ದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಪ್ರೊಫೆಸರ್ ಆಗಿ ಹಿರೇಬಂಡಾಡಿಯ ಡಾ. ರಮೇಶ್ ಸಾಲಿಯಾನ್ ಆಯ್ಕೆ

0

ಪುತ್ತೂರು: ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ, ಉಪ ಹಣಕಾಸು ಅಧಿಕಾರಿ, ಸಹಾಯಕ ಪ್ರಾಧ್ಯಾಪಕ, ಕಾನೂನು ಕೋಶದ ಉಪ ಕುಲ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ| ರಮೇಶ್ ಸಾಲ್ಯಾನ್ ಅವರು ಭಾರತದ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ನವದೆಹಲಿ, ಅರ್ಥಶಾಸ್ತ್ರ ಅಧ್ಯಯನ ಹಾಗೂ ಯೋಜನಾ ವಿಭಾಗದಲ್ಲಿ ಪ್ರೊಪೆಸರ್ ಆಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರಭಿಮಾನಿ ಹಾಗೂ ಸಮಾಜದ ಹಿತ ಚಿಂತಕ ಡಾ| ರಮೇಶ್ ಸಾಲ್ಯಾನ್ ಅವರು ದೇಶದ ಪ್ರಖ್ಯಾತ ವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕ ವಿಚಾರ ಹಾಗೂ ದೇಶದಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರಬಂದ ಮಂಡಿಸಿದ್ದಾರೆ. ಆನೇಕ ಪತ್ರಿಕೆಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಉನ್ನತ ಲೇಖನಗಳನ್ನು ಬರೆದಿರುತ್ತಾರೆ. ತುಮಕೂರು ವಿವಿಯ ಸಹಾಯಕ ಪ್ರಾಧ್ಯಾಪಕ, ಸಂಶೋಧನಾ ವಿಭಾಗದ ನಿರ್ದೇಶಕ, ಹಾಗೂ ಕಾನೂನು ಕೋಶದ ಉಪ ಕುಲಸಚಿವರಾಗಿ ನಿಷ್ಠೆ, ನಿಸ್ವಾರ್ಥತೆ, ಕಠಿಣ ಪರಿಶ್ರಮದ ಅವರ ದುಡಿಮೆ, ಸದಾ ದಣಿವರಿಯದ ಅವರ ಸೇವಾಕಾರ್ಯ ಶೈಲಿಯಿಂದಾಗಿ ತುಮಕೂರು ವಿವಿಯ ಸಂಶೋಧನ ವಿಭಾಗದ ನಿರ್ದೇಶಕ ಸೇರಿದಂತೆ ವಿವಿಯವಿವಿಧ ಹೆಚ್ಚುವರಿ ಜವಾಬ್ದಾರಿ ಸ್ಥಾನ ಮಾನಗಳು ಅವರಿಗೆ ಒಲಿದು ಬಂದಿತ್ತು.


ಡಾ. ರಮೇಶ್ ಸಾಲ್ಯಾನ್ ಅವರು ವಿವಿಯ ಪರೀಕ್ಷಾಂಗ ಉಪ ಕುಲಸಚಿವರಾಗಿ, ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುವ ಮೂಲಕ ಪರೀಕ್ಷಾಂಗ ವಿಭಾಗದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಾದ ಸಾಪ್ಟ್‌ ವೇರ್ ಅನ್ನು ವಿವಿಗೆ ಉಚಿತವಾಗಿ ದೊರೆಯುವಂತೆ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ಪರೀಕ್ಷಾಂಗ ವಿಭಾಗದಲ್ಲಿ ಪಾರದರ್ಶಕ ಶೀಘ್ರ ಫಲಿತಾಂಶ ದೊರಕಿಸಿ ವಿದ್ಯಾರ್ಥಿಗಳಿಗೆ ಕೊಡುಗೆ ನೀಡಿರುವುದು ಅವರ ಕಾರ್ಯ ಶೈಲಿಯ ಹೆಗ್ಗಳಿಕೆ.

ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಶೆಟ್ಲಪಾಲು ಚಂದ್ರರತ್ನ ನಿವಾಸದ ಶ್ರೀಮತಿ ರತ್ನಾವತಿ ಮತ್ತು ಚಂದ್ರಶೇಖರ ಪೂಜಾರಿ ಅವರ ಪುತ್ರ ಡಾ| ರಮೇಶ್ ಸಾಲ್ಯಾನ್ ಅವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರೇಬಂಡಾಡಿ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್ ಶಿಕ್ಷಣವನ್ನು ಉಪ್ಪಿನಂಗಡಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಆನಂತರ ಅವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನಲ್ಲಿ ಉದ್ಯೋಗಿಯಾಗಿ ಸೇರಿದರು. ಅದೇ ಸಂದರ್ಭದಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದರು. ಮುಂದೆ ಉದ್ಯೋಗ ಬಿಟ್ಟು ಮಂಗಳೂರು ವಿಶ್ವವಿದ್ಯಾಲಯದಲ್ಲಿಸ್ನಾತಕೋತ್ತರ ಪದವಿ ಪಡೆದು, ಪ್ರಶಸ್ತಿ ಸಹಿತ ಪ್ರಥಮ ಸ್ಥಾನದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಪದವಿಯನ್ನು ಹಾಗೂ ತನ್ನ ಅವಿರಥ ಪ್ರಯತ್ನ, ಕಠಿಣ ಪರಿಶ್ರಮದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿಯೇ ಡಾಕ್ಟರೆಟ್ ಪದವಿ ಪಡೆದರು. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಉನ್ನತ ಗುರಿಯೊಂದಿಗೆ ಮುನ್ನಡೆದಾಗ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಡಾ. ರಮೇಶ್ ಸಾಲ್ಯಾನ್ ಅವರ ಈ ಅಪೂರ್ವ ಯಶಸ್ಸು ನಿದರ್ಶನ. ಮಂಗಳೂರು ವಿವಿಯಲ್ಲಿ ಸಂಶೋಧನಾ ಸಹಾಯಕರಾಗಿ, ಸಂಶೋಧನಾಫೆಲೋ ಆಗಿ ಕಾರ್ಯ ನಿರ್ವಹಿಸಿ ,ಮುಂದೆ ಅವರು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಉತ್ತಮ ಸೇವೆ ಸಲ್ಲಿಸಿ ಉಪನ್ಯಾಸಕರವಿದ್ಯಾರ್ಥಿಗಳ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾದರು. ಅಪಾರ ಸಾಮಾಜಿಕ ಕಳಕಳಿಯಿರುವ ಡಾ| ರಮೇಶ್ ಸಾಲ್ಯಾನ್ ಅವರು ಈ ಅವಧಿಯಲ್ಲಿ ವಿವಿಧ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿ ಕೊಂಡರು. ಅದರಲ್ಲಿ ಮುಖ್ಯವಾಗಿ 2003 ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿಯಾಗಿ, ಅದರ ಕೋಶಾಧಿಕಾರಿ ಯಾಗಿ ಟ್ರಸ್ಟ್‌ನ ಸಾಮಾಜಿಕ ಸೇವೆಯಲ್ಲಿ ಅಪೂರ್ವವಾದ ಕಾರ್ಯಕ್ಕೆ ಸಾಕ್ಷಿಯಾದರು. 2004 ರಲ್ಲಿ ಟ್ರಸ್ಟಿನಿಂದಪ್ರಾರಂಬಿಸಲಾದ ಆತ್ಮಶಕ್ತಿ ತ್ರ್ರೈಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗೊಂದು ಪ್ರತಿಷ್ಠಿತ ಸ್ಥಾನ ದೊರಕಿಸಿದರು. ಇದೇ ಅಧಿಯಲ್ಲಿ ಅವರ ಬದುಕಿಗೆ ತಿರುವು ನೀಡಿದ ತುಮಕೂರು ವಿವಿಯ ಸಹಾಯಕ ಪ್ರಾಧ್ಯಾಪಕ ಹುದ್ದೆ ಒಲಿದು ಬಂತು.


ಭಾರತದ ಪ್ರತಿಷ್ಠಿತ JNU, Delhi ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿ ಆಯ್ಕೆಯಾಗಿರುವ ಆಪೂರ್ವ ಸಾಧಕ ಡಾ| ರಮೇಶ್ ಸಾಲ್ಯಾನ್ ಪತ್ನಿ ಸಹನಾ ರಮೇಶ್, ಹಾಗೂ ಇಬ್ಬರು ಮಕ್ಕಳಾದ ಕೇಶ್ನಿ ಆರ್. ಸಾಲಿಯಾನ್ ಮತ್ತು ಕನಿಷ್ಕ್ ಆರ್. ಸಾಲಿಯಾನ್ ರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here