತರಬೇತುದಾರರಾಗಿದ್ದು ವಲಯ ತರಬೇತುದಾರರಾಗಿ 600 ಕ್ಕಿಂತಲೂ ಅಧಿಕ ತರಬೇತಿ ನೀಡಿದ್ದಾರೆ. 2014ರಲ್ಲಿ ಜೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದು, ಘನ ತ್ಯಾಜ್ಯ ವಿಲೇವಾರಿ, ನೀರು ನಿರ್ವಹಣೆ, ಸಹಜ ಕೃಷಿ, ಪಂಚಾಯತ್ ರಾಜ್, ಕಿರು ಆರ್ಥಿಕ ವ್ಯವಹಾರ, ವ್ಕಕ್ತಿತ್ವ ವಿಕಸನ , ವೃತ್ತಿ ಮಾರ್ಗದರ್ಶನ, ಶಿಕ್ಷಕರ ತರಬೇತಿ ಇತ್ಯಾದಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕೇರಳ ರಾಜ್ಯ ಯೋಜನಾ ವಿಭಾಗದಲ್ಲಿ ಜಲಾನಯನ ಅಭಿವೃದ್ದಿ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ರಾಜೀವ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ, ಕೇರಳದ ಕುಟುಂಬ ಶ್ರೀ ಯೋಜನೆಯ ಮಳೆನೀರು ಇಂಗಿಸುವ ಯೋಜನೆ ಗಳ ಸಂಪನ್ಮೂಲ ವ್ಯಕ್ತಿ ಹಾಗೂ ಮಾರ್ಗದರ್ಶಕರಾಗಿದ್ದಾರೆ.
ಘನ ತ್ಯಾಜ್ಯ ವಿಲೇವಾರಿ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದು, ವಿವಿಧ ಪತ್ರಿಕೆಗಳಲ್ಲಿ 325 ಕ್ಕಿಂತಲೂ ಹೆಚ್ಚು ಲೇಖನಗಳು ಪ್ರಕಟಗೊಂಡಿದೆ. ಎರಡು ಕವನ ಸಂಕಲನ ಮತ್ತು ಜೀವನಗಾಥೆ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಯಕ್ಷಗಾನ, ನಾಟಕ ಇವರ ಹವ್ಯಾಸಗಳು, ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಟೀಲು ಶ್ರೀದೇವಿ ಚರಿತೆ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಕೇರಳದ ಮಲೆಯಾಳ ಭೂತಗಳ ಕುರಿತಾಗಿ ತಯಾರಾಗಿ ಕರಾವಳಿಯ ಪ್ರಸಿದ್ದ ವಿ4 ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ‘ದೈವ ನುಡಿ’ ತುಳು ಸಾಕ್ಷ್ಯ ಚಿತ್ರದ ನಿರ್ದೇಶಕರಾಗಿದ್ದರು. ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿದ್ದಾರೆ. ಸ್ವಚ್ಚ ಪುತ್ತೂರು ಯೋಜನೆಯ ಯೋಜನಾ ನಿರ್ದೇಶಕ ಹಾಗೂ ಪ್ರಸ್ತುತ ಸಂಶೋಧನಾ ಪ್ರಾಧ್ಯಾಪಕರಾಗಿ 8 ಮಂದಿ ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ 2 ಮಂದಿಗೆ ಪೋಸ್ಟ್ ಡಾಕ್ಟರೇಟ್ ಸಹೋದ್ಯೋಗಿ(Post Doctorate Fellow) ಪದವಿಗೆ ಮಾರ್ಗದರ್ಶಕರಾಗಿದ್ದಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ.ರಾಮಚಂದ್ರ ಕೆ.ರವರು ನೆಲ್ಯಾಡಿ ಕೌಕ್ರಾಡಿ ಗ್ರಾಮದ ಸೇಸಪ್ಪ ಗೌಡ ಹಾಗೂ ಧರ್ಣಮ್ಮ ದಂಪತಿ ಪುತ್ರರಾಗಿ ಜನಿಸಿದ್ದು, ಪ್ರಾಥಮಿಕ ಶಿಕ್ಷಣವನ್ನು ನೆಲ್ಯಾಡಿ ಶಾಲೆಯಲ್ಲಿ, ಪ್ರೌಢ, ಪಿಯು, ಬಿಎ ಪದವಿ ಶಿಕ್ಷಣವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ, ಸ್ನಾತಕೋತ್ತರ ಬಿಪಿಎಡ್ ಪದವಿಯನ್ನು ತೃತೀಯ ರ‍್ಯಾಂಕ್ ನೊಂದಿಗೆ ಬೆಂಗಳೂರಿನ ಕಾಲೇಜಿನಲ್ಲಿ, ಎಂಪಿಎಡ್ ಪದವಿಯನ್ನು ತೃತೀಯ ರ‍್ಯಾಂಕ್ ನೊಂದಿಗೆ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ, ಎಂಎ ಅರ್ಥಶಾಸ್ತ್ರ ಪದವಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ, ಎಂಫಿಲ್ ಪದವಿಯನ್ನು ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ, ಎನ್.