ಜು. 23: ತಾ| ಯುವ ಬಂಟರ ಸಂಘದ ಆಶ್ರಯದಲ್ಲಿ ತುಳುನಾಡ ಬಂಟೆರೆ ಪರ್ಬ-2023- ಸಿದ್ಧತಾ ಸಭೆ

0


ಅಪರೂಪದ ಅವಕಾಶ- ಶಶಿರಾಜ್ ರೈ
ಯುವ ಬಂಟರ ಸಂಘದ ಕಾರ್‍ಯ ಪ್ರಶಂಶನಿಯ- ಸೀತಾರಾಮ ರೈ
ಅದ್ದೂರಿ ಕಾರ್‍ಯಕ್ರಮ- ಹೇಮನಾಥ ಶೆಟ್ಟಿ
ಉತ್ತಮ ವೇದಿಕೆ- ಶಶಿಕುಮಾರ್ ರೈ
ಉತ್ತಮ ಕಾರ್‍ಯಕ್ರಮ- ದಯಾನಂದ ರೈ
ಪೂರ್ಣ ರೀತಿಯ ಸಹಕಾರ- ಕರುಣಾಕರ ರೈ
ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ- ಭಾಗ್ಯೇಶ್ ರೈ

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಯುವ ಬಂಟರ ದಿನಾಚರಣೆಯ ಪ್ರಯುಕ್ತ ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜು. 23 ರಂದು ನಡೆಯಲಿರುವ “ತುಳುನಾಡ ಬಂಟೆರೆ ಪರ್ಬ” -2023 ಕಾರ್‍ಯಕ್ರಮದ ಸಿದ್ಧತಾ ಸಭೆಯು ಪುತ್ತೂರು ಬಂಟರಭವನದಲ್ಲಿ ಜರಗಿತು.

ಅಪರೂಪದ ಅವಕಾಶ- ಶಶಿರಾಜ್ ರೈ
ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕು ಯುವ ಬಂಟರ ಶಂಘದ ಆಶ್ರಯದಲ್ಲಿ ಜು. 23 ರಂದು ನಡೆಯುವ ಅದ್ದೂರಿ ಕಾರ್‍ಯಕ್ರಮವಾಗಿರುವ ತುಳುನಾಡ ಬಂಟೆರೆ ಪರ್ಬಕ್ಕೆ ಸಮಸ್ತ ಬಂಟ ಭಾಂದವರು ಪೂರ್ಣ ರೀತಿಯ ಸಹಕಾರವನ್ನು ನೀಡಿ, ಯಶಸ್ಸುಗೊಳಿಸಬೇಕು ಎಂದು ಹೇಳಿ, ಬೆಳಿಗ್ಗೆ ಯಿಂದ ಸಂಜೆ ತನಕ ನಡೆಯುವ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಬಂಟರ ಸಾಂಸ್ಕೃತಿಕ ಸ್ವರ್ಧೆಯ ವೈಭವವನ್ನು ನೋಡುವುದೇ ಒಂದು ಅಪರೂಪದ ಅವಕಾಶವಾಗಿದೆ ಎಂದು ಹೇಳಿದರು.


