ವಿಟ್ಲ: ಲಾರಿ – ಇಕೋ ವಾಹನದ ಮಧ್ಯೆ ಅಪಘಾತ

0

ವಿಟ್ಲ: ಮಣ್ಣು ತುಂಬಿದ್ದ ಲಾರಿ ಹಾಗೂ ಇಕೋ ವಾಹನದ ನಡುವೆ ಅಪಘಾತ ನಡೆದ ಘಟನೆ ಇಲ್ಲಿನ ಉಕ್ಕುಡ – ಕನ್ಯಾನ ರಸ್ತೆಯಲ್ಲಿ ಜು.22ರಂದು ನಡೆದಿದೆ.

ಕನ್ಯಾನ ಕಡೆಯಿಂದ ಬರುತ್ತಿದ್ದ ಬಾಕ್ಸೈಟ್ ಮಣ್ಣಿನ ಲಾರಿ ದೇಲಂತಬೆಟ್ಟು ಕೇಪುಳಗುಡ್ಡೆ ತಿರುವಿನಲ್ಲಿ ವಿಟ್ಲ ಉಕ್ಕುಡ ಕಡೆಯಿಂದ ಬರುತ್ತಿದ್ದ ಇಕೋ ವಾಹನಕ್ಕೆ ಢಿಕ್ಕಿಯಾಗಿದೆ. ಇದರಿಂದ ಇಕೋ ವಾಹನದ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಿಂದಾಗಿ ಯಾರಿಗೂ ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here