ಅಮೇರಿಕಾದ ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸುವ ನಿಮ್ಮ ಕನಸು‌ ಶೀಘ್ರ ನನಸು..

0

ಹೀರೋ ವೆಸ್ಟ್ ಕೋಸ್ಟ್ ಶೋರೂಂಗಳಲ್ಲಿ ಬುಕ್ಕಿಂಗ್ ಆರಂಭ

ವಿಟ್ಲ: ಅಮೇರಿಕಾ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಬಹು ನಿರೀಕ್ಷಿತ ಹೊಸ ಹಾರ್ಲೆ ಡೇವಿಡ್ಸನ್ X440 ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಹೀರೋ ಮೋಟೋಕಾರ್ಪ್ ಸಹಭಾಗಿತ್ವದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಬಿಡುಗಡೆಯಾಗಿದ್ದು ಹೊಸ ಸಂಚಲನ ಸೃಷ್ಟಿಸಿದೆ.

ಮಂಗಳೂರಿನ‌ ಕಂಕನಾಡಿ ಮಾತ್ರವಲ್ಲದೆ ವಿಟ್ಲದ ಮೇಗಿನಪೇಟೆ ,ಮುಡಿಪುವಿನ‌ ಸಾಂಬಾರ್ ತೋಟ , ಗುರುಪುರ ಕೈಕಂಬದಲ್ಲಿರುವ ಹೀರೋ ವೆಸ್ಟ್ ಕೋಸ್ಟ್ ಮೋಟರ್ಸ್ ನಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಗೆ ಬುಕ್ಕಿಂಗ್ ಆರಂಭಗೊಂಡಿದೆ. ಹೀರೋ ವೆಬ್ ಸೈಟಿನಲ್ಲಿ ನಿಮ್ಮ ವೆಸ್ಟ್ ಕೋಸ್ಟ್ ಶೋರೂಂ ಆಯ್ಕೆ ಮಾಡಿ ಅಲ್ಲಿ ಕೇವಲ ಐದುಸಾವಿರ ರೂಪಾಯಿ ಮುಂಗಡ ಪಾವತಿಸುವ ಮೂಲಕ ತಮ್ಮ ಕನಸಿನ ದ್ವಿಚಕ್ರ ವಾಹನವನ್ನು ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ.

ಹಾರ್ಲೆ ಡೇವಿಡ್ಸನ್ X440 ಬೈಕ್ ಡೇನಿಮ್ , ವಿವಿಡ್ ಮತ್ತು ಎಸ್ .ಡೆನಿಮ್ ರೂಪಾಂತರಗಳಲ್ಲಿ ಲಭ್ಯವಿದೆ. 2,29,000 ರೂಪಾಯಿ ಬೈಕ್ ನ ಆರಂಭಿಕ‌ ಬೆಲೆ‌ಯಾಗಿದ್ದು, ಈಗಾಗಲೇ ಗ್ರಾಹಕರಿಂದ ಉತ್ತಮ ಸ್ಪಂಧನೆ ದೊರೆತಿದೆ. ಭಾರತದಲ್ಲಿ ಹೀರೋ ಮೋಟೋಕಾರ್ಪ್ ಕಂಪೆನಿಯು ಈ ಬೈಕ್ ಗಳನ್ನು ತಯಾರಿಸುತ್ತಿದೆ. ಆಗಸ್ಟ್ ತಿಂಗಳ 15 ರ ಬಳಿಕ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾರ್ಲೆ ಡೇವಿಡ್ಸನ್ ರಸ್ತೆಗಿಳಿಯಲಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವೆಸ್ಟ್ ಕೋಸ್ಟ್ ಮೋಟರ್ಸ್ ಶೋರೂಂ ಅಥವಾ ಮೊಬೈಲ್ ಸಂಖ್ಯೆ 8951420707ಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here