ಯುವ ಬಂಟರ ಸಂಘದ ಕಾರ್‍ಯ ಪ್ರಶಂಶನಿಯ- ಸೀತಾರಾಮ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈ ಮಾತನಾಡಿ ಯುವ ಬಂಟರ ಸಂಘದ ನೇತ್ರತ್ವದಲ್ಲಿ ನಡೆಯುವ ಈ ಕಾರ್‍ಯಕ್ರಮಕ್ಕೆ ಪೂರ್ಣ ರೀತಿಯ ಸಹಕಾರ ನೀಡುತ್ತೇನೆ. ಬಂಟ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿ, ಹೆಸರನ್ನು ತಂದಿರುವ ನಿವೃತ್ತ ತಹಶೀಲ್ದಾರ್ ಚಿಲ್ಮೆತ್ತಾರು ಕೋಚಣ್ಣ ರೈ, ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಮುಂಡಾಳಗುತ್ತು ತಿಮ್ಮಪ್ಪ ರೈ ಹಾಗೂ ಜಯಕರ್ನಾಟಕ ಸಂಸ್ಥಾಪಕ ಎನ್. ಮುತ್ತಪ್ಪ ರೈ ದೇರ್ಲರವರ ಸಂಸ್ಮರಣೆ ಮಾಡುವ ಬಂಟ ಸ್ಮೃತಿ ಕಾರ್‍ಯಕ್ರಮವನ್ನು ಜೋಡಣೆ ಮಾಡಿರುವ ಯುವ ಬಂಟರ ಸಂಘದ ಕಾರ್‍ಯ ನಿಜಕ್ಕೂ ಪ್ರಶಂಶನೀಯವಾಗಿದೆ ಎಂದು ಹೇಳಿದರು.


ಅದ್ದೂರಿ ಕಾರ್‍ಯಕ್ರಮ- ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ತುಳುನಾಡ ಬಂಟೆರೆ ಪರ್ಬ ಹೆಸರಿಗೆ ತಕ್ಕಂತೆ ಯುವ ಬಂಟರ ಸಂಘದ ಮೂಲಕ ಅದ್ದೂರಿ ಕಾರ್‍ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಯುವ ಬಂಟರ ಸಂಘಟನೆಯ ಮೂಲಕ ಉತ್ತಮ ಕಾರ್‍ಯಕ್ರಮದ ಜೋಡಣೆಯಾಗಿದೆ. ನಾವೆಲ್ಲ ಸೇರಿ ಇಂಥ ಕಾರ್‍ಯಕ್ರಮಕ್ಕೆ ಪೂರ್ಣ ಸಹಕಾರವನ್ನು ನೀಡೋಣ ಎಂದು ಹೇಳಿದರು.

ಉತ್ತಮ ವೇದಿಕೆ- ಶಶಿಕುಮಾರ್ ರೈ
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ತುಳುನಾಡ ಬಂಟೆರೆ ಪರ್ಬ ಕಾರ್‍ಯಕ್ರಮಕ್ಕೆ ತಾಲೂಕು ಬಂಟರ ಸಂಘದಿಂದ ಪೂರ್ಣ ಸಹಕಾರ ಇದೆ. ಮೂರು ಜಿಲ್ಲೆಗಳ ಯುವ ಬಂಟರಲ್ಲಿ ಇರುವ ಸಾಂಸ್ಕೃತಿಕ ಪ್ರತಿಭೆಗೆ ಉತ್ತಮ ವೇದಿಕೆಯನ್ನು ನೀಡಿದ ತಾಲೂಕು ಯುವ ಬಂಟರ ಸಂಘದ ಕಾರ್‍ಯಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.


ಉತ್ತಮ ಕಾರ್‍ಯಕ್ರಮ- ದಯಾನಂದ ರೈ
ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಮತನಾಡಿ ಉತ್ತಮವಾದ ಕಾರ್‍ಯಕ್ರಮಕ್ಕೆ ನಮ್ಮೆಲ್ಲರ ಪೂರ್ಣ ರೀತಿಯ ಸಹಕಾರ ಇದೆ ಎಂದು ಹೇಳಿದರು.

ಪೂರ್ಣ ರೀತಿಯ ಸಹಕಾರ- ಕರುಣಾಕರ ರೈ
ಉದ್ಯಮಿ, ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕ ಕರುಣಾಕರ ರೈ ದೇರ್ಲ ಮಾತನಾಡಿ ಯುವ ಬಂಟರ ಸಂಘದಿಂದ ನಡೆಯುವ ಕಾರ್‍ಯಕ್ರಮಕ್ಕೆ ಪೂರ್ಣ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.


ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ- ಭಾಗ್ಯೇಶ್ ರೈ
ತುಳುನಾಡ ಬಂಟೆರೆ ಪರ್ಬ 2023 ಕಾರ್‍ಯಕ್ರಮದ ಸಂಚಾಲಕ ಭಾಗ್ಯೇಶ್ ರೈ ಕೆಯ್ಯೂರುರವರು ಕಾರ್‍ಯಕ್ರಮದ ರೂಪುರೇಷೆಗಳ ಬಗ್ಗೆ ಮಾತನಾಡಿ ಬಂಟ ಸಮಾಜದ ಯುವಕ-ಯುವತಿಯರು ಕಾರ್‍ಯಕ್ರಮಕ್ಕೆ ಬರಬೇಕೆಂಬ ಉದ್ದೇಶದಿಂದ ವಿಶಿಷ್ಟವಾದ ಸಾಂಸ್ಕೃತಿಕ ಸ್ವರ್ಧೆಯಂತಹ ಕಾರ್‍ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್‍ಯಕ್ರಮವನ್ನು ಅರ್ಥಪೂರ್ಣ ನೆಲೆಯಲ್ಲಿ ಸಂಘಟಿಸಲು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.


ವೇದಿಕೆಯಲ್ಲಿ ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಜೊತೆ ಕಾರ್‍ಯದರ್ಶಿ ಯಶುಭ ರೈ, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡ, ತಾಲೂಕು ಬಂಟರ ಸಂಘ, ಬಂಟರ ಯಾನೆ ನಾಡವರ ಮಾತೃ ಸಂಘ, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಯುವ ಬಂಟರ ಸಂಘದ ಕೋಶಾಧಿಕಾರಿ ಕೆ.ಸಿ.ಅಶೋಕ್ ಶೆಟ್ಟಿ ವಂದಿಸಿದರು. ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಯುವ ಬಂಟರ ಸಂಘದ ಸದಸ್ಯತನ ವಿಭಾಗದ ಸಂಯೋಜಕ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರುರವರು ಸಹಕರಿಸಿದರು.ಯುವ ಬಂಟರ ಸಂಘದ ಧಾರ್ಮಿಕ ವಿಭಾಗದ ಸಂಯೋಜಕ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಕಾರ್‍ಯಕ್ರಮ ನಿರೂಪಿಸಿದರು.


ಯುವ ಬಂಟರ ಸಾಂಸ್ಕೃತಿಕ ಪ್ರದರ್ಶನ
ದ.ಕ, ಕಾಸರಗೋಡು ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ಅದ್ದೂರಿ ಕಾರ್‍ಯಕ್ರಮ ತುಳುನಾಡ ಬಂಟೆರೆ ಪರ್ಬ ಜು. 23 ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಲಿದೆ. ಯುವ ಬಂಟರ ಸಂಘದ ದಿನಾಚರಣೆಯ ಪ್ರಯುಕ್ತ ನಡೆಯುವ ವಿಶಿಷ್ಟವಾದ ಈ ಕಾರ್‍ಯಕ್ರಮ ಬಂಟ ಸಮಾಜಕ್ಕೆ ಶೋಭೆಯನ್ನು ತರಲಿದೆ.

ಶಶಿರಾಜ್ ರೈ ಮುಂಡಾಳಗುತ್ತುಅಧ್ಯಕ್ಷರು- ತಾ.ಯುವ ಬಂಟರ ಸಂಘ ಪುತ್ತೂರು

ತುಳುನಾಡ ಬಂಟೆರೆ ಪರ್ಬ ಕಾರ್‍ಯಕ್ರಮದ ಸಂಚಾಲಕರು

ತುಳುನಾಡ ಬಂಟೆರೆ ಪರ್ಬ 2023 ಕಾರ್‍ಯಕ್ರಮ ಸಂಚಾಲಕರುಗಳಾಗಿ ಹರ್ಷಕುಮಾರ್ ರೈ ಮಾಡಾವು ಮತ್ತು ಭಾಗ್ಯೇಶ್ ರೈ ಕೆಯ್ಯೂರು ಆಯ್ಕೆಯಾಗಿದ್ದಾರೆ


LEAVE A REPLY

Please enter your comment!
Please enter your name here