ಪುತ್ತೂರು: ಗ್ರಾಮ ಪಂಚಾಯತ್ಗಳಿಗೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಈಗಾಗಲೇ ನಿಗದಿಯಾಗಿದ್ದು ಇದೀಗ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್ಗಳಿಗೆ ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಚುನಾವಣೆ ನಡೆಸಲು ಕರ್ನಾಟಕ ಪಂಚಾಯತ್ ರಾಜ್ ನಿಯಮ 1995ರ ನಿಯಮ 3ರಂತೆ ತಹಶೀಲ್ದಾರ್ ದರ್ಜೆಗಿಂತ ಕಡಿಮೆಯಿಲ್ಲದ ಅಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪುತ್ತೂರು: ಪುತ್ತೂರು ತಾಲೂಕಿನ ಅರಿಯಡ್ಕ, ನೆಟ್ಟಣಿಗೆ ಮುಡ್ನೂರು, ಕೊಳ್ತಿಗೆ ಗ್ರಾ.ಪಂ.ಗಳಿಗೆ ತಹಶೀಲ್ದಾರ್ ಜೆ. ಶಿವಶಂಕರ್, ಆರ್ಯಾಪು, ಬಲ್ನಾಡು ಗ್ರಾ.ಪಂ.ಗಳಿಗೆ ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ಹಿರೇಬಂಡಾಡಿ, ಬಜತ್ತೂರು ಗ್ರಾ.ಪಂ.ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಉಪ್ಪಿನಂಗಡಿ, 34 ನೆಕ್ಕಿಲಾಡಿ, ಕೋಡಿಂಬಾಡಿ ಗ್ರಾ.ಪಂ.ಗೆ ಪುತ್ತೂರು ವಲಯ ಅರಣ್ಯಾಧಿಕಾರಿ ಬಿ.ಎಂ ಕಿರಣ್, ಬನ್ನೂರು, ಕಬಕ, ಕುಡಿಪ್ಪಾಡಿ ಗ್ರಾ.ಪಂ.ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್, ಕೆಯ್ಯೂರು, ಕೆದಂಬಾಡಿ, ಒಳಮೊಗ್ರು ಗ್ರಾ.ಪಂ.ಗೆ ತೋಟಗಾರಿಕಾ ಇಲಾಖೆ ಹಿರಿಯ ನಿರ್ದೇಶಕಿ ರೇಖಾ ಎ., ಮುಂಡೂರು, ನರಿಮೊಗರು ಗ್ರಾ.ಪಂ.ಗೆ ತಾ.ಪಂ ಯೋಜನಾಧಿಕಾರಿ ಸುಕನ್ಯ, ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ, ಬಡಗನ್ನೂರು ಗ್ರಾ.ಪಂ.ಗೆ ಸಹಾಯಕ ಇಂಜಿನಿಯರ್ ಕನಿಷ್ಕ ಎಸ್ ಚಂದ್ರರವರನ್ನು ನೇಮಕಗೊಳಿಸಲಾಗಿದೆ.
ಕಡಬ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾ.ಪಂ.ಗೆ ಸವಣೂರು ಸರಕಾರಿ ಪ್ರೌಢಶಾಲಾ ಮುಖ್ಯಗುರು ನಿಂಗರಾಜು, ನೆಲ್ಯಾಡಿಗೆ ಸುಬ್ರಹ್ಮಣ್ಯ ಎಸ್ಎಸ್ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯ್ಕ್, ಕೌಕ್ರಾಡಿಗೆ ಕಡಬ ತಾ.ಪಂ ವ್ಯವಸ್ಥಾಪಕ ಭುವನೇಂದ್ರ ಕುಮಾರ್, ನೂಜಿಬಾಳ್ತಿಲಕ್ಕೆ ಸುಬ್ರಹ್ಮಣ್ಯ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಪ್ರಸಾದ್ ಎನ್., ಶಿರಾಡಿಗೆ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಜಯಪ್ರಕಾಶ್, ಕೊಂಬಾರುಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಬಿಳಿನೆಲೆಗೆ ಸುಬ್ರಹ್ಮಣ್ಯ ಎಸ್ಎಸ್ಪಿಯು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಸಿ., ಐತ್ತೂರಿಗೆ ಸುಬ್ರಹ್ಮಣ್ಯ ಎಸ್ಎಸ್ಪಿಯು ಕಾಲೇಜಿನ ಉಪನ್ಯಾಸಕ ಜಯಪ್ರಕಾಶ್ ಆರ್., ಕೊಣಾಜೆಗೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಜ್ಞಾನೇಶ್ವರ, ಮರ್ದಾಳಕ್ಕೆ ಸುಬ್ರಹ್ಮಣ್ಯ ಎಸ್ಎಸ್ಪಿಯು ಕಾಲೇಜಿನ ಉಪನ್ಯಾಸಕ ಗಿರೀಶ್, ಕುಟ್ರಪ್ಪಾಡಿಗೆ ಎಡಮಂಗಲ ಸರಕಾರಿ ಪ್ರೌಢಶಾಲಾ ಸಹಶಿಕ್ಷಕ ಸಂತೋಷ್ ಎಸ್.