ನಾಳೆ(ಸೆ.9):ಪುತ್ತೂರು ದರ್ಬೆಯಲ್ಲಿ ‘ಟ್ವೆಂಟಿ ಒನ್ ಬೈಟ್ಸ್’ ಕೆಫೆ ಶುಭಾರಂಭ

0

ಪುತ್ತೂರು: ‘ಟ್ವೆಂಟಿ ಒನ್ ಬೈಟ್ಸ್’ ಕೆಫೆ ಸೆ.9ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜು ಸಮೀಪ ಶುಭಾರಂಭಗೊಳ್ಳಲಿದೆ. ಶುಭಾರಂಭ ಕಾರ್ಯಕ್ರಮದಲ್ಲಿ ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ದುವಾಶೀರ್ವಚನ ನೀಡಲಿದ್ದು ವಿಧಾನ ಸಭೆ ಸ್ಪೀಕರ್ ಯು.ಟಿ ಖಾದರ್ ಕೆಫೆಯನ್ನು ಉದ್ಘಾಟಸಲಿದ್ದಾರೆ. ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆಯ ಮುಖ್ಯಾಧಿಕಾರಿ ಮಧು ಮನೋಹರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.


ಕೆಫೆಯಲ್ಲಿ ಬರ್ಗರ್, ಸ್ಯಾಂಡ್ವಿಚ್, ಪಿಝಾ, ಕ್ಲಬ್ ಸ್ಯಾಂಡ್ವಿಚಸ್, ಪಾಸ್ತಾ, ಫ್ರೈಡ್ ರೈಸ್, ಮೋಮೋಸ್ ಹಾಗೂ ಇನ್ನಿತರ ವಿವಿಧ ಬಗೆಯ ಐಟಂಗಳು, ವಿವಿಧ ವೆರೈಟಿ ಜ್ಯೂಸ್’ಗಳು ಲಭ್ಯವಿರಲಿದೆ ಎಂದು ‘ಟ್ವೆಂಟಿ ಒನ್ ಬೈಟ್ಸ್’ ಕೆಫೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here