ಐ.ಎಸ್ ಡಿಪ್ಲೋಮ ಪದವಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ, ಪಿ.ಎಚ್.ಡಿ ಪದವಿಯನ್ನು ದ್ರಾವಿಡ ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತಾರೆ. ರಾಮಚಂದ್ರರವರು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಪಟುವಾಗಿದ್ದು ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದು, ಜ್ಯೂನಿಯರ್ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತಾಂತ್ರಿಕ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ. ಶೈಕ್ಷಣಿಕವಾಗಿ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಾಗೂ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ರಾಜ್ಯದ ಎಲ್ಲ ಕಾಲೇಜು ಪದವಿ ವಿದ್ಯಾರ್ಥಿಗಳ ಕಡ್ಡಾಯ ಪತ್ರಿಕೆಯಾದ ಶಾರೀರಿಕ ಶಿಕ್ಷಣ ಮತ್ತು ಕ್ರೀಡೆಯ ಬಗ್ಗೆ ಪಠ್ಯಪುಸ್ತಕವನ್ನು ಬರೆದಿದ್ದು ಪ್ರಸ್ತುತ ಇವರು ಡಾ|ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇಲ್ಲಿ ಕ್ರೀಡಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಸಾಹಿರಾ ಕೆ.ಝುಬೈರ್ ರವರು ಬಿ.ಎ ಹಾಗೂ ಎಲ್.ಎಲ್.ಬಿ ಪದವೀಧರೆಯಾಗಿದ್ದು, ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಿವಿಲ್, ಕ್ರಿಮಿನಲ್, ಕೌಟುಂಬಿಕ ಪ್ರಕರಣಗಳು, ರಾಜ್ಯ ಸರಕಾರದ ನೋಟರಿ ನ್ಯಾಯವಾದಿಯಾಗಿ, ಮಧ್ಯಸ್ಥರಾಗಿ, ಸಲಹೆಗಾರರಾಗಿ, ಕಾನೂನು ನೆರವು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ, ಕಾನೂನು ನೆರವು ಸಮಿತಿಯ ಸಕ್ರಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಜೇಸಿಐನಲ್ಲಿ, ಕಳೆದ ಐದು ವರ್ಷ ರೋಟರಿ ಸ್ವರ್ಣದಲ್ಲಿ, ಶಿಕ್ಷಣ ಸಂಪನ್ಮೂಲದಲ್ಲಿ, ಅಸಹಾಯಕ ಸೇವಾ ಟ್ರಸ್ಟ್ ನಲ್ಲಿ ಹಾಗೂ ಇತರ ವಿದ್ಯಾಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ನೀಡುತ್ತಿದ್ದಾರೆ. ಪ್ರಸ್ತುತ ಇವರು ಪತಿ ಕಿಲಾಬ್ ಝುಬೈರ್ ರವರೊಂದಿಗೆ ದರ್ಬೆ ಪ್ರಕಾಶ್ ಮಂಝಿಲ್ ನಲ್ಲಿ ವಾಸ್ತವ್ಯ ಹೊಂದಿರುತ್ತಾರೆ.
ಜು.11 ರಂದು ಪದಪ್ರಧಾನ:
ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜು.11 ರಂದು ಬಪ್ಪಳಿಗೆ-ಬೈಪಾಸ್ ರಸ್ತೆಯ ಆಶ್ಮಿ ಕಂಫರ್ಟ್ ಸಭಾಂಗಣದಲ್ಲಿ ಸಂಜೆ ಜರಗಲಿದೆ. ರೋಟರಿ 3181 ಇದರ ಪಿಡಿಜಿ ಡಾ.ಆರ್.ಎಸ್ ನಾಗಾರ್ಜುನರವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸಲಿದ್ದಾರೆ. ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ, ವಲಯ ಸೇನಾನಿ ನವೀನ್ ಚಂದ್ರ ನಾಯ್ಕ್, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ್ ರೈ ಬೈಕಾಡಿರವರು ಉಪಸ್ಥಿತಲಿರುವರು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.