ಕೆಯ್ಯೂರು : ಕೆಯ್ಯೂರು,ಕೆದಂಬಾಡಿ ಗ್ರಾಮದ ರಬ್ಬರ್ ಉತ್ಪಾದಕರ ಸಂಘದ ಕೆಯ್ಯೂರು ವಾರ್ಷಿಕ ಮಹಾಸಭೆ ಮತ್ತು ಮಾಹಿತಿ ಶಿಬಿರ ಸನ್ಮಾನ ಕಾರ್ಯಕ್ರಮ ಕೆಯ್ಯೂರು ದೇವಿನಗರ ವಿಶ್ವಚೇತನ ಟವರ್ಸ್ ನಲ್ಲಿ ಜು26ರಂದು ನಡೆಯಿತು.
ಕೆಯ್ಯೂರು -ಕೆದಂಬಾಡಿ ಗ್ರಾಮದ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಎ.ಕೆ. ಜಯರಾಮ ರೈ ಕೆಯ್ಯೂರು ಅಧ್ಯಕ್ಷತೆಯಲ್ಲಿ ವಹಿಸಿದ್ದರು.ಸಂಘದ ಕಾರ್ಯದರ್ಶಿ ಎ.ಶಂಕರ ನಾರಾಯಣ ವಾರ್ಷಿಕ ವರದಿ ವಾಚಿಸಿದರು.22-23 ನೇ ವರ್ಷದ ಲೆಕ್ಕ ಪತ್ರ ಮಂಡನೆ ಹಾಗೂ ಮಂಜೂರಾತಿ ಯನ್ನು ಸಂಘದ ಲೆಕ್ಕ ಪರಿಶೋಧಕ ಎ.ಸದಾಶಿವ ಭಟ್ ಕೆಯ್ಯೂರು ಮಾಹಿತಿ ನೀಡಿದರು.
ಸುಮಾರು 31ವರ್ಷಗಳಿಂದ ಶಿವಮೊಗ್ಗ,ಕುಂದಾಪುರ, ಸುಳ್ಯ, ಪುತ್ತೂರು ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದ ಪ್ರಾದೇಶಿಕ ಕಛೇರಿ ಪುತ್ತೂರು ಉಪರಬ್ಬರ್ ಉತ್ಪಾದನಾ ಆಯುಕ್ತ ಸುರೇಶ.ಡಿ. ಜು 31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದು ಆ ಪ್ರಯುಕ್ತ ಕೆದಂಬಾಡಿ ಕೆಯ್ಯೂರು ರಬ್ಬರ್ ಉತ್ಪಾದಕರ ಸಂಘದ ವತಿಯಿಂದ ಶಾಲು , ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರಬ್ಬರ್ ಕೃಷಿಯ ಬಗ್ಗೆ ಪುತ್ತೂರು ಆಸಿಸ್ಟೆಂಟ್ ಡೆವಲಪ್ಮೆಂಟ್ ಆಪೀಸರ್ ಶೋಭನ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕ ಕಡಮಜಲು ಸುಭಾಸ್ ರೈ, ಬೇಬಿ ಜೋಸೆಪ್ ಮಾಡಾವು, ಬಾಲಕೃಷ್ಣ ಪೂಜಾರಿ ಕೆಂಗುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಬ್ಬರ್ ಕೃಷಿ ಬೆಳೆಗಾರರು ಉಪಸ್ಥಿತರಿದ್ದರು. ಕೆಯ್ಯೂರು, ಕೆದಂಬಾಡಿ ರಬ್ಬರ್ ಉತ್ಪಾದಕ ಸಂಘದ ಉಪಾಧ್ಯಕ್ಷ ರಾಘವ ಗೌಡ ಕೆರೆಮೂಲೆ ಸ್ವಾಗತಿಸಿ, ಸಂಘದ ನಿರ್ದೇಶಕ ವಿಜಯ ಕುಮಾರ್ ರೈ ಕೋರಂಗ ವಂದಿಸಿದರು.