ಪುತ್ತೂರು: ಆರ್ಯಾಪು ಗ್ರಾಮದ ಸ.ನಂ 45/2 ರಲ್ಲಿ 0.69 ಎಕ್ರೆ ಜಮೀನಿನಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾರ್ಪಾಡಿ ಇದ್ದು, ಪಹಣಿಯ ಕಾಲಮ್ 11 ರಲ್ಲಿ ಹಂಚು ಛಾವಣಿ ದೇವಸ್ಥಾನ ಎಂದು ದಾಖಲಾಗಿತ್ತು. ‘ಬಿ’ ಗ್ರೇಡ್ ದೇವಳವಾಗಿದ್ದರೂ ಹೆಸರು ದಾಖಲಾಗದ್ದರಿಂದ ಆಡಳಿತಾತ್ಮಕವಾಗಿ ತೊಡಕಾಗಿತ್ತು. ಕಳೆದ ಹಲವು ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲೂ ದೇವರ ದಾಖಲೆ ಸರಿ ಇಲ್ಲ. ಸರಿಪಡಿಸುವಂತೆ ದೇವರ ಸೂಚನೆ ಬಂದಿತ್ತು. ಈ ಬಗ್ಗೆ ವ್ಯವಸ್ಥಾಪನಾ ಸಮಿತಿಯಿಂದ ಕಂದಾಯ ಇಲಾಖೆಯ ಸಹಾಯಕ ಆಯುಕ್ತರಿಗೆ ದೇವರ ಹೆಸರು ದಾಖಲಿಸಲು ಮನವಿ ಮಾಡಲಾಗಿತ್ತು. ತನಿಖೆ ನಡೆದು ದೇವಳ ಸರಕಾರದ ವ್ಯಾಪ್ತಿಯದ್ದೇ? ಅಧಿಸೂಚಿತ ಸಂಸ್ಥೆಯಾಗಿದೆಯೇ? ಹೆಚ್ಚಿನ ದಾಖಲೆಯಾಗಿ ಗಜೆಟೆಡ್ ಪ್ರತಿ ಕೇಳಿ ಪುತ್ತೂರು ಸಹಾಯಕ ಆಯುಕ್ತರಿಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ , ಜಿಲ್ಲಾಧಿಕಾರಿಗಳ ಕಚೇರಿ ಆವರಣ ಮಂಗಳೂರು ಇಲ್ಲಿಗೆ ಕೇಳಲಾಗಿತ್ತು. ಹಿಂದೂ ಧಾರ್ಮಿಕ ಆಯುಕ್ತರ ಕಚೇರಿಯ ಕ್ರಮಾಂಕ ಎಲ್ಎನ್ಡಿ ಸಿಆರ್ 08/2023-24 ರಂತೆ ಪಹಣಿಯಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ , ಕಾರ್ಪಾಡಿ ಎಂದು ದಾಖಲಿಸಲು ಪುತ್ತೂರು ಸಹಾಯಕ ಆಯುಕ್ತರಿಗೆ ಜು.7 ರಂದು ಮಹತ್ವದ ಆದೇಶವಾಗಿದೆ.