ಕಬಕ: ಇಲ್ಲಿನ ಕಬಕ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜುಲೈ 19ರಂದು NDRF ತಂಡದವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಮಾಹಿತಿಯನ್ನು ನೀಡಿದರು.
ಗಂಟಲಲ್ಲಿ ಏನಾದರೂ ಸಿಕ್ಕಿಕೊಂಡಾಗ,ಹೃದಯಾಘಾತ ಆಗುವ ಸಂದರ್ಭದಲ್ಲಿ ಪ್ರಾಣಾಪಾಯದಿಂದ ರಕ್ಷಿಸಿಕೊಳ್ಳುವ ಬಗ್ಗೆ ಕಣ್ಣಿನ ಭಾಗಕ್ಕೆ ಗಾಯವಾದಾಗ ,ಅಗ್ನಿ ಸ್ಪರ್ಷವಾದಾಗ ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂದು ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹತ್ತನೇ ಬೆಟಾಲಿಯನ್ NDRF ತಂಡದ ಇನ್ಸ್ ಪೆಕ್ಟರ್ ಶಿವಕುಮಾರ್, ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ರಾಜ್ ಕುಮಾರ್ ,ಹೆಡ್ ಕಾನ್ಸ್ ಟೇಬಲ್ ತ್ರಿಪಾಲ್ ಸಿಂಗ್ ,ಕಾನ್ಸ್ ಟೇಬಲ್ ದೇವರಾಜ್ ಹಾಗೂ ಇತರ ಸಿಬ್ಬಂದಿಗಳು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದರು.
ಸಂಸ್ಥೆಯ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ,ಹೈಸ್ಕೂಲು ವಿಭಾಗದ ಮುಖ್ಯ ಶಿಕ್ಷಕರು ,ಕಬಕ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಶಾಬಾ ಹಾಗೂ ಎರಡು ಸಂಸ್ಥೆಯ ವಿದ್ಯಾರ್ಥಿಗಳು ಕಾರ್ಯಕ್ರವನ್ನು ಭಾಗವಹಿಸಿದ್ದರು.ಶಾರೀರಿಕ ಶಿಕ್ಷಕ ಕೃಷ್ಣಯ್ಯ ಸ್ವಾಗತಿಸಿ, ವಿಜೇತಾ ವಂದಿಸಿದರು.