ವಿಟ್ಲ: ಅಧ್ಯಾಪಕರ ಸಹಕಾರಿ ಸಂಘ (ನಿ.) ವಿಟ್ಲ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ಕೆ.ರಾವರ ಅಧ್ಯಕ್ಷತೆಯಲ್ಲಿ ವಿಟ್ಲದ ವಿಠಲ ಪದವಿ ಪೂರ್ವಕಾಲೇಜಿನ ಸುವರ್ಣರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷರಾದ ರಮೇಶ್ನಾಯಕ್ ಕೆ. ರವರು ಮಾತನಾಡಿ ಸಂಘವು ವರದಿ ಸಾಲಿನಲ್ಲಿ 661ಕೋಟಿ ವ್ಯವಹಾರ ನಡೆಸಿ 2.09ಕೋಟಿ ಲಾಭ ಗಳಿಸಿದೆ. 5.57ಕೋಟಿರೂಪಾಯಿ ಪಾಲು ಬಂಡವಾಳ ಹೊಂದಿರುತ್ತದೆ. ವರ್ಷಾಂತ್ಯಕ್ಕೆ 4,906 ‘ಎ’ ತರಗತಿ ಸದಸ್ಯರನ್ನು ಹೊಂದಿದ್ದು, ರೂ. 209 ಕೋಟಿ ರೂಪಾಯಿ ಠೇವಣಿ ಹೊಂದಿರುತ್ತದೆ.ರೂ. 192.39 ಕೋಟಿ ಹೊರಬಾಕಿ ಸಾಲ ಇದ್ದು, ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿರುತ್ತದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ಸಂಸ್ಥೆಗೆ 4ನೇ ಬಾರಿ ಸಾಧನಾ ಪ್ರಶಸ್ತಿ ಲಭಿಸಿದೆ.

ಇದೇ ಸಂದರ್ಭದಲ್ಲಿ 2025-26 ನೇ ಸಾಲಿನ ರಾಜ್ಯಮಟ್ಟದ ಒಬ್ಬ ಸದಸ್ಯ ಶಿಕ್ಷಕರು ಹಾಗೂ ಜಿಲ್ಲಾ ಮಟ್ಟದ 12 ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸಂಘದ ಸದಸ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು ಮತ್ತು 2024-2025 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ 75 ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನವನ್ನು ನೀಡಿ ಗೌರವಿಸಲಾಯಿತು. ಸಂಘದಲ್ಲಿ ಸದಸ್ಯರಾಗಿದ್ದು, ಮರಣ ಹೊಂದಿದ ಸದಸ್ಯರಿಗೆ ನುಡಿನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ರಿಯಾಝ್ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ನವೀನ್ ಪಿ.ಎಸ್. ನಿರ್ದೇಶಕರಾದ ರಾಜೇಂದ್ರ ರೈ ಪಿ., ಡಾ|| ನವೀನ್ ಕೊಣಾಜೆ, ಪುಷ್ವರಾಜ್ ಬಿ., ಅನಿತಾ ಮಿನೇಜಸ್, ಭಾರತಿ, ಉಮಾನಾಥ ರೈ ಎಮ್., ಶಿವಕುಮಾರ್ ಎಂ.ಜಿ., ನಾಗೇಶ್ ಪಾಟಾಳಿ ಕೆ ಸಂದೇಶ್ ಎಂ. ಎಸ್., ರಘು, ರವಿ ನಾಯ್ಕ್ ಐ., ಲಕ್ಷ್ಮೀಕಾಂತ್ ಬೇಕಲ್ ಎಸ್., ಶ್ರೀಧರ ಎನ್., ಶೀನಪ್ಪ ಎನ್., ಅಖಿಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ರಮೇಶ್ನಾಯಕ್.ಕೆ ಸ್ವಾಗತಿಸಿದರು. ಸಂಘದ ಜನರಲ್ ಮೆನೇಜರ್ ಸುಚಿನ್ರಾಜ್ ಶೆಟ್ಟಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ನವೀನ್ ವಂದಿಸಿದರು. ಸಂಘದ ನಿರ್ದೇಶಕರಾದ ಉಮಾನಾಥ ರೈ ಎಮ್. ಕಾರ್ಯಕ್ರಮವನ್ನು ನಿರೂಪಿಸಿದರು.