ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಟ್ಟoಪಾಡಿ ವಲಯ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ ಜು.9 ರಂದು ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆಯಲ್ಲಿ ನಡೆದ ರೆಂಜ ಒಕ್ಕೂಟದ ಒಕ್ಕೂಟ ಸಭೆಯಲ್ಲಿ ನಡೆಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲ್ಲೂಕು ಸದಸ್ಯರಾದ ಜಗನ್ನಾಥ ರೈ ಕೊಮ್ಮಂಡ ಉದ್ಘಾಟಿಸಿ ಶುಭ ಹಾರೈಸಿದರು.ಸಂಪನ್ಮೂಲ ವ್ಯಕ್ತಿ ಯೋಜನೆಯ ಕೃಷಿ ಅಧಿಕಾರಿ ಉಮೇಶ್ ಮಾದಕ ವಸ್ತು ಸೇವನೆಯಿಂದಾಗುವ ಹಾನಿ ಮತ್ತು ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ರೆಂಜ ಒಕ್ಕೂಟದ ಅಧ್ಯಕ್ಷ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಬಾಲಕೃಷ್ಣ ನಾಯ್ಕ ದೆಯ್ಯರಡ್ಕ ಇವರು ಅಧ್ಯಕ್ಷತೆ ವಹಿಸಿದ್ದರು.ಒಕ್ಕೂಟದ ಬೆಟ್ಟoಪಾಡಿ ವಲಯದ ವಲಯಾಧ್ಯಕ್ಷ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರೆಂಜ ಒಕ್ಕೂಟದ ಪದಾಧಿಕಾರಿ ಪ್ರೇಮಲತಾ, ಅಕ್ಕು, ನಳಿನಿ ಹಾಗೂ ರೆಂಜ ಒಕ್ಕೂಟದ ಸದಸ್ಯರು ಹಾಜರಿದ್ದರುವಲಯ ಮೇಲ್ವಿಚಾರಕ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತಮಾಡಿದರು.ರೆಂಜ ಒಕ್ಕೂಟದ ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಕಾರ್ಯಕ್ರಮದ ನಿರೂಪಿಸಿದರು.ಪದಾಧಿಕಾರಿ ಪ್ರೇಮಲತಾ ಸ್ವಾಗತಿಸಿ, ಜಗನ್ನಾಥ್ ವಂದಿಸಿದರು.