ಪುತ್ತೂರು: ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕೆಂದು ಚೈಲ್ಡ್ ರೈಟ್ ಟ್ರಸ್ಟ್ ನಿರ್ದೇಶಕ ಡಾ.ವಾಸುದೇವ ಶರ್ಮ ಅವರು ಹೇಳಿದರು.
ಚೈಲ್ಡ್ ರೈಟ್ ಬೆಂಗಳೂರು ಮತ್ತು ಅಸಹಾಯಕರ ಸೇವಾ ಟ್ರಸ್ಟ್ ಪುತ್ತೂರು ಇದರ ಸಹಕಾರದಲ್ಲಿ ಚೈಲ್ಡ್ ರೈಟ್ ಟ್ರಸ್ಟ್ ನ ಆಡಳಿತದಲ್ಲಿ ಮಕ್ಕಳು ಯೋಜನೆಯನ್ವಯ ಪುತ್ತೂರು ತಾಲೂಕಿನ ಕುಂಬ್ರ ಜೂನಿಯರ್ ಕಾಲೇಜಿನಲ್ಲಿ ನಡೆದ ಎಸ್‌ಡಿಪಿಎಂಸ್ ಆಕ್ಟ್ ಕುರಿತಾಗಿ ನಡೆದ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸುಸ್ಥಿರ ಸಮಾಜದತ್ತ ಯುವ ಜನಾಂಗ ಬೆಳೆಯಬೇಕಾದರೆ ಮಕ್ಕಳನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯ ಯೋಜನೆಗಳು ಕಾರಿಗತವಾಗಬೇಕು. ಸಮಾಜದಲ್ಲಿ ಮಕ್ಕಳು ಯಾವುದೇ ರೀತಿಯ ಮಾದಕ ವಸ್ತುಗಳ ಸೇವನೆ ಮಾರಾಟ ಸಾಗಾಟದಂತಹ ಕೆಟ್ಟ ಚಟ ಮತ್ತು ಜಾಲಕ್ಕೆ ಬೀಳದಂತೆ ಮಕ್ಕಳನ್ನು ರಕ್ಷಿಸಬೇಕಾಗಿದೆ. ಮಕ್ಕಳು ಕೂಡ ಇಂತಹ ಚಟಕ್ಕೆ ಬೀಳದಂತೆ ಜಾಗೃತರಾಗಬೇಕಾಗಿದೆ ಎಂದು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಧನಂಜಯ ಬಿ ಸಿ. ಇವರು ವಿವಿಧ ರೀತಿಯ ಮಾದಕ ವಸ್ತುಗಳು ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಕಾಯ್ದೆಯ ಪ್ರಕಾರ ಮಾದಕ ವಸ್ತುಗಳ ಸೇವನೆ ಮಾರಾಟ ಸಾಗಾಟದಂತಹ ಕಾನೂನು ಬಾಹಿರ ಕ್ರಮಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಕೈಗೊಳ್ಳುವ ಸೂಕ್ತ ಕಾನೂನು ಕ್ರಮಗಳನ್ನು ವಿವರಿಸಿದರು. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ತ್ರಿವೇಣಿಯವರು ಒಳಮೊಗ್ರು ಗ್ರಾಮವನ್ನು ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಮುಕ್ತ ಗ್ರಾಮವನ್ನಾಗಿ ಮಾಡಲು ಸಹಕಾರವನ್ನು ಕೋರಿದರು. ವೇದಿಕೆಯಲ್ಲಿ ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಯನ ರೈ ಉಪಸ್ಥಿತರಿದ್ದರು ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ನ ರಾಜ್ಯ ಸಂಯೋಜಕ ಕೌಶಿಕ್ ಹಾಗೂ Documentation ಸಂಯೋಜಕಿ ಹರಿಣಿ ಅವರು ಸಹಕರಿಸಿದರು. ಕುಂಬ್ರ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಉಪಾಧ್ಯಾಯರವರು ಸ್ವಾಗತಿಸಿ CRT ಸಂಯೋಜಕಿ ಕಸ್ತೂರಿ ಬೊಳುವಾರು ಇವರು ವಂದಿಸಿದರು.