ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಮುಖಾರಿ, ಕಾರ್ಯದರ್ಶಿ ಸ್ವಪ್ನ ಜಿ ಗಾಣಿಗ
ಪುತ್ತೂರು: ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿರೋಚಿತ ಸೋಲನ್ನು ಕಂಡ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರಿಂದ ಹಿಂದು ಸಮಾಜಕ್ಕೆ ವಿವಿಧ ರೀತಿಯಲ್ಲಿ ಸಹಾಯಹಸ್ತ ಮಾಡುವ ಮೂಲಕ ಧಾರ್ಮಿಕ, ಆರೋಗ್ಯ, ಶೈಕ್ಷಣಿಕ, ರಾಜಕೀಯದಲ್ಲಿ ಜನರೊಂದಿಗೆ ಬೆರೆಯಲು ಆರಂಭಗೊಂಡ ಪುತ್ತಿಲ ಪರಿವಾರ ಹೊಸ ಸಂಘಟನೆ ಜಿಲ್ಲೆಯಾದ್ಯಂತ ತನ್ನ ಪ್ರಭಾವ ಬೀರಿದ್ದು, ಗ್ರಾಮ ಗ್ರಾಮಗಳಲ್ಲಿ ಸಮಿತಿ ರಚನೆ ಗೊಂಡಿದೆ.
ನೆಕ್ಕಿಲಾಡಿ ಗ್ರಾಮ ಸಮಿತಿಯು ನೆಕ್ಕಿಲಾಡಿ ಶಿವಾನಂದ ಕಜೆ ಅವರ ಮನೆಯಲ್ಲಿ ಪುತ್ತಿಲ ಪರಿವಾರದ ತಾಲೂಕು ಸಮಿತಿ ಪ್ರಮುಖರಾದ ಉಮೇಶ್ ಕೋಡಿಬೈಲು ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅಧ್ಯಕ್ಷರಾಗಿ ರಾಜೇಶ್ ಮುಖಾರಿ, ಕಾರ್ಯದರ್ಸಿಯಾಗಿ ಸ್ವಪ್ನ ಜಿ.ಗಾಣಿಗ, ಬೂತ್ ನಂ.32ರಲ್ಲಿ ಅಧ್ಯಕ್ಷರಾಗಿ ವಿಜಯ ಕುಮಾರ್, ಕಾರ್ಯದರ್ಶಿಯಾಗಿ ಗಂಗಾಧರ, ಬೂತ್ ನಂ 33ರಲ್ಲಿ ಅಧ್ಯಕ್ಷರಾಗಿ ಶಿವಾನಂದ ಕಜೆ, ಕಾರ್ಯದರ್ಶಿಯಾಗಿ ಪ್ರದೀಪ್ ತಾಳೆಹಿತ್ಲು, ಬೂತ್ ನಂ 34ರಲ್ಲಿ ಅಧ್ಯಕ್ಷರಾಗಿ ಗುರುರಾಜ್ ಭಟ್ ನಿರಾಳ, ಕಾರ್ಯದರ್ಶಿ ಹರಿಶ್ ಕುಲಾಲ್, ಬೂತ್ ನಂ 35ರಲ್ಲಿ ಅಧ್ಯಕ್ಷರಾಗಿ ಪ್ರವೀಣ್ ಅಚಾರ್ಯ, ಕಾರ್ಯದರ್ಶಿ ಸುಂದರ ದೇವಾಡಿಗ ಅವರನ್ನು ಆಯ್ಕೆ ಮಾಡಲಾಗಿದೆ. ಪುತ್ತಿಲ ಪರಿವಾರದ ತಾಲೂಕು ಸಮಿತಿಗ ಪ್ರಮುಖರಾದ ಸುಧೀರ್ ಶೆಟ್ಟಿ, ನೆಕ್ಕಿಲಾಡಿ ಗ್ರಾಮದ ಗೌರವ ಸಲಹೆಗಾರರಾದ ಪ್ರಶಾಂತ್ ನೆಕ್ಕಿಲಾಡಿ ಸಹಿತ ಕಾರ್ಯಕರ್ತರು ಉಪಸ್ಥತರಿದ್ದರು.