ಪಿ., ಪೆರಾಬೆಗೆ ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ರಾಮಕುಂಜಕ್ಕೆ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿದ್ಯಾಧರ, ಕೊಯಿಲಕ್ಕೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಶಿಕ್ಷಕ ದೇವಿಪ್ರಸಾದ್, ಆಲಂಕಾರಿಗೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಸಲೀಂ ಕೆ.ಪಿ., ಸವಣೂರಿಗೆ ಕಾಣಿಯೂರು ಸರಕಾರಿ ಪ್ರೌಢ ಶಾಲಾ ಸಹಶಿಕ್ಷಕ ಹನುಮಂತ, ಬೆಳಂದೂರಿಗೆ ಕಾಣಿಯೂರು ಸರಕಾರಿ ಪ್ರೌಢ ಶಾಲಾ ಸಹಶಿಕ್ಷಕ ಜಾರ್ಜ್ ಕೆ.ವಿ., ಕಾಣಿಯೂರಿಗೆ ಕಾಣಿಯೂರು ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಪುಂಡರೀಕ ಪೂಜಾರ್, ಎಡಮಂಗಲಕ್ಕೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್ ಟಿ.ಎಸ್., ಬಳ್ಪಕ್ಕೆ ಸುಬ್ರಹ್ಮಣ್ಯ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಗೋವಿಂದ ಎನ್.ಎಸ್., ಸುಬ್ರಹ್ಮಣ್ಯಕ್ಕೆ ಲೋಕೋಪಯೋಗಿ ಇಲಾಖೆ ಕುಕ್ಕೆ ಸುಬ್ರಹ್ಮಣ್ಯ ವಿಶೇಷ ಉಪ ವಿಭಾಗದ ಸಹಾಯಕ ಅಭಿಯಂತರ ಪ್ರಮೋದ್ ಕುಮಾರ್ ಕೆ.ಕೆ.ಯವರನ್ನು ನೇಮಕಗೊಳಿಸಲಾಗಿದೆ.
ವಿಟ್ಲ ಹೋಬಳಿ: ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ವೀರಕಂಬ, ಬೋಳಂತೂರು, ಮಾಣಿ ಗ್ರಾ.ಪಂಗೆ ಆರ್ಡಬ್ಲ್ಯೂಎಸ್ ಬಂಟ್ವಾಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಕೆ ನಾಯ್ಕ್, ಪೆರಾಜೆ, ನೆಟ್ಲಮುಡ್ನೂರು, ಅನಂತಾಡಿ ಗ್ರಾ.ಪಂ.ಗೆ ಬಂಟ್ವಾಳ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋಣಯ್ಯ, ಕೆದಿಲ, ಪೆರ್ನೆ, ಇಡ್ಕಿದು ಗ್ರಾ.ಪಂ.ಗೆ ಬಂಟ್ವಾಳ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪ್ರೀತಂ, ವಿಟ್ಲ ಮುಡ್ನೂರು, ವಿಟ್ಲ ಪಡ್ನೂರು, ಕೊಳ್ನಾಡು ಗ್ರಾ.ಪಂ.ಗೆ ಬಂಟ್ವಾಳ ಕೃಷಿ ಅಧಿಕಾರಿ ನಂದನ್ ಶೆಣೈ, ಸಾಲೆತ್ತೂರು, ಕರೋಪಾಡಿ, ಕನ್ಯಾನ ಗ್ರಾ.ಪಂ.ಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಪೆರುವಾಯಿ, ಮಾಣಿಲ, ಅಳಿಕೆ ಗ್ರಾ.ಪಂ.ಗೆ ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕೇಪು ಹಾಗೂ ಪುಣಚ ಗ್ರಾ.ಪಂ.ಗೆ ಬಂಟ್ವಾಳ ಸಾಮಾಜಿಕ ವಲಯಾರಣ್ಯಾಧಿಕಾರಿ ರವಿ ಕುಮಾರ್ರವರನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ನೇಮಕಗೊಳಿಸಲಾದ ಅಧಿಕಾರಿಗಳು ಆದೇಶದ ಪ್ರತಿ ತಲುಪಿದ ಕೂಡಲೇ ಸೂಚಿಸಲಾಗಿರುವ ಗ್ರಾಮ ಪಂಚಾಯತ್ಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಿ ಸದಸ್ಯರುಗಳಿಗೆ ಸಾಕಷ್ಟು ಕಾಲಾವಕಾಶ ನೀಡಿ ಸಭೆಯ ತಿಳುವಳಿಕೆ ನೋಟೀಸು ಜಾರಿ ಮಾಡಿ ಚುನಾವಣೆಯನ್ನು ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿ ತಹಶೀಲ್ದಾರ್ ಮೂಲಕ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಆದೇಶದಲ್ಲಿ ಸೂಚಿಸಿದ್ದಾರೆ.