ಎಸ್ ಡಿಪಿಐ ಪಕ್ಷ ಕೇವಲ ರಾಜಕೀಯವಲ್ಲದೇ ಜನಪರ ಕಾಳಜಿಯುಳ್ಳ ಪಕ್ಷ- ಅನ್ವರ್ ಸಾದತ್
ಪುತ್ತೂರು: ಕೊರೊನಾ ಆಗಿರಲಿ, ಪ್ರವಾಹದ ಸಂದರ್ಭದಲ್ಲಾಗಲಿ ಎಸ್ ಡಿಪಿಐ ಪಕ್ಷದ ಸದಸ್ಯರು ತಮ್ಮ ಪ್ರಾಣವನ್ನ ಲೆಕ್ಕಿಸದೇ ಸಾವಿರಾರು ಜನರ ಬದುಕಿನ ಭಾಗದಲ್ಲಿ ಪಾಲ್ಗೊಂಡು ಅವರ ಕಷ್ಟಗಳಿಗೆ ಸಾಕ್ಷಿಯಾಗಿದ್ದಾರೆ. ಇವತ್ತು ಜಮೀಲ ಎಂಬವರ ಕಡು ಬಡತನವನ್ನು ಅರಿತು ಅವರಿಗೆ ಮನೆ ನಿರ್ಮಾಣ ಮಾಡುವ ಮೂಲಕ ಎಸ್ ಡಿಪಿಐ ಪಕ್ಷ ಕೇವಲ ರಾಜಕೀಯವಲ್ಲದೇ ಜನಪರ ಕಾಳಜಿಯುಳ್ಳ ಪಕ್ಷ ಎಂದು ಗುರುತಿಸಿಕೊಂಡಿದೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಹೇಳಿದರು.
ಬನ್ನೂರಿನಲ್ಲಿ ಕಡು ಬಡತನದಲ್ಲಿರುವ ಜಮೀಲ ಅವರ ಕುಟಂಬಕ್ಕೆ ಎಸ್‌ಡಿಪಿಐ ವತಿಯಿಂದ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಮನೆಯನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಾದವನಿಗೆ ತಿನ್ನೋಕೆ ಅನ್ನ, ಹಾಕಿಕೊಳ್ಳಲು ಬಟ್ಟೆ ಹಾಗೆಯೇ ಸುಂದರವಾದ ಮನೆ ಇವೆಲ್ಲವೂ ಅತ್ಯಗತ್ಯ. ಹೀಗಿರುವಾಗ ಅದೆಷ್ಟೋ ಜನ ನಮ್ಮ ದೇಶದಲ್ಲಿ ತಿನ್ನಲು ಅನ್ನವಿಲ್ಲದೆ, ಉಳಿದುಕೊಳ್ಳು ಮನೆಯಿಲ್ಲದೆ ಕಂಗಾಲಾಗಿದ್ದಾರೆ. ಹಾಗಿರುವಾಗ ಇದನ್ನ ಗಮನಿಸಿ ಬನ್ನೂರಿನಲ್ಲಿ ಜಮೀಲ ಎಂಬವರು ಕಡು ಬಡತನದಿಂದ ಕೂಡಿದ್ದು, ಅವರನ್ನ ಗುರುತಿಸಿ ಎಸ್ ಡಿಪಿಐ ಪಕ್ಷ ಬನ್ನೂರು ವಾರ್ಡ್ ಸಮಿತಿ ಹಾಗೂ ಸರ್ವ ದಾನಿಗಳ ಸಹಾಯದಿಂದ ಮನೆಯನ್ನ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಪುತ್ತೂರು ನಗರ ಸಭಾ ಸದಸ್ಯೆ ಕೆ. ಫಾತಿಮತ್ ಝೂರಾ ಮನೆಯ ಯಜಮಾನಿ ಜಮೀಲಾ ಅವರಿಗೆ ಕೀ ಹಸ್ತಾಂತರಿಸಿದರು. ಬನ್ನೂರು ಜುಮಾ ಮಸ್ಜಿದ್ ಧರ್ಮ ಗುರುಗಳು ಭಕ್ತಿ ತುಂಬಿದ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಎಸ್‌ಡಿಪಿಐ ಬನ್ನೂರು ವಾರ್ಡ್ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಮನೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಬನ್ನೂರು ವಾರ್ಡ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಹುಸೇನ್, ಕಾರ್ಯದರ್ಶಿ ಮುಸ್ತಫ, ಮುಸ್ಲಿಂ ಯೂಥ್ ಫೆಡರೇಷನ್ ಅಧ್ಯಕ್ಷ ಅಝರ್ ಬನ್ನೂರು ಹಾಗೂ ಸ್ಥಳೀಯ ಸಂಸ್ಥೆಗಳಾದ ಮುಸ್ಲಿಂ ಯೂಥ್ ಫೆಡರೇಷನ್ ಬನ್ನೂರು ಪರವಾಗಿ ಗೌರವ ಅಧ್ಯಕ್ಷ ರಫೀಕ್ ಬಾಂಬೆ , ಸುಲ್ತಾನ್ ಗೈಸ್ ಪರವಾಗಿ ಹನೀಫ್ , ವಾರ್ಡ್ ಸಂಖ್ಯೆ ೦೫ ಬೂತ್ ಸಮಿತಿ ಪರವಾಗಿ ರಸೀಕ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹಮೀದ್ ಸಾಲ್ಮರ, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸದಸ್ಯರಾದ ಪಿಬಿಕೆ ಮುಹಮ್ಮದ್, ಬದ್ರಿಯಾ ಜುಮಾ ಮಸ್ಜಿದ್ ಬನ್ನೂರು ಕಾರ್ಯದರ್ಶಿ ಅಶ್ರಫ್ ಹಾರಾಡಿ, ಮುಸ್ಲಿಂ ಯೂಥ್ ಫೆಡರೇಷನ್ ಬನ್ನೂರು ಗೌರವ ಅಧ್ಯಕ್ಷ ರಫೀಕ್ ಬಾಂಬೆ, ಅಧ್ಯಕ್ಷ ಅಝರ್, ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಪುತ್ತೂರು ಅಧ್ಯಕ್ಷ ಬಾತೀಶ ಬಡಕ್ಕೂಡಿ, ಮುಸ್ಲಿಂ ಯೂಥ್ ಫೆಡರೇಷನ್ ಬನ್ನೂರು ಕಾರ್ಯದರ್ಶಿ ಸೈಫುದ್ದೀನ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಇಫಾಝ್ ಬನ್ನೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.